ಮಂಡ್ಯ: ಕುತ್ತಿಗೆಗೆ ಹಗ್ಗಬಿಗಿದು ಹೆದರಿಸಿ ಹೆದ್ದಾರಿಯಲ್ಲಿ ದರೋಡೆಗೆ ಇಳಿದಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಮಂಡ್ಯ: ಓದುವುದನ್ನು ಬಿಟ್ಟು ಹೆದ್ದಾರಿ ದರೋಡೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

ಕಿರಣ್, ಕುಶಾಲ್ ಬಾಬು ಮತ್ತು ಗೋಕುಲ್ ಬಂಧಿತ ದರೋಡೆಕೋರ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಪೊಲೀಸರು ಮೂವರು ದರೋಡೆಕೋರ ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ಹಣ ಮಾಡುವ ಉದ್ದೇಶದಿಂದ ರಾಬರಿಗೆ ಇಳಿದಿದ್ದರು ಎಂಬುವುದು ತಿಳಿದು ಬಂದಿದೆ.
ಈ ದರೋಡೆಕೋರ ವಿದ್ಯಾರ್ಥಿಗಳು ಸಾರ್ವಜನಿಕರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಹೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ವ್ಯಾಪಾರ (ಬಿಸಿನೆಸ್) ನೆಪದಲ್ಲಿ ಒಂದಾಗಿದ್ದ ಈ ಮೂವರು ದರೋಡೆ ಮಾಡಲು ಹೊರ ರಾಜ್ಯದ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು.
ಇನ್ನಿ ಇವರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ಬಸ್ ಕಾಯುವವರೇ ಇವರ ಟಾರ್ಗೆಟ್ ಆಗಿದ್ದರು. ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಹೋಗುತ್ತಿದ್ದರು. ಮಂಡ್ಯ ಬರುತ್ತಿದ್ದಂತೆ ಅವರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಬೆದರಿಸಿ ಅವರ ಬಳಿ ಇದ್ದ ಚಿನ್ನ ಹಣ ಎಗರಿಸಿ ಪರಾರಿಯಾಗುತ್ತಿದ್ದರು.
ಈ ರೀತಿ ದರೋಡೆ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ಸದ್ಯ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀರು ತಿಳಿಸಿದ್ದಾರೆ.
Related









