CrimeNEWSಕೃಷಿ

ಒಂದೂವರೆ ಲಕ್ಷ ರೂ.ಗೂ ಅಧಿಕ ಮೌಲ್ಯದ ಟೊಮೇಟೊ ಕದ್ದು ಖದೀಮರು ಪರಾರಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾಸನ: ಜಿಲ್ಲೆ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೇಟೊ ಕಳ್ಳತನವಾಗಿದೆ. ಐವತ್ತರಿಂದ ಅರವತ್ತು ಬ್ಯಾಗ್‌ನಷ್ಟು ಟೊಮೇಟೊವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ನೂರು ರೂಪಾಯಿಯ ಗಡಿ ದಾಟಿದ ಕೆಂಪುಸುದರಿಯನ್ನು ಎತ್ತಿಕೊಂಡು ಹೋಗುವುದಕ್ಕೆ ಕಳ್ಳರು ಹೊಂಚುಹಾಕಿ ಕದಿಯುವಲ್ಲಿಯೂ ಸಫಲರಾಗಿದ್ದಾರೆ. ಹೌದು! ಟೊಮೇಟೊ ಬೆಲೆ ಗಗನಕ್ಕೇರಿದ್ದು, ಯಾವ ಜಿಲ್ಲೆಗೆ ಹೋದರೂ 100 ರೂಪಾಯಿಗಿಂತ ಕಡಿಮೆ ಇಲ್ಲ. ಹೀಗಾಗಿ ಖದೀಮರು ಟೊಮೇಟೊ ಕಳ್ಳತನಕ್ಕೆ ಮುಂದಾಗಿದ್ದಾರೆ.

ಗೋಣಿ ಸೋಮನಹಳ್ಳಿ ಗ್ರಾಮದ ಧರಣಿ ಎಂಬ ರೈತರೊಬ್ಬರು ತಮ್ಮ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದುರಿಂದ ಒಳ್ಳೆಯ ಲಾಭ ಬರುತ್ತೆ ಎಂಬ ಆಸೆಯಲ್ಲಿದ್ದರು. ಆದರೆ, ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕೆಲ ಕಳ್ಳರು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೇಟೊ ಕಳ್ಳತನ ಮಾಡಿದ್ದಾರೆ.

ಅದು ಇಂದು ಬೆಳಗ್ಗೆ ಧರಣಿ ಅವರು ತಮ್ಮ ಜಮೀನಿಗೆ ಹೋದಾಗ ಟೊಮೇಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷಾಂತರ ಮೌಲ್ಯದ ಟೊಮೇಟೊ ಕಳೆದುಕೊಂಡು ರೈತ ಧರಣಿ ಕಂಗಾಲಾಗಿದ್ದು ಇತ್ತ ಅಳುವುದಕ್ಕೂ ಆಗದೆ ಅತ್ತ ಕಳ್ಳತವಾಗಿರುವುದನ್ನು ಸಹಿಸಿಕೊಳ್ಳುವುದಕ್ಕೂ ಆಗದೆ ತೊಳಲಾಡುತ್ತಿದ್ದಾರೆ. ಹೀಗಾಗಿ ಕಳ್ಳರನ್ನು ಕೂಡಲೇ ಹಿಡಿದು ರೈತ ಧರಣಿ ಅವರಿಗೆ ನೆರವಾಗಬೇಕು ಎಂದು ಪೊಲೀಸರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈರುಳ್ಳಿ ಕದ್ದು ಹಣ ಮಾಡಿದ್ದರು: ಕೆಲ ವರ್ಷದ ಹಿಂದೆ ಈರುಳ್ಳಿ ಬೆಲೆ ಕೂಡ ಇದೇ ರೀತಿ ಏರಿಕೆಯಾಗಿತ್ತು. ಆಗ ಕೂಡ ಖದೀಮರು ಈರುಳ್ಳಿ ಕದ್ದು ಹಣ ಮಾಡಿದ್ದರು. ಅಲ್ಲದೆ ಮದುವೆಗೆ ಬಂದವರು ವರ-ವಧುವಿಗೆ ಈರುಳ್ಳಿ ಗಿಫ್ಟ್ ನೀಡೋದು ಟ್ರೆಂಟ್ ಆಗಿತ್ತು. ರೈತರು ತಾವು ಬೆಳೆದ ಈರುಳ್ಳಿ ಕಾಪಾಡಲು ನಿದ್ದೆ ಇಲ್ಲದೆ ಹಗಲು-ರಾತ್ರಿ ಕಾಯುತ್ತಿದ್ದರು. ಸದ್ಯ ಈಗ ಇದೇ ಪರಿಸ್ಥಿತಿ ಟೊಮೇಟೊಗೆ ಬಂದಿದೆ. 10ರೂ, 20ರೂಪಾಯಿಗೆ ಬರುತ್ತಿದ್ದ ಟೊಮೇಟೊ ಈಗ ನೂರರ ಗಡಿದಾಟಿದೆ. ಹೀಗಾಗಿ ಟೊಮೇಟೊ ರೈತರು ಕಳ್ಳರಿಂದ ತಮ್ಮ ಬೆಳೆ ಕಾಪಾಡಿಕೊಳ್ಳುವಂತಾಗಿದೆ.

ಹಾವೇರಿಯಲ್ಲಿ ಕೆಂಪುಸುಂದರಿಗೆ ಸಿಸಿಟಿವಿ ಕಣ್ಗಾವಲು: ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಮಾರುಕಟ್ಟೆಯಲ್ಲಿ ಕೃಷ್ಣಪ್ಪ ಎಂಬ ವ್ಯಾಪಾರಿಯೊಬ್ಬರು ಮಾರಾಟಕ್ಕೆ ತಂದ ಟೊಮೇಟೊ ಕಳ್ಳತನವಾಗಬಾರದೆಂದು ಸಿಸಿಟಿವಿ ಅಳವಡಿಸಿದ್ದಾರೆ. ತರಕಾರಿ ಖರೀದಿಸಲು ಬರುವ ಗ್ರಾಹಕರು ಕಣ್ತಪ್ಪಿಸಿ ಮೂರು-ನಾಲ್ಕು ಟೊಮೇಟೊಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಸಿಸಿಟಿವಿ ಅಳವಡಿಸಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ