NEWSನಮ್ಮಜಿಲ್ಲೆಮೈಸೂರುಸಂಸ್ಕೃತಿ

ಬೀಡನಹಳ್ಳಿ ಶ್ರೀ ನಂದಿಬಸವೇಶ್ವರಸ್ವಾಮಿ ಮಹಾದ್ವಾರದಕ್ಕೆ 5 ವರ್ಷ ತುಂಬಿದ ಹಿನ್ನೆಲೆ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಪಟ್ಟಣದ ಬನ್ನೂರು ಸಂತೇಮಾಳದಲ್ಲಿ ಸೋಮವಾರ ಆಯೋಜಿಸಿದ್ದ ಬೀಡನಹಳ್ಳಿ ಶ್ರೀ ನಂದಿಬಸವೇಶ್ವರ ಸ್ವಾಮಿ ಮಹಾದ್ವಾರದ ಐದನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಪಟ್ಟಣದ ಸಂತೇಮಾಳದಲ್ಲಿ ಬೀಡನಹಳ್ಳಿ ರಸ್ತೆಗೆ ನಿರ್ಮಿಸಲಾಗಿರುವ ಮಹಾದ್ವಾರಕ್ಕೆ 5 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತೇಮಾಳ ಮುಖಂಡರ ನೇತೃತ್ವ ಮತ್ತು ಬೀಡನಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ನಡೆದಂತ ಕಾರ್ಯಕ್ರಮದಲ್ಲಿ ಮಹಾದ್ವಾರವನ್ನು ವಿವಿಧ ಹೂ ಮತ್ತು ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು.

ಭಾಣುವಾರ ರಾತ್ರಿಯಿಂದಲೇ ವಿವಿಧ ಹೋಮ ಹವನವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು. ದೇವಾಲಯಕ್ಕೆ ಸಾಗುವಂತ ರಸ್ತೆಯನ್ನು ಬೀಡನಹಳ್ಳಿ ಗ್ರಾಮದ ಶ್ರೀ ನಂದಿಬಸವೇಶ್ವರ ದೇವಾಲಯದ ವೆರೆಗೂ ಹಾಗೂ ಪಟ್ಟಣದ ಸರ್ಕಲ್ ಸೇರಿ ಸುಮಾರು 2 ಕಿಲೋ ಮೀಟರ್ ರಸ್ತೆಯನ್ನು ವಿದ್ಯುತ್ ದೀಪದಿಂದ ಅಲಂಕಾರ ಮಾಡಲಾಗಿತ್ತು.

ಎಲ್ಲರ ಸಹಕಾರದೊಂದಿಗೆ ವಿವಿಧ ಸ್ಥಳಗಳಿಂದ ಬೀಡನಹಳ್ಳಿಯ ಶ್ರೀ ನಂದಿಬಸವೇಶ್ವರ, ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ, ಹಂಗರಹಳ್ಳಿಯ ಶ್ರೀ ವಿದ್ಯಾಡೇಶ್ವರಿ, ಗೌಡಗೆರೆಯ ಶ್ರೀ ಚಾಮುಂಡೇಶ್ವರಿ, ಯೆಡಹಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮಿ, ಕೊತ್ತತ್ತಿಯ ಶ್ರೀ ಭೂಮಿ ಸಿದ್ದೇಶ್ವರಸ್ವಾಮಿ, ಮಲಿಯೂರು ಶ್ರೀ ಬೀರೇಶ್ವರಸ್ವಾಮಿ, ಬೆಟ್ಟಳ್ಳಿಯ ಶ್ರೀ ಒಡ್ಡಲ್ಲು ರಂಗನಾಥಸ್ವಾಮಿ, ವರದರಾಜಸ್ವಾಮಿ ಬಸವಗಳು ಒಂದೆಡೆ ಬೀಡನಹಳ್ಳಿ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಂಗಳವಾದ್ಯ ಮತ್ತು ಕರಗ ಹೂ ಹೊಂಬಾಳೆ ಸಹಿತವಾಗಿ, ತಮಟೆಯ ನಿನಾದದೊಂದಿಗೆ ಜಾನಪದ ನೃತ್ಯದ ಸಮೇತ ಮೆರವಣಿಗೆ ಮುಖಾಂತರ ಕರೆತರಲಾಯಿತು.

ಮಾರ್ಗದುದ್ದಕ್ಕೂ ಭಕ್ತರು ವಿವಿಧ ಸ್ಥಳಗಳಿಂದ ಆಗಮಿಸಿದ್ದಂತ ಬಸವಗಳಿಗೆ ಪೂಜೆ ಸಲ್ಲಿಸಿ ಪುನೀತರಾದರು. ನಂತರ ಮಹಾದ್ವಾರದಲ್ಲಿ ಮೊದಲೆ ಸಿದ್ದಮಾಡಲಾಗಿದ್ದ ಮಂಟಪದಲ್ಲಿ ಎಲ್ಲ ಬಸವಗಳಿಗೆ ವ್ಯವಸ್ಥೆ ಕಲ್ಪಸಿ, ಭಕ್ತರಿಗೆ ದರ್ಶನ ನೀಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12ರಿಂದ ಪ್ರಾರಂಭವಾದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನದ ಜೊತೆಗೆ ಪ್ರಸಾದ ಸ್ವೀಕರಿಸಿದರು.

ಬೀಡನಹಳ್ಳಿಯ ಶ್ರೀ ನಂದಿಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ಹರಕೆ ರೂಪದಲ್ಲಿ ಭಕ್ತರಿಗೆ ಮೊಸರನ್ನ, ಪುಳಿಯೋಗರೆ ಹೀಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.

Megha
the authorMegha

Leave a Reply

error: Content is protected !!