NEWSನಮ್ಮಜಿಲ್ಲೆಬೆಂಗಳೂರು

ಹೊಸ ತೆರಿಗೆಯಾಗಿ ಟ್ರಾಫಿಕ್‌ ಬಂದಿದೆ: ಈ ಗುಪ್ತ ತೆರಿಗೆ ಬಗ್ಗೆ ಆತ್ಮಾವಲೋಕನ ಮಾಡಲು ಸಹ ಸಮಯವಿಲ್ಲ!

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೊಸ ತೆರಿಗೆಯಾಗಿ ಟ್ರಾಫಿಕ್‌ ಬಂದಿದೆ ಎಂದು ಟೆಕ್ಕಿಯೊಬ್ಬರು ಪೋಸ್ಟ್‌ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪೋಸ್ಟ್‌ನಲ್ಲಿ ಏನಿದೆ?:  ಜೆಪಿನಗರದದಲ್ಲಿ ನಾನು ವಾಸವಾಗಿದ್ದು ಕಚೇರಿ ಹೊರ ವರ್ತುಲ ರಸ್ತೆಯಲ್ಲಿದೆ. ವರ್ಷಕ್ಕೆ 28 ಲಕ್ಷ ರೂ. ಸಂಪಾದನೆ ಇದೆ. ಆ ಸಂಪಾದನೆಗೆ 6.5 ಲಕ್ಷ ರೂ. ಆದಾಯ ತೆರಿಗೆ ಕಟ್ಟುತ್ತಿದ್ದೇನೆ.

ಇನ್ನು ನಿತ್ಯ ಖರ್ಚಿನ ಮೇಲೆ ವಾರ್ಷಿಕ 1.4 ಲಕ್ಷ ರೂ. ಜಿಎಸ್‌ಟಿ ಪಾವತಿಸಲಾಗುತ್ತಿದೆ. ಕಚೇರಿ 14 ಕಿ.ಮೀ. ದೂರದಲ್ಲಿದೆ. ಮನೆಯಿಂದ ಕಚೇರಿಗೆ ತೆರಳಲು 30 ನಿಮಿಷ ತೆಗೆದುಕೊಳ್ಳಬೇಕು. ಆದರೆ ವಾಸ್ತವದಲ್ಲಿ 90 ನಿಮಿಷ ತೆಗೆದುಕೊಳ್ಳುತ್ತಿದೆ.

ಅಂದರೆ ಟ್ರಾಫಿಕ್‌ನಲ್ಲಿ ಕಳೆದುಹೋದ ಸಮಯವನ್ನು ಸೇರಿಸಿದರೆ ವರ್ಷಕ್ಕೆ ಎರಡೂವರೆ ತಿಂಗಳುಗಳು ಈ ಟ್ರಾಫಿಕ್‌ನಲ್ಲೇ ಕಳೆದುಹೋಗುತ್ತಿದೆ. ಮೊದಲ ಎರಡು ತೆರಿಗೆಯಲ್ಲಿ ಉತ್ತಮ ರಸ್ತೆಗಳು, ಸುಗಮ ಪ್ರಯಾಣ, ಸ್ಮಾರ್ಟ್ ನಗರಗಳನ್ನು ನಿರ್ಮಿಸಬೇಕಿತ್ತು.

ಆದರೆ ಇದು ಸಾಧ್ಯವಾಗಿಲ್ಲ. ಈ ಹಣ ಬೇರೆ ಕಡೆ ಹೋಗುತ್ತಿದೆ. ಇನ್ನು ಈ ಗುಪ್ತ ತೆರಿಗೆಯ ಬಗ್ಗೆ ಆತ್ಮಾವಲೋಕನ ಮಾಡಲು ಸಹ ಸಮಯವಿಲ್ಲ. ನೀವು ಸಹ ಈ ರೀತಿಯ ತೆರಿಗೆ ಪಾವತಿಸುತ್ತಿದ್ದೀರಾ? ಪಾವತಿಸಿದ್ದರೆ ಕಮೆಂಟ್‌ ಮಾಡಿ ಎಂದು ಹೇಳಿದ್ದಾರೆ.

ಈ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಮೆಂಟ್‌ಗಳು ಬರುತ್ತಿದೆ. ಸರ್ಕಾರ ಯಾಕೆ ಬೆಂಗಳೂರು ಒಂದೇ ಜಾಗಕ್ಕೆ ಕಂಪನಿಗಳಿಗೆ ತೆರೆಯಲು ಅವಕಾಶ ನೀಡುತ್ತಿದೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನು ಮುಂದೆ ರಾಜಧಾನಿಗಳನ್ನು ಬಿಟ್ಟು ಟಯರ್‌-2 ನಗರಗಳಲ್ಲಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕಮೆಂಟ್‌ ಮಾಡಿದ್ದಾರೆ.

Advertisement

ಇನ್ನು ಕೆಲವರು ಸರ್ಕಾರಗಳು ಉಚಿತ ಕೊಡುಗೆ ನೀಡುವುದನ್ನು ನಿಲ್ಲಿಸಿ ಆ ಹಣವನ್ನು ಉತ್ತಮ ರಸ್ತೆ ನಿರ್ಮಾಣಗಳಿಗೆ ಬಳಸಬೇಕು. ರಸ್ತೆಗಳು ಸರಿ ಇಲ್ಲದ ಕಾರಣ ವಾಹನಗಳು ದೊಡ್ಡ ದೊಡ್ಡ ಗುಂಡಿಗಳಿಗೆ ಬಿದ್ದು ಹಾಳಾಗುತ್ತಿವೆ.

ಇನ್ನು ನೋಡಿದರೆ ನಾವು ಹೇಗೆ ಮಕ್ಕಳ ಶಿಕ್ಷಣಕ್ಕೆ ಎಂದು ವರ್ಷಕ್ಕೆ ಹಣವನ್ನು ಮೀಸಲಿಡಲಾಗುತ್ತದೋ ಅದೇ ರೀತಿ ಇನ್ನು ಮುಂದೆ ವಾಹನ ಮಾಲೀಕರು ವಾಹನ ರಿಪೇರಿಗೆಂದು ವರ್ಷಕ್ಕೆ ದುಡ್ಡನ್ನು ಇಡಬೇಕಾಗುತ್ತದೆ. ಟ್ರಾಫಿಕ್‌ ಜಾಮ್‌ನಿಂದ ಉಂಟಾಗುವ ಹೊಗೆಯಿಂದ ಉಸಿರಾಟದ ಸಮಸ್ಯೆ ಸಹ ಬರುತ್ತಿದೆ ಎಂದು ಸಿಟ್ಟು ಹೊರಹಾಕಿದ್ದಾರೆ.

Megha
the authorMegha

Leave a Reply

error: Content is protected !!