NEWSನಮ್ಮಜಿಲ್ಲೆನಮ್ಮರಾಜ್ಯ

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಡ್ಯೂಟಿ ಮುಗಿಸಿ ಬಂದ ಕಂಡಕ್ಟರ್‌ಗಳು ಘಟಕದಲ್ಲಿ ಸಹಿ ಪಡೆದು ಹಣ ಪಾವತಿಸಬೇಕೆಂಬ ನಿಯಮವಿಲ್ಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಘಟಕಗಳಲ್ಲಿ ನಿರ್ವಾಹಕರು ಕರ್ತವ್ಯ ಮುಗಿಸಿ ಬಂದಾಗ ಘಟಕ ವ್ಯವಸ್ಥಾಪಕರು ಹಾಗೂ ಎಟಿಎಸ್‌ ಮತ್ತು ಎಟಿಐ ಇವರಿಂದ ಮಾರ್ಗ ಪ್ರತಿಯ ಮೇಲೆ ಸಹಿ ಹಾಕಿಸಿಕೊಂಡ ಬಳಿಕ ಲೆಕ್ಕಪತ್ರ ಶಾಖೆಯಲ್ಲಿ ಹಣ ಸಂದಾಯ ಮಾಡಬಾರದೆಂಬ ನಿಯಮವಿಲ್ಲ ಎಂದು ಸಾರಿಗೆ ಕೇಂದ್ರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.

4 ಸಾರಿಗೆ ನಿಗಮಗಳ ಬಹುತೇಕ ಎಲ್ಲ ಘಟಕಗಳಲ್ಲೂ ನಿರ್ವಾಹಕರು ಕರ್ತವ್ಯ ಮುಗಿಸಿ ಬಂದಾಗ ಘಟಕ ವ್ಯವಸ್ಥಾಪಕರು ಅಥವಾ ಎಟಿಎಸ್‌ ಅಥವಾ ಎಟಿಐ ಇವರಿಂದ ಮಾರ್ಗ ಪ್ರತಿಯ ಮೇಲೆ ಸಹಿ ಹಾಕಿಸಿಕೊಂಡ ಬಳಿಕ ಕಂಡಕ್ಟರ್‌ಗಳು ಲೆಕ್ಕಪತ್ರ ಶಾಖೆಯಲ್ಲಿ ಹಣ ಪಾವತಿ ಮಾಡಬೇಕು ಎಂದು ನಿಯಮಬಾಹಿರ ನಡೆಯನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ.

ಒಂದು ಈ ಮೂವರಲ್ಲಿ ಯಾರಾದರೊಬ್ಬರಿಂದ ಸಹಿ ಮಾಡಿಸಿಲ್ಲ ಎಂದರೆ ಅಂಥ ನೌಕರರನ್ನು ಆರೋಪಿಯ ಸ್ಥಾನದಲ್ಲಿ ನೋಡುವುದಲ್ಲದೆ, ಘಟಕದಲ್ಲಿ ಅಧಿಕಾರಿಗಳು ದರ್ಪಮೆರೆಯುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಕಳೆದ 2022ರ ಜುಲೈ 29ರಂದೆ ಆರ್‌ಟಿಐ ಅಡಿ ಅರ್ಜಿ ಹಾಕಿ ಮಾತಿಪಡೆದುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಾವು ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಈ ಕಚೇರಿಯಲ್ಲಿ ನಿರ್ದಿಷ್ಟವಾದ ಮಾಹಿತಿ/ ದಾಖಲಾತಿ ಇಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಆದರೂ ಈಗಲೂ KSRTC, BMTC, KKRTC ಹಾಗೂ NWKRTC ಸಂಸ್ಥೆಯ ಕೆಲ ಡಿಪೋಗಳಲ್ಲಿ ನಮ್ಮ ಸಹಿ ಮಾಡಿಸಿಕೊಂಡೇ ಹೋಗಬೇಕು ಎಂದು ನೌಕರರಿಗೆ ದಮ್ಕಿಹಾಕುತ್ತಿದ್ದಾರೆ.

ಕೇಂದ್ರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಕೊಡ ಮಾಹಿತಿ ಏನು?: ಈ ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಅಧಿನಿಯಮ-2005 ರನ್ವಯ ತಾವು ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಸಂಚಾರ (ಕಾರ್ಯಾಚರಣೆ) ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ.

ಕೋರಿರುವ ಮಾಹಿತಿ: KSRTC ಸಂಸ್ಥೆಯ ಎಲ್ಲ ಘಟಕಗಳಲ್ಲಿ ನಿರ್ವಾಹಕರು ಕರ್ತವ್ಯ ಮುಗಿಸಿ ಹಿಂದಿರುಗಿ ಬಂದಾಗ “ಇಪಿಕೆಎಂ-25 ರೂಪಾಯಿ ಕಡಿಮೆ ಬಂದ ನಿರ್ವಾಹಕರಿಗೆ, ಘಟಕದಲ್ಲಿ ಇಟ್ಟಿರುವ ಒಂದು ಪುಸ್ತಕದಲ್ಲಿ ಈ ವಿಷಯವಾಗಿ ಸಾರಾಂಶ ಬರೆದು, ಘಟಕ ವ್ಯವಸ್ಥಾಪಕರು ಹಾಗೂ ಎಟಿಎಸ್‌ ಮತ್ತು ಎಟಿಐ ಬರುವವರೆಗೂ ಕಾಯ್ದು ಮಾರ್ಗ ಪ್ರತಿಯ ಮೇಲೆ ಅವರ ಸಹಿಯನ್ನು ಹಾಕಿಸಿಕೊಂಡು, ಲೆಕ್ಕಪತ್ರ ಶಾಖೆಯಲ್ಲಿ ಈ ಅಧಿಕಾರಿಗಳ ಸಹಿ ಇಲ್ಲದೆ ಹಣವನ್ನು ಸಂದಾಯ ಮಾಡಬಾರದೆಂಬ ನಿಯಮವನ್ನು ಸರ್ಕಾರದಿಂದ ಅಥವಾ ಸಾರಿಗೆ ಸಂಸ್ಥೆಯಿಂದ ಅಥವಾ ಘಟಕ ವ್ಯವಸ್ಥಾಪಕರಿಂದ ಹೊರಡಿಸಿರುವ ಸುತ್ತೋಲೆಯ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕಾರ ಮಾಹಿತಿ ನೀಡಬೇಕಾಗಿ ಮನವಿ.

Advertisement

ಒದಗಿಸಲಾದ ಮಾಹಿತಿ: ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಈ ಕಚೇರಿಯಲ್ಲಿ (ಶಾಂತಿನಗರದಲ್ಲಿರುವ KSRTC ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ) ನಿರ್ದಿಷ್ಟವಾದ ಮಾಹಿತಿ/ ದಾಖಲಾತಿ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಈ ಮೇಲ್ಕಂಡ ಮಾಹಿತಿ ಬಗ್ಗೆ ಭಾದಿತರಾದಲ್ಲಿ, ಮಾಹಿತಿ ಹಕ್ಕು ಅಧಿನಿಯಮ-2005ರ ನಿಯಮ 19(1) ರನ್ವಯ, ಈ ಪತ್ರ ತಲುಪಿದ 30 ದಿನಗಳೊಳಗಾಗಿ ಮೇಲ್ಮನವಿ ಪ್ರಾಧಿಕಾರಸ್ಥರಿಗೆ ಅಂದರೆ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾ) ಅವರಿಗೆ ಹಾಗೂ ಒಂದನೇ ಅಪೀಲು ಪ್ರಾಧಿಕಾರಿಗಳು, ಕರಾರಸಾ ನಿಮಗ, ಕೇಂದ್ರ ಕಚೇರಿ, ಸಾರಿಗೆ ಭವನ, ಬೆಂಗಳೂರು-560027 ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ ಎಂದೂ ಕೂಡ (ಸಾರ್ವಜನಿಕ ಮಾಹಿತಿ ಅಧಿಕಾರಿ/ ವಿಭಾಗೀಯ ಸಂಚಲನಾಧಿಕಾರಿ ಸಂಚಾರ (ಕಾರ್ಯಾಚರಣೆ) ಇಲಾಖೆ) ತಿಳಿಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!