NEWSನಮ್ಮಜಿಲ್ಲೆನಮ್ಮರಾಜ್ಯ

ಮೈಸೂರಿನಲ್ಲೂ ಮುಷ್ಕರ ಬಿಸಿ ತಟ್ಟುತ್ತಿದ್ದು ಸಂಚಾರ ನಿಲ್ಲಿಸಿದ ಬಸ್‌ಗಳು: ಜನರ ಪರದಾಟ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಕರೆ ನೀಡಿರುವ ಮುಷ್ಕರದ ಬಿಸಿ ಮೈಸೂರಿನಲ್ಲೂ ತಟ್ಟಿದ್ದು, ಬೆಂಗಳೂರಿಗೆ ಡ್ಯೂಟಿಗೆ ಬರುವವರು ಮತ್ತಿತರ ಕೆಲಸ ಕಾರ್ಯಗಳಿಗೆ ಹೋಗುವವರು ಪರದಾಡುತ್ತಿದ್ದಾರೆ.

ಇನ್ನು ಇಂದು ಬೆಳಗ್ಗೆ 4 ಗಂಟೆಯಿಂದಲೇ ನಗರದಲ್ಲಿ ಬಸ್‌ ಸಂಚಾರ ಸ್ತಬ್ಧವಾಗಿವೆ. ಹೀಗಾಗಿ ಬಸ್‌ಗಳನ್ನು ಯಥಾಸ್ಥಿತಿಯಲ್ಲಿ ಓಡಾಡುತ್ತವಾ ಇಲ್ಲವೇ ಎಂಬ ಗೊಂದಲದಲ್ಲಿ ಬಸ್‌ ನಿಲ್ದಾಣದಲ್ಲಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಒಂದು ಕಡೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗಲೇ ಬೇಕು ಎಂದು ಕೆಲ ನೌಕರರು ಬಸ್‌ ಓಡಿಸುವುದಕ್ಕೆ ಮುಂದಾಗಿದ್ದಾರೆ. ಅದು ಕೇವಲ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಮುಂಜಾನೆ ಇದ್ದವು 6 ಗಂಟೆ ಬಳಿಕ ಆ ಬಸ್‌ಗಳು ಸಿಗುತ್ತಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.

ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ ಬಂದ್‌ ನಿಲ್ಲುವುದಿಲ್ಲ ಶಾಂತಿಯುತವಾಗಿ ಮುಷ್ಕರ ಮಾಡುತ್ತೇವೆ ಎಂದು ಅನಂತ ಸುಬ್ಬರಾವ್‌ ಹೇಳಿದ್ದಾರೆ.

ಒಟ್ಟಾರೆ ಈವರೆಗೂ ಸಾರ್ವಜನಿಕರಿಗೆ ಮೈಸೂರಿನಲ್ಲಿ ಬಸ್‌ ಬಂದ್‌ಬಿಸಿ ಏರುತ್ತಿದೆ. ಅದೇ ರೀತಿ ಇತರ ಭಾಗಗಳಲ್ಲಿ ಬಂದ್‌ ಆಗುತ್ತಿದೆ. ಈನಡುವೆ ಖಾಸಗಿ ಬಸ್‌ಗಳು ಕೂಡ ಕಾಣುತ್ತಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

Megha
the authorMegha

Leave a Reply

error: Content is protected !!