NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಡಿಪೋಗಳಲ್ಲಿ ಕಿರುಕುಳ: ನೊಂದ ನೌಕರರಿಂದ ಎಂಡಿಗೆ ರಾಜೀನಾಮೆ

ವಿಜಯಪಥ ಸಮಗ್ರ ಸುದ್ದಿ
  • ಔರಾದ ಘಟಕದಲ್ಲಿ ತಪ್ಪಿದ ನಿಯಂತ್ರಣ l ಭ್ರಷ್ಟಾಚಾರಕ್ಕೆ ಬೆಸತ್ತು ಕೆಲಸಕ್ಕೆ ರಾಜೀನಾಮೆ ಕೊಟ್ಟ ನೌಕರ

ಬೀದರ್‌: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ್‌ ವಿಭಾಗದ ಔರಾದ ಘಟಕದಲ್ಲಿ ಘಟಕ ವ್ಯವಸ್ಥಾಪಕ ಮತ್ತು ಎಟಿಎಸ್‌ ಕಿರುಕುಳ ನೀಡುತ್ತಿರುವುದರಿಂದ ಮನನೊಂದ ಚಾಲಕ ಕಂ ನಿರ್ವಾಹಕರೊಬ್ಬರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಔರಾದ ಘಟಕದ ವ್ಯವಸ್ಥಾಪಕ ನಯೀಮ್ ಮತ್ತು ಸಂಚಾರ ಶಾಖೆ ಸಿಬ್ಬಂದಿ ಸಂಚಾರಿ ನಿಯಂತ್ರಕ ಸೂರ್ಯಕಾಂತ ಅವರು ಕರ್ತವ್ಯಕ್ಕೆ ನಿಯೋಜನೆ ಮಾಡುವ ವಿಷಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತ ಚಾ ಕಂ ನಿ (1317) ಪ್ರಕಾಶ ಎಂಬುವರು ವ್ಯವಸ್ಥಾಪಕ ನಿರ್ದೇಶಕರಿಗೆ ರಾಜಿನಾಮೇ ಪತ್ರವನ್ನು ಇಂದು (ಸೆ.2) ಸಲ್ಲಿಸಿದ್ದಾರೆ.

ಚಾಕಂನಿ ಪ್ರಕಾಶ್‌ ಅವರನ್ನು ಘಟಕದ ಅಧಿಕಾರಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಈ ಚಾಲಕನಿಗೆ ಸರಿಯಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡದೆ ಅತ್ಯಂತ ಕೆಟ್ಟ ಪದಗಳಿಂದ ಬೈಯ್ದಿದ್ದಾರೆ.

ಮೊನ್ನೆ ತಾನೆ ಅಲ್ಲಿಯ ಡ್ಯೂಟಿ ಕೊಡುವ ಅಧಿಕಾರಿ ಚಲನಾ ಸಿಬ್ಬಂದಿಗೆ ಅವಾಚ್ಯ ಪದಗಳಲ್ಲಿ ಬೈದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ಹರಿದಾಡಿದೆ. ಈಗ ಕಾರ್ಮಿಕನ ಈ ನಡೆ ಔರಾದನಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದನ್ನು ಸೂಚಿಸುತ್ತಿದೆ. ಅಧಿಕಾರಿಗಳು ಏಕೆ ಈರೀತಿ ತಾಳ್ಮೆ ಕಳೆದುಕೊಂಡು ನೌಕರರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬುವುದು ಇನ್ನೂ ತಿಳಿಯದಾಗಿದೆ.

ಹೌದು ! ಸಾರಿಗೆ ನೌಕರರು ಪ್ರಮುಖವಾಗಿ ಡಿಪೋಗಳಲ್ಲಿ ಕೊಡುತ್ತಿರುವ ಕಿರುಕುಳ ತಪ್ಪಿಸಬೇಕು ಮತ್ತು ವೇತನ ಹೆಚ್ಚಳ ಮಾಡಬೇಕೆಂದು ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ್ದರು. ಆದರೆ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ, ಜತೆಗೆ ಕೊರೊನಾದಿಂದ ಅವರ ಮುಷ್ಕರ ವಿಫಲವಾಯಿತು.

ತದ ನಂತದ ಹೈ ಕೋರ್ಟ್‌ ಅದೇಶದ ಮೇರೆಗೆ ಎಲ್ಲ ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರು. ಆದರೆ ಇತ್ತ ಸಾರಿಗೆ ಅಧಿಕಾರಿಗಳು ಮುಷ್ಕರದ ವೇಳೆ 8 ಸಾವಿರಕ್ಕೂ ಹೆಚ್ಚು ನೌಕರರ ವಿರುದ್ಧ ಏಕಾಏಕಿ ಯಾವುದೇ ಕಾರಣವಿಲ್ಲದಿದ್ದರೂ ಶಿಸ್ತು ಕ್ರಮದ ಹೆಸರಿನಲ್ಲಿ ವಜಾ, ಅಮಾನತು, ವರ್ಗಾವಣೆಯಂತಹ ಶಿಕ್ಷೆ ಕೊಟ್ಟಿದ್ದಾರೆ.

Advertisement

ಇದು ಸಾಲದು ಎಂಬಂತೆ ಮುಷ್ಕರದ ಬಳಿಕ ಕರ್ತವ್ಯಕ್ಕೆ ಹಾಜರಾಗಿರುವ ಹಲವು ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ. ಜತೆಗೆ ತಮಗೆ ಇಷ್ಟ ಬಂದಂತೆ ಕೆಲ ಡಿಪೋಗಳ ವ್ಯವಸ್ಥಾಪಕರು ನಡೆದುಕೊಳ್ಳುತ್ತಿದ್ದು, ನೌಕರರಿಗೆ ಇನ್ನಿಲ್ಲದ ಕಿರುಕುಳಗಳನ್ನು ನೀಡುತ್ತದ್ದಾರೆ. ಇಷ್ಟಾದರೂ ಸಾರಿಗೆ ಸಚಿವರಾಗಲಿ ಅಥವಾ ಉನ್ನತ ಅಧಿಕಾರಿಗಳಾಗಲಿ ನೌಕರರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದರಿಂದ ಬಹುತೇಕ ಡಿಪೋಗಳಲ್ಲಿ ನೌಕರರಿಗೆ ಏ.6ರ ಹಿಂದೆ ಇದ್ದ ಕಿರುಕುಳಕ್ಕಿಂತಲೂ ಈಗ ಹೆಚ್ಚಾಗಿದ್ದು, ನೌಕರರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲ ಡಿಪೋಗಳಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ನೌಕರರ ಮನನೊಂದು ತಮ್ಮ ವೃತ್ತಿಗೆ ರಾಜೀನಾಮೆ ಕೊಡುತ್ತಿದ್ದಾರೆ.

ಅದೇ ರೀತಿ ರಾಂನಗರ ಜಿಲ್ಲೆಯ ಚನ್ನಪಟ್ಟದ ಡಿಪೋ ವ್ಯವಸ್ಥಾಪಕರು ನಿರ್ವಾಹಕರೊಬ್ಬರಿಗೆ ಅವಾಚ್ಯವಾಗಿ ಬೈದಿರುವ ಆಡಿಯೋ ಕೂಡ ತುಂಬಾ ಸದ್ದು ಮಾಡಿದೆ. ಆದರೆ ಈವರೆಗೂ ಆ ಅಧಿಕಾರಿಯ ವಿರುದ್ಧವೂ ಯಾವುದೇ ಕ್ರಮ ಜರುಗಿಸಿಲ್ಲ.

ನಿತ್ಯ ಇದೇ ರೀತಿ ಡಿಪೋಗಳಲ್ಲಿ ನೌಕರರಿಗೆ ಕಿರುಕುಳ ಹೆಚ್ಚಾಗುತ್ತಿದ್ದರೆ ಎಲ್ಲ ನೂಕರರು ಡಿಪೋಗಳಲ್ಲೇ ಕುಟುಂಬ ಸಹಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅಲ್ಲದೇ ವಜಾಗೊಂಡಿರುವ ಎಲ್ಲ ನೌಕರರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಯಾಮರಣ ಕೋರಿ ಪತ್ರಬರೆದಿದ್ದು, ಎಲ್ಲ ನೌಕರರ ಸಹಿ ಪಡೆಯುವ ನಿಟ್ಟಿನಲ್ಲಿ ಸದ್ದಿಲ್ಲದೆ ಅಭಿಯಾನ ಆರಂಭಿಸಿದ್ದಾರೆ.

ಡಿಪೋಗಳಲ್ಲಿ ಅನಾಹುತಗಳು ಅಂದರೆ ನೌಕರರ ಕುಟುಂಬಗಳು ಸಾಮೂಹಿಕವಾಗಿ ಜೀವ ಕಳೆದುಕೊಳ್ಳಲು ಮುಂದಾಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲ ಉದಾಸೀನತೆ ತೋರಿದರೆ ಮುಂದೆ ನಡೆಯುವ ಅನಾಹುತಗಳ ಹೊಣೆಯನ್ನು ನೀವೆ ಹೊರಬೇಕಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!