ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಲ್ಲ, ವಾಣಿಜ್ಯ ಸಿಲಿಂಡರ್ ಸಮಸ್ಯೆ ಮಾತ್ರ ಆಗುತ್ತಿದೆ: ಆಹಾರ ಸಚಿವ ಮುನಿಯಪ್ಪ

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದ್ದು ಅರಬ್ ರಾಷ್ಟ್ರಗಳಾದ ಯುಎಸ್ಎ, ಗಲ್ಫ್, ರಷ್ಯಾದ ದೇಶಗಳಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಕಾರಣದಿಂದ ಅನಿಲದ ವೆಸೆಲ್ (ಶಿಪ್ ಗಳಿಗೆ) ಹಾನಿ ಉಂಟಾದ ಹಿನ್ನೆಲೆಯಲ್ಲಿ ನಮಗೆ ಅನಿಲ ಸಮಸ್ಯೆ ಉಂಟಾಗಿದ್ದು ಗ್ರಾಹಕರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.

ತಮ್ಮ ನೇತೃತ್ವದಲ್ಲಿಂದು ವಸಂತನಗರದ ಆಹಾರ ಭವನದಲ್ಲಿ IOC ,BPC,HPC,GAILನ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವರು ಮಾತನಾಡಿದರು.
ಸಾಮಾನ್ಯವಾಗಿ ಜನರು ಉಪಯೋಗಿಸುವ ಡೊಮೆಸ್ಟಿಕ್ ಗ್ಯಾಸ್ ಮತ್ತು ಕಮರ್ಷಿಯಲ್ ಗ್ಯಾಸ್ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸುಮಾರು 1000 ಮೆಟ್ರಿಕ್ ಟನ್ ಅಂದ್ರೆ ಒಂದು ದಿನಕ್ಕೆ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ಸ್ (19 kg) ಬೇಕಾಗುತ್ತದೆ. ಡೊಮೆಸ್ಟಿಕ್ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಅಂದ್ರೆ ದಿನಕ್ಕೆ ಸುಮಾರು 3,50,000 ಸಿಲಿಂಡರ್ಸ್ (14.2 kg) ಬೇಕಾಗುತ್ತದೆ. ಇದು ಕರ್ನಾಟಕ ರಾಜ್ಯದ ಪ್ರತಿ ದಿನದ ಅವಶ್ಯಕತೆಯಾಗಿದೆ.
ಭಾರತದಲ್ಲಿ ಸುಮಾರು 30% ಮಾತ್ರ ಉತ್ಪಾದನೆ ಇದೆ. ಉಳಿದ 60 ರಿಂದ 70% ನಾವು ಆಮದು ಮಾಡಿಕೊಳ್ತಾ ಇದ್ದೀವಿ — ಅಮೆರಿಕ, ಗಲ್ಫ್ ಅರೇಬಿಯನ್ ಮತ್ತು ರಷ್ಯಾ ದೇಶಗಳಿಂದ ಆಮದಾಗುತ್ತದೆ. ಈಗ ಯುದ್ಧದ ಪರಿಸ್ಥಿತಿಯಿಂದ ವೆಸಲ್ಸ್ ಬರೋದು ಸ್ವಲ್ಪ ತಡವಾಗುತ್ತಿದೆ. ಆದರೂ ಜನರು ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಕುಟುಂಬದ ಬಳಕೆಗೆ 25 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ಹಳ್ಳಿಗಳಾಗಲಿ ನಗರದಲ್ಲಿರಲಿ ಜನರು ಮಿತವಾಗಿ ಗ್ಯಾಸ್ ಉಪಯೋಗಿಸಬೇಕು. ತೀರಾ ಅವಶ್ಯಕತೆ ಇದ್ದದ್ದನ್ನು ಮಾತ್ರ ಬಳಸಬೇಕು. ಆತಂಕಪಟ್ಟು ಗ್ರಾಹಕರು ಹೆಚ್ಚು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಆಯಿಲ್ ಕಂಪನಿಗಳ ಜತೆ ಸಹಕರಿಸಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಕಮರ್ಷಿಯಲ್ ಬಳಕೆಯಲ್ಲಿ ಸ್ವಲ್ಪ ಕಷ್ಟವಾಗಬಹುದು ಯಾಕಂದ್ರೆ ಮೊದಲು ಮನೆ ಬಳಕೆಗೆ ಆದ್ಯತೆ ನೀಡಿ ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಅತ್ಯಂತ ಹೆಚ್ಚು ಆದ್ಯತೆ ಮೇರೆಗೆ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಸರಬರಾಜಿನಲ್ಲಿ ವ್ಯತೆಯಾಗದಂತೆ ನೋಡಿಕೊಂಡು ನಂತರ ಹೋಟೆಲ್ ಕಲ್ಯಾಣ ಮಂಟಪಗಳಿಗೆ ಕಷ್ಟವಿದ್ದು ಆದ್ಯತೆಯ ಮೇರೆಗೆ ಸಿಲಿಂಡರ್ ಗಳನ್ನು ವಿತರಿಸಲಾಗುವುದು ಎಂದರು.
ಈ ಕಠಿಣ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರದ ಕಾರ್ಯದರ್ಶಿ ಅಂತದಲ್ಲಿ ಪ್ರತಿವಾರ ಆಯಿಲ್ ಕಂಪನಿಗಳ ಜೊತೆ ಸಭೆ ನಡೆಯಲು ಸೂಚಿಸಿದ್ದು ಜನರು ಆತಂಕಪಡದೆ ಮಿತವಾಗಿ ಉಪಯೋಗಿಸಿದರೆ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ ಎಂದರು.
1966 -1967ರಲ್ಲಿ ಲಾಲಬಹದ್ದೂರ್ ಶಾಸ್ತ್ರಿ ರವರು ಅಂದಿನ ಪ್ರಧಾನ ಮಂತ್ರಿ ಇದ್ದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಅಭಾವ ಉಂಟಾಗಿತ್ತು. ಆಗ ನಾನು 10ನೇ ತರಗತಿ ಒದುತ್ತಿದ್ದೆ ವಿದೇಶಗಳಿಂದ ಮೆಕ್ಕೆಜೋಳ ವಿದೇಶಗಳಿಂದ ಆಮದು ಮಾಡುವ ಸಂದರ್ಭದಲ್ಲಿ ನಾವು ಕೊಡದಿದ್ದರೆ ಭಾರತ ದೇಶಕ್ಕೆ ಸಂಕಷ್ಟ ವಾಗುತ್ತೆ ಎಂದಾಗ ಅವರ ಮನಸ್ಸಿಗೆ ನೊವಾಗಿ ಒಂದು ನಿರ್ಧಾರಕ್ಕೆ ಬಂದರು ಅಂದು ವಾರದಲ್ಲಿ ಒಂದು ದಿನದಲ್ಲಿ ಒಂದು ಒತ್ತಿನ ಊಟವನ್ನು ಮಾಡದೆ ನಿಲ್ಲಿಸಲು ಯೋಚನನಿಲ್ಲಿಸಲು ಯೊಜನೆ ಮಾಡಿದರು ನಂತರ ವಿದ್ಯುತ್ ಸಮಸ್ಯೆಗೆ ರಾತ್ರಿ ಕರೆಂಟ್ ನಿಲ್ಲಿಸಲು ಜನ ಸಿದ್ದರಾಗಿ ಈ ತರ ಅಂತಹ ಸಂದರ್ಭದಲ್ಲಿ ನಾವೆಲ್ಲರು ಒಟ್ಟಾಗಿ ಕ್ರಮವಹಿಸಿದರಿಂದ ಸಮಸ್ಯೆಗಳನ್ನು ಸರಿಪಡಿಸಲು ಸಹಕಾರಿಯಾಗಿದೆ. ಹಾಗೆಯೇ ತಾವು ಈ ಸಂಕಷ್ಟದ ಸಮಯದಲ್ಲಿ ಅಡಿಗೆ ಅನಿಲವನ್ನು ಮಿತವಾಗಿ ಅವಶ್ಯಕತೆ ಇದ್ದರೆ ಮಾತ್ರ ಬಳಸಬೇಕು ಎಂದು ಗ್ರಾಹಕರಲ್ಲಿ ಮನವಿ ಮಾಡಿದರು.
ನಮ್ಮ ದೇಶದಲ್ಲಿ ದಿನಸಿ ಆಹಾರ ಸಾಮಗ್ರಿಗಳ ಎರಡು ವರ್ಷಗಳಿಗೆ ಆಗುವಷ್ಟು ಶೇಖರಣೆ ಮಾಡಿದ್ದು ಅಕ್ಕಿ, ಗೋದಿ ಸಕ್ಕರೆ, ಸಾಂಬರು ಪದಾರ್ಥಗಳನ್ನು ನಾವು ವಿದೇಶಗಳಿಗೆ ರಪ್ತು ಮಾಡುವಷ್ಟು ಬಲಿಷ್ಠ ರಾಷ್ಟ್ರವಾಗಿದೆ. ಆದರೆ ನಮ್ಮಲ್ಲಿ ಅನಿಲ ಉತ್ಪನ್ನಗಳ ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದು ನಮ್ಮ ಗ್ರಾಹಕರು ಹೆಚ್ಚಾಗಿ ಗ್ಯಾಸ್ ಅನಿಲದ ಉಪಯೋಗ ಮಾಡುತ್ತಿದ್ದಾರೆ. ಹಸಿರು ಇಂಧನಗಳ ಬಳಕೆ ಹೆಚ್ಚಾಗಬೇಕು ನಮ್ಮ ದೇಶ ಎಲ್ಲ ರಂಗಗಲ್ಲಿ ಅಂದರೆ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆಹಾರ ಉತ್ಪಾದನೆ, ರಕ್ಷಣಾ ಕ್ಷೇತ್ರದಲ್ಲಿ ಎಲ್ಲಾರಂಗಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ ಎಂದರು.
ತಾವು ಅಡಿಕೆ ಮಾಡುವ ಸಂದರ್ಭದಲ್ಲಿ ಮಿತವಾಗಿ ಅಗತ್ಯವಿದ್ದಷ್ಟೆ ಬಳಸಲು ಈ ಮೂಲಕ ಗ್ರಾಹಕರಿಗೆ ಮನವಿ ಮಾಡಿದರು. ಮಿತ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಗ್ಯಾಸ್ ಉತ್ಪನ್ನ ಗಳ ಬಳಕೆ ಮಿತವಾಗಿರಲಿ ನಾವು ಮಿತ ಬಳಕೆಯಿಂದ ಅನಿಲ ಉಳಿಸಲು ಸಹಕಾರಿಯಾಗಲಿದೆ. ಒಂದು ಸಿಲಿಂಡರ್ ಒಂದು ಕುಟುಂಬದ ನಾಲ್ಕು ಸದಸ್ಯರಿದ್ದರೆ 21 ದಿನಗಳ ಬಳಕೆಗೆ ಅನುಕೂಲವಾಗಲಿದ್ದು ಅದು 14 ಕೆಜಿ ಗ್ಯಾಸ್ ಹೊಂದಿರುತ್ತದೆ. ಇಲಾಖೆಯ ವತಿಯಿಂದ ಅನಿಲ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತದೆ ಗ್ರಾಹಕರು ಯಾವುದೆ ಗೊಂದಲಕ್ಕೆ ಒಳಗಾಗಬಾರು ಎಂದು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್,ದಿವ್ಯ, ಮುರಳಿ ಚಾರ್,ಸುಬ್ರತ್ ಚಟರ್ಜಿ,ರಾಜೇಶ್ ಸಿಂಗ್,ಸಂಜಯ್ ಕುಮಾರ್ ಸಿಂಗ್,ಪ್ರಣಯ ದೇವನಾಗನ್,ರವಿಕುಮಾರ್ ತಂಡಲ್,ಪ್ರಸೂನ್ ಮಾಲಿ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Related









