CrimeNEWSನಮ್ಮಜಿಲ್ಲೆನಮ್ಮರಾಜ್ಯ

ಸದನದಲ್ಲಿ ಕೋಲಾಹಲ ಸೃಷ್ಟಿಸಿದ KSRTC ನೌಕರನ ಆತ್ಮಹತ್ಯೆ ಯತ್ನ ಪ್ರಕರಣ- ಕೃಷಿ ಸಚಿವರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೆಲಮಂಗಲ ಘಟಕದ ಚಾಲಕ ಕಂ ನಿರ್ವಾಹಕ ಜಗದೀಶ್ ಅವರ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಸದನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು.

ಈ ನಡುವೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಂದ ಸಚಿವಸ್ಥಾನದಿಂದ ರಾಜೀನಾಮೆ ಪಡೆಯಬೇಕು ಎಂದು ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಇನ್ನು ವರ್ಗಾವಣೆ ಮಾಡಿದ್ದ ಆದೇಶವನ್ನು ಆತ್ಮಹತ್ಯೆ ಯತ್ನ ಮಾಡಿದ ಕೂಡಲೇ ವಾಪಸ್‌ ಪಡೆಯುತ್ತಾರೆ ಎಂದರೆ ಇದು ಸಾರಿಗೆ ಸಚಿವರ ಗಮನಕ್ಕೆ ಬರದೆ ಈ ರೀತಿಯ ವರ್ಗಾವಣೆ ಆಗಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಸದನದ ಗಮನಕ್ಕೆ ತಂದರು.

ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಹಳೆಯ ವಿಷಯವಾದ ಗಣಪತಿ, ಡಿ.ಕೆ.ರವಿ ಅವರ ವಿಚಾರಣಗಳು ಸೌಂಡ್‌ ಮಾಡಿದ್ದವು. ಇದರ ನಡುವೆಯೇ ನಾಗಮಂಗಲದಲ್ಲಿ ಚಾಲಕ ಆತ್ಮಹತ್ಯೆಗೆ ಪ್ರಯತ್ನ ಸಾಮಾನ್ಯ ವಿಚಾರವಲ್ಲ ವರ್ಗಾವಣೆ ಆಗಿದೆ. ನಿರ್ವಾಹಕನಿಗೆ ನಿರೀಕ್ಷೆಯೇ ಇರಲಿಲ್ಲ. ಮೇಲಧಿಕಾರಿಗಳನ್ನು ಏಕೆ ಎಂದು ಕೇಳಿದರೆ ಎಡಬ್ಲ್ಯುಎಸ್‌ ಮಂಜುನಾಥ್‌ ಅವರು ನಮಗೆ ಗೊತ್ತಿಲ್ಲ ಡಿಸಿ ಅವರನ್ನು ಕೇಳಿ ಎಂದು ಹೇಳಿದ್ದಾರೆ.

ಇನ್ನು ಡ್ಯೂಟಿಗೆ ಹೋಗುವುದಕ್ಕೆ ಡ್ಯೂಟಿಕೊಟ್ಟು ಬಳಿಕ ಕೆಲಸಕ್ಕೆ ಹೋಗಬೇಡಿ ಎಂದು ಹೇಳಿ ಇಟಿಎಂ ಅನ್ನು ವಾಪಸ್‌ ತೆಗೆದುಕೊಂಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಸಚಿವರು ಅಧಿಕಾರಿಗಳಿಗೆ ಹೇಳಿದ್ದು, ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಿದ್ದರು, ಅದನ್ನು ತಾಳಲಾರದೆ.= ಮಂತ್ರಿಗಳ ಹೆಸರು ನಮೂದಿಸಿ ಡೆತ್‌ ನೋಟ್‌ ಬರೆದಿದ್ದಾರೆ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸದನದ ಗಮನಕ್ಕೆ ತಂದರು.

ಈ ವೇಳೆ ಕುಮಾರಸ್ವಾಮಿ ಅವರು, ಇದು ಭಾರಿ ಗಂಭೀರ ವಿಚಾರ 48 ಗಂಟೆ ಏನನ್ನು ಹೇಳಲು ಸಾದ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೂ ಈವರೆಗೂ ಎಫ್‌ಐಆರ್‌ ಕೂಡ ಆಗಿಲ್ಲ. ಸರ್ಕಾರ, ಪೊಲೀಸ್‌ ಏನು ಮಾಡುತ್ತಿದೆ ಎಂದು ಕಿಡಿಕಾರಿದರು.

ಇದು ಗಂಭೀರ ವಿಚಾರವಾಗಿದೆ. ಆದರೂ ಕೂಡ ಇನ್ನು ಎಫ್‌ಐಆರ್‌ ಹಾಕಿಲ್ಲ. ಇದು ಮುಚ್ಚಾಕುವ ಪ್ರಯತ್ನ ನಡೆಯುತ್ತಿದೆ ಮತ್ತು ಅವನ ಜೀವ ರಕ್ಷಣೆಗೆ ಏನು ಬೇಕು ಅದನ್ನು ಮಾಡಬೇಕು. ಸಚಿವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು ಎಂದು ಬೊಮ್ಮಾಯಿ ಅವರು ಒತ್ತಾಯಿಸಿದರು.

ಇನ್ನು ಈ ವಿಚಾರ ತನಿಖೆ ಮಾಡಬೇಕು. ಚೆಲುವರಾಯ ಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟಹಿಡಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಸಭಾಧ್ಯಕರಾದ ಯು.ಟಿ.ಖಾದರ್‌ ಎಲ್ಲರ ವಿರುದ್ಧ ಗರಂ ಆದರು.

ಕುಮಾರಸ್ವಾಮಿ ಅವರ ಫೆನ್‌ಡ್ರೈ ಹೆಳಿಕೆಯ ಬಗ್ಗೆ ತಿರುಗಿದ ವಿಷಯದ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಮೊದಲು ಫೆನ್‌ಡ್ರೈ ಕೊಡಿ ಎಂದು ಕೇಳಿದರು. ಕುಮಾರಸ್ವಾಮಿ ಅವರು ನಾನು ಕೊಟ್ಟರೆ ಆ ಮಂತ್ರಿಯಿಂದ ರಾಜೀನಾಮೆ ಪಡೆಯಬೇಕು ಎಂದು ತಿರುಗೇಟು ನೀಡಿದರು.

ಇದರಿಂದ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು. ಈ ನಡುವೆ ನಾಗಮಂಗಲ ಸಾರಿಗೆ ಘಟಕದ ಚಾಲಕನ ವಿಷಯವೇ ಕವಲು ದಾರಿಯಲ್ಲಿ ಸಾಗಿತು.

ಒಂದು ಹತ್ತಕ್ಕೆ ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತ ಸದನದ ಬಾವಿಗಳಿಯುತ್ತಿದ್ದಂತೆ ಸಭಾಧ್ಯಕ್ಷರು ಸದನವನ್ನು 2 ಗಂಟೆಗೆ ಮುಂದೂಡಿದರು.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...