ಬಸ್‌ಗಳಿಗೆ ಆಯುಧ ಪೂಜೆ ಹಬ್ಬಕ್ಕೆ ಪೂಜೆ ಸಲ್ಲಿಸಲು ಬೇಕಾದಷ್ಟು ಹಣ ಕೊಡಲಾರದಷ್ಟು ಬಡವಾಯಿತೆ ಸಾರಿಗೆ ಇಲಾಖೆ !


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಿಗೆ ಆಯುಧ ಪೂಜೆ ಹಬ್ಬಕ್ಕೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಒಂದು ಬಸ್‌ಗೆ ಕೇವಲ 150 ರೂ. ಹಣ ಬಿಡುಗಡೆ ಮಾಡಲಾಗಿದ್ದು, ಈ ಪ್ರತಿ ಬಸ್‌ಗೆ ಬಿಡುಗಡೆ ಮಾಡಿರುವ 150 ರೂ. ಯಾವುದಕ್ಕೆ ಸಾಲುತ್ತದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು! ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಸಾರಿಗೆ ಇಲಾಖೆಯು ಪ್ರತಿ ಬಸ್, ಇಲಾಖಾ ವಾಹನಕ್ಕೆ ಹಣ ಬಿಡುಗಡೆ ಮಾಡಲಿದೆ. ಈ ಬಾರಿ ಕೇವಲ 150 ರೂ. ಬಿಡುಗಡೆ ಮಾಡಿದೆ. ಇದಕ್ಕೆ ಸಿಬ್ಬಂದಿ ಭಾರಿ ಅಸಮಾಧಾನ ಹೊರಹಾಕಿದ್ದಾರೆ.
ಹಬ್ಬದ ದಿನಗಳಲ್ಲಿ ಹೂ-ಹಣ್ಣು, ಹಾರ ಎಲ್ಲದರ ಬೆಲೆಯೂ ಏರಿಕೆ ಆಗುವುದು ಸಾಮಾನ್ಯ. ಒಂದು ಮಾರು ಹೂವಿಗೇ ಹಬ್ಬದಲ್ಲಿ 100 ರೂ. ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.
ವಿಭಾಗೀಯ ಕಾರ್ಯಾಗಾರಕ್ಕೆ 2000 ರೂ. ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂ. ಹಣವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕೂ ನಿಗಮಗಳಿಗೆ ಒಂದು ಬಸ್‌ಗೆ 150 ರೂ. ಸಿಗಲಿದೆ. ಇದುಸಾಲುವುದಿಲ್ಲ. ಹೀಗಾಗಿ ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದು ಪ್ರತಿವರ್ಷವು ನಡೆಯುತ್ತಲೇ ಇರುತ್ತದೆ. ಸಂಸ್ಥೆಗೆ ಆದಾಯದ ಮೂಲವಾಗಿರುವ ಬಸ್‌ಗಳಿಗೆ ಕನಿಷ್ಠಪಕ್ಷ 500 ರೂಪಾಯಿಯನ್ನಾದರೂ ಖರ್ಚು ಮಾಡುವುದಿಲ್ಲ ಎಂದರೆ ಹೇಗೆ. ಈ ಅಧಿಕಾರಿಗಳು ತಮ್ಮ ಕಾರುಗಳಿಗೆ 150 ರೂಪಾಯಿ ಖರ್ಚನ್ನಷ್ಟೇ ಮಾಡಿ ಪೂಜೆ ಸಲ್ಲಿಸುತ್ತಾರೆ ಎಂದು ಸಾಮಾನ್ಯ ಜನರೆ ಪ್ರಶ್ನಿಸುತ್ತಿದ್ದಾರೆ.
Related
