ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಖಾಸಗಿ ಬಸ್ ಮಾಲೀಕರ ಸಭೆ ಕರೆಯಲಾಗಿದೆ.
ಸಭೆಯನ್ನು ನಾಳೆ (ಆ.2ರಂದು) ಮಧ್ಯಾಹ್ನ 12ಗಂಟೆಗೆ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದ್ದು, ಈ ಸಭೆಗೆ ಖಾಸಗಿ ಬಸ್ ಮಾಲೀಕರು ಹಾಜರಾಗಬೇಕು ಎಂದು ಸೂಚಿಸಿರುವುದಾಗಿ ರಾಜ್ಯ ಸಾರಿಗೆ ಪ್ರಾಧಿಕಾರದ ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ (ಪ್ರಭಾರ) ತಿಳಿಸಿದ್ದಾರೆ.
ಸಭೆಯಲ್ಲಿ ಖಾಸಗಿ ಬಸ್ ಮಾಲೀಕರಾದ ಸದಾನಂದ ಚಾತ್ರಾ, ಕರ್ನಾಟಕ ಸ್ಟೇಟ್ ಟೂರಿಸ್ಟ್ ಬಸ್ ಅಪರೇಟರ್ ಅಸೋಸಿಯೇಷನ್, ಬೆಂಗಳೂರು.
ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟ, ಬೆಂಗಳೂರು.
ರಾಜವರ್ಮ ಬಲ್ಲಾಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ, ಜಯರಾಜ್ ಬಳ್ಳಾಲ ಮೋಟರ್ಸ್ ಅಂಗಡಿ ನಂ. 03, ಮಂಗಳೂರು ಸಿಟಿ ಕಾರ್ಪೋರೇಷನ್ ಕಾಂಪ್ಲೆಕ್ಸ್, ಕದರಿ, ಮಂಗಳೂರು ಇವರು ಸೇರಿದಂತೆ ವಿವಿಧ 20 ಖಾಸಗಿ ಬಸ್ ಮಾಲೀಕರು ಹಾಜರಾಗಲು ತಿಳಿಸಿದ್ದಾರೆ.

Related
