KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ಅಧ್ಯಕ್ಷ ಭರಮಗೌಡ

ಬೆಂಗಳೂರು: ರಾಜ್ಯದಲ್ಲಿರುವ ನಮ್ಮ ಸಾರಿಗೆ ನಿಗಮಗಳ ಅಧಿಕಾರಿಗಳು – ನೌಕರರು ಮತ್ತು ನೌಕರರು – ನೌಕರರಲ್ಲೇ ಒಗ್ಗಟ್ಟಿಲ್ಲ. ಪರಿಣಾಮ ನಾಲ್ಕೂ ನಿಗಮಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹೀಗಾಗಿ ಮೊದಲು ನೀವು ಒಗ್ಗೂಡಿ ಎಲ್ಲವೂ ಸಾಧ್ಯವಾಗಲಿದೆ ಎಂದು NWKRTC ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಕಿವಿ ಮಾತು ಹೇಳಿದರು.
ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರೂ ಒಗ್ಗಟ್ಟಾಗಿದ್ದಿದ್ದರೆ ಯಾವುದೇ ಸಮಸ್ಯೆಗಳು ಉಳಿಯುತ್ತಿರಲಿಲ್ಲ. ಒಬ್ಬರ ಕಾಲು ಒಬ್ಬರು ಎಳೆಯುವುದು ಜತೆಗೆ ಪೊಲೀಸ್ ಪ್ರಕರಣಗಳನ್ನು ಹಾಕುವುದು. ಇದೆಲ್ಲವನ್ನು ನಾನು 8 ತಿಂಗಳಿನಿಂದ ಕಂಡಿದ್ದೀನಿ ಎಂದು ಭಾರಿ ನೋವಿನಿಂದ ಹೇಳುತ್ತಿದ್ದೇವೆ ಎಂದರು.
ಇನ್ನು ಚಾಲನಾ ಸಿಬ್ಬಂದಿಗಳು ಮಾಡದ ತಪ್ಪಿಗೆ ಅಧಿಕಾರಿಗಳು ವಜಾ, ಅಮಾನತು ಮತ್ತು ವರ್ಗಾವಣೆಯಂತ ಶಿಕ್ಷೆ ಕೊಡುತ್ತಿದ್ದಾರೆ. ಇದಕ್ಕೆ ಉದಾ: ಬಸ್ ನಿಲ್ದಾಣ 50 ಮೀಟರ್ ದೂರವಿದ್ದಾಗ ನಿರ್ವಾಹಕರು ಸೀಟಿ ಹೊಡೆಯುತ್ತಾರೆ. ಬಸ್ ನಿಲ್ಲುವುದಕ್ಕೂ ಮೊದಲು ವಯಸ್ಸಾದ ಮಹಿಳೆಯೊಬ್ಬರು ಬಸ್ ಇಳಿಯುವುದಕ್ಕೆ ಮುಂದಾಗಿ ಬಿದ್ದು ಮೃತಪಡುತ್ತಾರೆ. ಆದರೆ ಇಲ್ಲಿ ಚಾಲನಾ ಸಿಬ್ಬಂದಿಗಳನ್ನು ಹೊಣೆ ಮಾಡಿ ಅಮಾನತು ಮಾಡಿದ್ದಾರೆ.
ಅಧಿಕಾರಿಗಳು ಏನೆ ಆದರೂ ನೌಕರರ ಪರ ನಿಲ್ಲಬೇಕು. ಅದನ್ನು ಬಿಟ್ಟು ಅವರ ವಿರುದ್ಧ ನಿಂತರೆ ಅವರ ಪಾಡೇನು. 8ತಾಸು ಹಳ್ಳಿ ಹಳ್ಳಿಗಳಿಗೆ ಸರಿ ಇಲ್ಲದ ಹಳ್ಳ ಕೊಳ್ಳಗಳ ರಸ್ತೆಗಳಲ್ಲಿ ಬಸ್ ಓಡಿಸುತ್ತಾರೆ. ಈ ವೇಳೆ ಜನರು ಅವರನ್ನು ಎಷ್ಟು ರೀತಿ ಬೈದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೂ ಅವರು ಅದ್ಯಾವುದನ್ನು ಮನಸ್ಸಿನಲ್ಲಿ ಇಟ್ಟಿಕೊಳ್ಳದೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಾರೆ.
ಇಷ್ಟೆಲ್ಲ ಕಷ್ಟಪಡುವ ನೌಕರರ ಪರವಾಗಿ ಅಂದರೆ ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ನಿಲ್ಲಬೇಕು. ಒಂದು ವೇಳೆ ಈ ರೀತಿ ಸಾವು ನೋವುಗಳಾದಗ ಬಸ್ ಮತ್ತು ಚಾಲನಾ ಸಿಬ್ಬಂದಿಗಳನ್ನು ಕಾನೂನಾತ್ಮಕವಾಗಿ ಬಿಡಿಸಿಕೊಂಡು ಬರಬೇಕು ಎಂಬ ದೃಷ್ಟಿಯಿಂದ ಕಾನೂನು ವಿಭಾಗವು ಸಂಸ್ಥೆಯಲ್ಲಿ ಇದೆ. ಆದರೆ, ಕಾನೂನು ವಿಭಾಗದ ಅಧಿಕಾರಿಗಳು ಮಾಡುತ್ತಿರುವುದು ಏನು? ನೌಕರರ ವಿರುದ್ಧವೇ ಪ್ರಕರಣ ದಾಖಲಿಸುವುದು. ಬಳಿಕ ಅವರಿಗೆ ಬೇಲ್ ವ್ಯವಸ್ಥೆ ಮಾಡದೆ ನ್ಯಾಯಾಂಗ ಬಂಧನಕ್ಕೆ ಬಿಡುವುದಾ? ಇದು ಮೊದಲು ನಿಲ್ಲಬೇಕು ಎಂದು ಹೇಳಿದರು.
ಇನ್ನು ಅಪಘಾತ ಸಮಯದಲ್ಲಿ ಚಾಲಕನ ಪರ ನ್ಯಾಯಾಲಯದಲ್ಲಿ ವಾದ ಮಾಡಬೇಕಾದ ಸಂಸ್ಥೆಯ ವಕೀಲರು ಇರುವುದೇ ಇಲ್ಲ. ಬದಲಿಗೆ ಸಂಸ್ಥೆಯ ಬಸ್ ಓಡಿಸುವಾಗ ಅಪಘಾತವಾಗಿದ್ದರೂ ಚಾಲಕ ಅವರ ಕೈಯಿಂದ ಹಣ ಕೊಟ್ಟು ಖಾಸಗಿ ವಕೀಲರ ನೇಮಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದು ಬದಲಾಗಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ಪ್ರಮುಖವಾಗಿ ಚಾಲನಾ ಸಿಬ್ಬಂದಿ ಬಸ್ ಸ್ವಚ್ಛಗೊಳಿಸುವ ಕೆಲಸ ಮಾಡುವಂತಿಲ್ಲ. ಆದರೆ ಘಟಕದಲ್ಲಿ ಬಸ್ ತೊಳೆಯದಿರುವುದಕ್ಕೆ ಚಾಲಕನೇ ಘಟಕದಲ್ಲಿ ನೀರು ತೆಗೆದುಕೊಂಡು ಹೋಗಿ ಬಸ್ ಸ್ವಚ್ಛಗೊಳಿಸಿದರೆ ಆ ಚಾಲಕನನ್ನೇ ಅಮಾನತು ಮಾಡುತ್ತಾರೆ ಅಧಿಕಾರಿಗಳು ಎಂದರೆ, ಎಲ್ಲಿದೆ ಮಾನವೀಯತೆ ಎಂಬುದನ್ನು ನಾವು ಇಂದು ಕಾಣ ಬೇಕಿದೆ ಎಂದು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.
ಇನ್ನು ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯ ಬಸ್ ಟಿಕೆಟ್‌ಅನ್ನು ಪಡೆದವರಲ್ಲಿ ಗಂಡ ಹೆಂಡತಿ ಹಿಂದಿನ ಬಸ್ ನಿಲ್ದಾಣದಲ್ಲಿ ಇಳಿದುಕೊಂಡು ಹೋಗುವ ವೇಳೆ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಪುರುಷ ಪ್ರಯಾಣಿಕನಿಗೆ ಮಿಸ್‌ಆಗಿ ಮಹಿಳೆಯ ಉಚಿತ ಬಸ್ ಟಿಕೆಟ್ ಕೊಟ್ಟು ಇಳಿಯುತ್ತಾರೆ. ದುರಾದೃಷ್ಟವೆಂದರೆ ಅದೇ ವೇಳೆ ತನಿಖಾ ಸಿಬ್ಬಂದಿ ಬಂದು ಟಿಕೆಟ್ ಚೆಕ್ ಮಾಡುವಾಗ ಮಹಿಳೆಯ ಉಚಿತ ಟಿಕೆಟ್ ಆತನ ಬಳಿ ಸಿಗುತ್ತದೆ. ಅದಕ್ಕೆ ನಿರ್ವಾಹಕರನ್ನು ಹೊಣೆ ಮಾಡಿ ಕೆಲಸದಿಂದ ಅಮಾನತು ಮಾಡುತ್ತಾರೆ. ಅಂದರೆ ಏನು ನಡೆದಿದೆ ಎಂಬುದರ ಬಗ್ಗೆ ತಿಳಿಯದೇ ಈ ರೀತಿ ನೌಕರರ ಮೇಲೆ ದಬ್ಬಾಳಿಕೆ ಮಾಡಬಾರು ಎಂದು ಅಧ್ಯಕ್ಷರು ಹೇಳಿದರು.
ಈ ರೀತಿ ಆಗುತ್ತಿರುವುದು ಏಕೆ ಎಂದು 8 ತಿಂಗಳಿನಿಂದ ಗಮನಿಸಿದಾಗ ನಮಗೆ ತಿಳಿದು ಬಂದಿದ್ದು ನೌಕರರು ಅಧಿಕಾರಿಗಳಲ್ಲಿ ಒಗ್ಗಟ್ಟಿಲ್ಲದಿರುವುದು ಜತೆಗೆ ನೌಕರರು ನೌಕರರಲ್ಲೇ ಹೊಂದಾಣಿಕೆ ಇಲ್ಲದಿರುವುದರಿಂದ ಪೊಲೀಸ್ ಪ್ರಕರಣಗಳು ದಾಖಲಾಗುತ್ತಿವೆ ಇವೆಲ್ಲವನ್ನು ಬಿಡಬೇಕು. ಇನ್ನು ವೇತನಕ್ಕಾಗಿ ಹೋರಾಟ ಮಾಡಿದ 2500 ನೌಕರರನ್ನು ಅಮಾನತು, ವಜಾ, ವರ್ಗಾವಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಖುಷಿಯಿಂದ ಹೇಳುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುವುದು ತಿಳಿಯುತ್ತದೆ.
ಏಕೆಂದರೆ ಮುಷ್ಕರ ಮಾಡುವುದು ಬೇಡಿಕೆ ಈಡೇರಿಕೆಗೆ ಆದರೆ ಈ ರೀತಿ ಹೋರಾಟ ಮಾಡಿದವರ ವಜಾ ಮಾಡಿ ಅಧಿಕಾರಿಗಳು ನಮ್ಮ ಬಳಿ ಏನೋ ಸಾಧನೆ ಮಾಡಿದ್ದೀವಿ ಎಂಬುಂತೆ ಹೇಳುತ್ತಾರೆ ಎಂದರೆ ಏನರ್ಥ ಎಂದು ಆತಂಕ ವ್ಯಕ್ತಪಡಿಸಿದರು. ಅಂದರೆ ನೌಕರರ ಹೋರಾಟದ ಫಲ ಅಧಿಕಾರಿಗಳಿಗೆ ಸಿಗುವುದಿಲ್ಲವೇ? ಆದರೂ ಏಕೆ ಈ ರೀತಿ ನಡೆದುಕೊಳ್ಳತ್ತಾರೆ ಎಂಬುವುದು ಅಧ್ಯಕ್ಷರ ಪ್ರಶ್ನೆ.
ನಮ್ಮ ನೌಕರರನ್ನು ರಕ್ಷಣೆ ಮಾಡುವವರು ಯಾರು ಸಂಸ್ಥೆಯ ಅಧಿಕಾರಿಗಳು, ನಾವು. ಆದರೆ, ಕೆಲಸದಿಂದ ತೆಗೆದುಹಾಕಿದ್ದೀವೆ ಎಂದು ಹೇಳುವುದು ಎಷ್ಟು ಸರಿ? ಮುಷ್ಕರ ಮಾಡಿದರು ಎಂದು ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ ಎಂದರೆ ಇಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ, ಜತೆಗೆ ಅಧಿಕಾರಿಗಳ ಬೇಡಿಕೆ ಏನು ಎಂಬುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇನ್ನು ನಾವು ಯಾವಾಗಲು ನಿಮ್ಮ ಜತೆ ಇರುತ್ತೇವೆ. ನಿಮಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ನಾವು ಕೂಡ ನಿಮ್ಮ ಜತೆಗಿರುತ್ತೇವೆ ಎಂದು NWKRTC ನಿಗಮದ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಭರವಸೆ ನೀಡಿದರು.
Related

You Might Also Like
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...
ಅಂಗವಿಕಲರ ಬಸ್ಪಾಸ್ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಅಂಗವಿಕಲ ಭೀಮಪ್ಪನಿಗೆ ಬೇಕಿದೆ ಸರ್ಕಾರದ ಆಸರೆ !
ತುಮಕೂರು: ಜಿಲ್ಲೆ ಹೊಸಹಳ್ಳಿ ಗ್ರಾಮ, ರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಮಿಡಿಗೆಸಿ, ಮಧುಗಿರಿ ತಾಲೂಕಿನ ಅಂಗವಿಕಲ ಭೀಮಪ್ಪನಿಗೆ ಸರ್ಕಾರಿ ಸೌಲಭ್ಯ ಸಿಗಬೇಕಿದೆ. ಪೋಲಿಯೋಗೆ ಒಳಗಾಗಿರುವ ಭೀಮಪ್ಪನಿಗೆ ಬೆರಳಿನ ಗುರುತು ಸಹ...
ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು: ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೆಅರ್ಎಸ್,...
KSRTC: ನಾಳೆಯಿಂದ ಸಾರಿಗೆ ನೌಕರರ ಉಪವಾಸ-ಧರಣಿ ಸತ್ಯಾಗ್ರಹ: ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ನಾಳೆಯಿಂದ (ಜು.29)...