KSRTC ನೌಕರರ ಸಮಸ್ತ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ದುಮುಕುವ ಕಾಲ ಸನ್ನಿಹಿತ: ಸಿಎಂ ನಿರಂಕುಶ ಪ್ರಭುತ್ವಕ್ಕೆ ಬೀಳಲಿದೆ ಅಂಕುಶ!- ಗುಡುಗಿದ ಶರ್ಮಾಜಿ
- ಸಾರಿಗೆ ನೌಕರರ ಒಕ್ಕೂಟ ಹಾಗೂ ಜಂಟಿ ಕ್ರಿಯಾ ಸಮಿತಿ ಒಂದಾಗಿ ಹೋರಾಟ ಮಾಡಲು ಶರ್ಮಾಜಿ ನೇತೃತ್ವ
- ಈ ಜನವರಿ ಕೊನೆ ವಾರದಲ್ಲಿ ಆಗಬಹುದು ಸಾರಿಗೆ ನೌಕರರ ಬೃಹತ್ ಮುಷ್ಕರ
- ಸರ್ಕಾರ ಎಚ್ಚತ್ತುಕೊಳ್ಳಲು ಶರ್ಮಾಜಿ ಆಗ್ರಹ, ಸಿಎಂ ನಡೆಗೆ ಭಾರಿ ಬೇಸರ
- ನಾಡಿನ ಸಮಸ್ತ ಜನತೆ ನಮಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದ ಶರ್ಮಾಜಿ
ಹುಬ್ಬಳ್ಳಿ: ಸಾರಿಗೆ ನೌಕರರು ಅವರ ಹಕ್ಕನ್ನು ಕೇಳದಂತೆ 6 ತಿಂಗಳ ಕಾಲ ಮುಷ್ಕರವನ್ನು ನಿಷೇಧಿಸಿದೆಯಲ್ಲ ಈ ಸರ್ಕಾರ ಇದು ನಿರಂಕುಶ ಸರ್ಕಾರವೇ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ರಾಜ್ಯಧ್ಯಕ್ಷ ಡಾ.ಕೆ.ಎಸ್.ಶರ್ಮಾ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಸಭೆಯಲ್ಲಿ ಅವರು ಮಾತನಾಡಿ, ಮುಂದಿನ ಹೋರಾಟಕ್ಕೆ ಸಮಸ್ತ ಸಾರಿಗೆ ನೌಕರರ ಸಂಘಟನೆಗಳು ಒಂದಾಗಬೇಕು. ಇದು ನಿಮ್ಮ ಕರ್ತವ್ಯ ಇದನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದರು.
ಇನ್ನು ನಮಗೆ 38 ತಿಂಗಳ ವೇತನ ಹಿಂಬಾಕಿ ಕೊಡಲೇಬೇಕು. ಇದನ್ನು ಯಾವುದೇ ಕಾರಣಕ್ಕೂ ಬಿಡುವುದುಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಯಾಗಬೇಕಿರುವ ವೇತನ ಹೆಚ್ಚಳವನ್ನು ಮಾಡಲೇಬೇಕು ಇದನ್ನೂ ನಾವು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಿದ್ದಾರೆ.
ಇನ್ನು ಒಕ್ಕೂಟ ಮತ್ತು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಮ್ಮ ವೈಯಕ್ತಿಕ ದ್ವೇಷವನ್ನು ಬಿಟ್ಟು ಒಗ್ಗಟ್ಟಾಗಬೇಕು. ಈ ಮೂಲಕ ಸರ್ಕಾರ ಈ ಹಿಂದೆ 1988ವರೆಗೆ ಏನು ಇತ್ತು ವೇತನ ಒಪ್ಪಂದ ಅದೇರೀತಿ ಅದನ್ನು ಮಾಡಲೇಬೇಕು. ಅದನ್ನು ಬಿಟ್ಟು ಸರ್ಕಾರ ಏಕಾಏಕಿ ತಮಗೆ ಇಷ್ಟ ಬಂದಷ್ಟು ವೇತನ ಹೆಚ್ಚಳ ಮಾಡಿ ಬಿಡುವಂತಿಲ್ಲ. ಹೀಗೆ ಮಾಡುವುದಕ್ಕೆ ನಾವು ಬಿಡಬಾರದು ಎಂದು ಸಲಹೆ ನೀಡಿದ್ದಾರೆ.
ಇವತ್ತು ಸಾರಿಗೆ ನೌಕರರು ಮುಷ್ಕರ ಮಾಡಿದರೆ ಇಡೀ ಶಕ್ತಿಯೋಜನೆ ಹಳ್ಳಹಿಡಿಯುತ್ತದೆ. ಹೀಗೆ ಆದರೆ ಸರ್ಕಾರ ಧೂಳಿಪಟವಾಗುತ್ತದೆ, ಇದನ್ನು ನಾವು ಮಾಡಬೇಕಾದರೆ ಒಗ್ಗಟ್ಟಾಗಬೇಕು. ಇದಕ್ಕೆ ನಾವು ಒಂದಾಗೋದು ಬಹಳ ಮುಖ್ಯ ಎಂದು ತಿಳಿಸಿದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರೆ ನೀವು ನೆನಪಿಟ್ಟಿಕೊಳ್ಳಿ ನೌಕರರು ಬೀದಿಗಿಳಿದರೆ ಮುಂದಿನ ನಿಮ್ಮ ಚುನಾವಣೆ ದೃಷ್ಟಯಿಂದ ಜಾರಿಗೆ ತಂದಿರುವ ನಿಮ್ಮ ಶಕ್ತಿ ಯೋಜನೆ ದಾರಿ ತಪ್ಪಲಿದೆ. ಆಗ ಸರ್ಕಾರಕ್ಕೆ ಭಾರಿ ಹೊಡೆತ ಬೀಳುತ್ತದೆ ಇದನ್ನು ಅರಿತು ಕೂಡಲೇ ನೌಕರರಿಗೆ ಸಿಗಬೇಕಿರುವುದನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಸಾರಿಗೆ ನೌಕರರ ಮುಖಂಡರು ಕೂಡ ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಒಂದಾಗುವುದು ಈ ಕಾಲಘಟದಲ್ಲಿ ಬಹಳ ಮುಖ್ಯವಾಗಿದೆ. ಜತೆಗೆ ನಮ್ಮ ಕರ್ತವ್ಯ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇದನ್ನು ನಾನು ಬಹಳ ಗಂಭೀರವಾಗಿ ಹೇಳುತ್ತಿದ್ದೇನೆ. ಎಲ್ಲರೂ ಅರ್ಥ ಮಾಡಿಕೊಂಡು ನೌಕರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಅಲ್ಲದೆ ರಾಜ್ಯದಲ್ಲಿ ಸಾರಿಗೆ ನೌಕರರಿಗೆ ಹೇರುತ್ತಿರುವ ನಿರಂಕುಶ ಪ್ರಭುತ್ವವನ್ನು ನಾವು ಮೆಟ್ಟಿನಿಲ್ಲುವ ಕಾಲ ಬಂದಿದೆ. ಇದಕ್ಕೆ ನಾವು ಸಿದ್ಧರಾಗಬೇಕು, ಹೀಗಾಗಿ ನೌಕರರು ಕೂಡ ಬಸ್ನಲ್ಲಿ ಪ್ರಯಾಣಿಸುವ ಪ್ರತಿ ಮಹಿಳೆಯರಿಂದಲೂ ಸಹಿ ಸಗ್ರಹಿಸಿ ಅದನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡೋಣ ಇದರಿಂದ ಸರ್ಕಾರಕ್ಕೆ ಬಿಸಿ ಮುಟ್ಟುತದೆ ಅಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹೋದರೆ ಇಡೀ ಸಾರಿಗೆ ವ್ಯವಸ್ಥೆ ಸ್ತಬ್ದವಾಗಿ ಸರ್ಕಾರ ಅಲುಗಾಡುತ್ತದೆ ಎಂದು ಹೇಳಿದರು.
ಒಟ್ಟಾರೆ ಸರ್ಕಾರ ಜಂಟಿ ಮತ್ತು ಒಕ್ಕೂಟ ಎರಡನ್ನು ಹಿಬ್ಬಾಗಿ ಲಾಭ ಪಡೆಯುತ್ತಿರುವುದಕ್ಕೆ ಬ್ರೇಕ್ ಬೀಳುವ ಸಮಯ ಬಂದಿದ್ದು ಅದು 92ರ ಹರೆಯದ ನವಯುವಕರಂತೆ ಈಗಲೂ ಸಭೆಗೆ ಹಾಜರಾಗಿ ಗುಡುತ್ತಿರುವ ಶರ್ಮಾಜಿ ಅವರ ಮೂಲಕ ಮೊಳಗುತ್ತಿರುವುದು ನೌಕರರ ಮೊಗದಲ್ಲಿ ಸ್ವಲ್ಪ ಮಂದಹಾಸ ಮೂಡಿಸುತ್ತಿದೆ. ಇದು ಇನ್ನಷ್ಟು ಹೆಚ್ಚಾಗಲು ಎಲರೂ ಒಟ್ಟಿಗೆ ಬಂದು ಹೋರಾಟಕ್ಕೆ ಕರೆ ನೀಡುವ ಕೆಲಸ ಕೂಡ ಅತೀ ಶೀಘ್ರದಲ್ಲೇ ಆಗಲಿದೆ ಎಂಬ ಭರವಸೆಯನ್ನು ನೌಕರರು ಹೊಂದಿದ್ದಾರೆ.
Related












