Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

ಸಂಘ- ಸಂಘಗಳ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು.. ಒಟ್ಟಾರೆ ಸಾರಿಗೆ ನೌಕರರಿಗೆ ಅನುಕೂಲ ಏನು ಅನ್ನೋದು ಮುಖ್ಯ: ಜಂಟಿ ಕ್ರಿಯಾಸಮಿತಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

 ನೀವುಗಳು ಕೂಟ ಕಟ್ಟಿದ ಆರಂಭದಿಂದಲೂ ಈ ರಾಜ್ಯದ ಎಲ್ಲ ಮಠಾಧೀಶರು- ಅಧಿಕಾರದಲ್ಲಿದ್ದ BJP ನಾಯಕರೂ, ವಿಪಕ್ಷದ ರಾಜಕಾರಣಿಗಳು ಎಲ್ಲರನ್ನೂ ಓಲೈಸಿದ್ದು/ ಕಾಲಿಗೆ ಬಿದ್ದದ್ದು/ ಹಾಲಿನ ಅಭಿಷೇಕ ಮಾಡಿದ್ದು/ ದಾವಣಗೆರೆಯೂ ಒಳಗೊಂಡಂತೆ ಸಭೆ ಸಮಾರಂಭ ಮಾಡಿದ್ದು ಎಲ್ಲವನ್ನೂ ಕೂಟದ ಮುಖಂಡರು/ ಕೂಟದ ಅಸಂಖ್ಯಾತ ನೌಕರರು ನೋಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ನೀವು ಶೂನ್ಯದಿಂದ ಸರ್ವವನ್ನು ಸೃಷ್ಟಿಮಾಡುವ ಬಾಬಾಗಳ ರೀತಿಯಲ್ಲಿ ವರ್ತಿಸಬೇಡಿ. 2018-19 ರಿಂದ 2024 ರವರೆಗೆ ಎಲ್ಲವನ್ನೂ ನೋಡಿದ್ದೇವೆ. ನೀವು ಇಷ್ಟೆಲ್ಲಾ ಮಾಡಿ ಅಂತಿಮವಾಗಿ ಮುಷ್ಕರ ನಡೆದರೂ ಸಾರಿಗೆ  ನೌಕರರಿಗೆ  ಒಂದು ಬಿಡಿಗಾಸಿನ ವೇತನ ಸೌಲಭ್ಯಗಳು ಸಿಗಲಿಲ್ಲ. ಬದಲು ಸಾವಿರಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದವು. ಸಾವಿರಾರು ನೌಕರರು ಪಡಬಾರದ ಕಷ್ಟ ಪಟ್ಟರು.

ನೌಕರರನ್ನು ತೆನಾಲಿ ರಾಮಕೃಷ್ಣನ ಬೆಕ್ಕು ಮಾಡಿದ್ದೀರಿ. ನೌಕರರ ಪ್ರಜಾಸತ್ತಾತ್ಮಕ ಚಳವಳಿಗಳು ನಿಷ್ಪ್ರಯೋಜಕ ಅನ್ನುವ ಮನಸ್ಥಿತಿಗೆ ತಂದಿದ್ದೀರಿ. ನೀವು ನಿಮ್ಮ ಸಂಘದ ತೀರ್ಮಾನದ ರೀತಿ ಯಾವುದೇ ಕಾರ್ಯಕ್ರಮ ನಡೆಸಿ. ಆದರೆ ಜಂಟಿ ಕ್ರಿಯಾ ಸಮಿತಿಯನ್ನು ಟೀಕಿಸುವುದನ್ನು ಏಕೆ ಮಾಡುತ್ತೀರಿ?

ನಿಮ್ಮೆಲ್ಲಾ ಘನ ಸಾಧನೆಯ ನಂತರ BJP ಸರ್ಕಾರ ಸಾರಿಗೆ ನೌಕರರಿಗೆ ಉಂಡೆ ನಾಮ ಹಾಕಿ ಹೋಗುವ ಪ್ರಯತ್ನದಲ್ಲಿ ಇತ್ತು. ಇದನ್ನರಿತ ನೌಕರರ ಸಂಘಟನೆಗಳು ಕೂಟವನ್ನು ಒಳಗೊಂಡು ಜಂಟಿ ಸಮಿತಿ ಮಾಡಲು ಪ್ರಯತ್ನಿಸಿದವು. ಕೂಟದ ಮುಖಂಡರು ಜಂಟಿ ಸಮಿತಿ ಜತೆ ಸೇರದೆ ಇದ್ದ ಕಾರಣ ಇತರೆ ಸಂಘಟನೆಗಳು ಜಂಟಿಯಾಗಿ ಸರ್ಕಾರ ಮತ್ತು ಆಡಳಿತ ವರ್ಗಗಳು ಸಾರಿಗೆ ಕಾರ್ಮಿಕರಿಗೆ 1-1-2020 ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ಜುಲೈ- 2022 ರಿಂದ ಚಳವಳಿ ನಡೆಸಿದ ಪರಿಣಾಮ ಶೇ. 15 ವೇತನ ಹೆಚ್ಚಳ ಪಡೆದಿದ್ದೇವೆ.

ನಾವು ನಿಮ್ಮ ರೀತಿ ನಡೆದುಕೊಂಡಿದ್ದರೆ ಲಕ್ಷಾಂತರ ನೌಕರರು  4 ವರ್ಷದ ಒಂದು ಅವಧಿಯ ವೇತನ ಹೆಚ್ಚಳವನ್ನು ಕಳೆದುಕೊಳ್ಳಬೇಕಿತ್ತು. ಇದರಿಂದ ಲಕ್ಷಾಂತರ ಸಾರಿಗೆ ನೌಕರರಿಗೆ ಎಷ್ಷು ಅರ್ಥಿಕ ನಷ್ಟ ಉಂಟಾಗುತ್ತಿತ್ತು ಎಂಬುದರ ಕನಿಷ್ಠ ತಿಳಿವಳಿಕೆ ತಮಗೆ ಇದ್ದಂತೆ ಇಲ್ಲ. ನಿಮ್ಮ ತರಹ ಅಲ್ಲಿ ಸ್ವರ್ಗ ಇದೆ ಅಂತ ತೋರಿಸಿದ್ದರೆ ಸಂಬಳ ಹೆಚ್ಚಳವಾಗುತ್ತಿರಲಿಲ್ಲ. ನೀವು ಸೊಸೈಟಿಯಲ್ಲಿ ಜಯಭೇರಿ ಬಾರಿಸಿ ಅಭ್ಯಂತರವಿಲ್ಲ. ಅದೇ ಎಲ್ಲವೂ ಅಲ್ಲ. ಲಕ್ಷಾಂತರ ನೌಕರರ  ಬದುಕಿನ ಜತೆ ಚೆಲ್ಲಾಟವಾಡಬೇಡಿ.

ಅತ್ಯಂತ ಜವಾಬ್ದಾರಿಯಿಂದ ನೌಕರ  ವರ್ಗದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ. ಸಾರಿಗೆ ನಿಗಮಗಳ ಆಡಳಿತ ವರ್ಗ ಮತ್ತು ಸರ್ಕಾರಗಳು ಕೂಟದ ಮುಷ್ಕರದ ವೇಳೆ ನೌಕರರ  ಮೇಲೆ ಧಮನಕಾರಿ ನೀತಿಗಳನ್ನು ಅನುಸರಿಸಿದವು. ಇನ್ನೂ ಮುಂದೆಯೂ ಇರಲ್ಲ ಅಂತ ಭಾವಿಸಬೇಡಿ.

ಜಂಟಿ ಕ್ರಿಯಾ ಸಮಿತಿಯಿಂದ ಸಾರಿಗೆ ನೌಕರರಿಗೆ  ಕೂಟದವರು ಮತ್ತು ಸರ್ಕಾರವೂ ಸೇರಿ ಉಂಡೆ ನಾಮ ಹಾಕುವುದನ್ನು ತಪ್ಪಿಸಿದ್ದೇವೆ. ನೀವು ಮತ್ತು ನಿಮ್ಮ ಸ್ನೇಹಿತರು ಯಾರಾದರೂ ಆರ್ಥಿಕ ತಜ್ಞರ ಬಳಿ ಹೋಗಿ ವಿಚಾರಿಸಿ. 4 ವರ್ಷದ ಒಂದು ಅವಧಿಯ ಶೇ. 15 ವೇತನ ಹೆಚ್ಚಳ ಕೈ ತಪ್ಪಿದ್ದರೆ ಎಷ್ಟು ನಷ್ಟ ಆಗುತ್ತಿತ್ತು ಅಂತ.

ನಿಮ್ಮ ಕಾರ್ಯ ಯೋಜನೆಗಳನ್ನು ನೌಕರರ  ಮುಂದೆ ಮಂಡಿಸಿ. ಅದು ನಿಮ್ಮ ಸ್ವತಂತ್ರ. ಆದರೆ ಜಂಟಿ ಕ್ರಿಯಾ ಸಮಿತಿಯ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಿ. ಏಕೆಂದರೆ ಆಳುವ ವರ್ಗದ ನೀತಿಗಳನ್ನು ವಿರೋಧಿಸಲು ಇಂದಲ್ಲಾ ನಾಳೆ ನೌಕರ ವರ್ಗಕ್ಕೆ ಜಂಟಿ ಹೋರಾಟಗಳು ಅನಿವಾರ್ಯ.

ಸಂಘ- ಸಂಘಗಳ ನಡುವೆ ಭೀನ್ನ ಅಭಿಪ್ರಾಯಗಳು ಇರಬಹುದು. ಒಟ್ಟಾರೆ ಸಾರಿಗೆ ಕಾರ್ಮಿಕರಿಗೆ ಅನುಕೂಲ ಏನು ಅನ್ನೋದು ಮುಖ್ಯ. ನೌಕರ ವರ್ಗ ಭ್ರಮೆಯ ಆಲೋಚನೆಗಳಿಂದ ಆಳುವ ವರ್ಗಗಳಿಂದ ಸೌಲಭ್ಯಗಳನ್ನು ಪಡೆಯುವುದು ಕಷ್ಟ ಎಂದು ಜಂಟಿ ಕ್ರಿಯಾ ಸಮಿತಿಯ ಕೆಲ ಪದಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...