NEWSದೇಶ-ವಿದೇಶನಮ್ಮಜಿಲ್ಲೆ

ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ ಎಂದು ಗುರಾಜತ್‌ ರಾಜ್ಯದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಂದರೆ ಇಲ್ಲಿ ಅಂಗನವಾಡಿ ನೌಕರರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಅದೇ ನಮ್ಮ ರಾಜ್ಯದಲ್ಲಿ ಕೆಲ ಸಂಘಟನೆಗಳ ಮುಖಂಡರು ಅಂಗನವಾಡಿಗೆ ನೇಮಕಗೊಂಡಿರುವವರನ್ನು ನೌಕರರೆಂದು ಪರರಿಗಣಿಸುವುದಕ್ಕೇ ಮೀನಮೇಷ ಎಣಿಸುತ್ತಿದ್ದಾರೆ.

ಇನ್ನು ಕರ್ನಾಟಕದಲ್ಲಿ ಅಂಗನವಾಡಿ ನೌಕರರು ಈ ನಿಟ್ಟಿನಲ್ಲಿ ಈಗ ಸ್ವಲ್ಪಮಟ್ಟಿಗೆ ಹೋರಾಟಕ್ಕೆ ಇಳಿದರೂ ಕೂಡ ಅವರಿಗೆ ಸಲ್ಲಿಬೇಕಾದ ನ್ಯಾಯ ಸಲ್ಲೇ ಸಲ್ಲುತ್ತದೆ ಎಂದು ಪ್ರಜ್ಞಾವಂತರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಅಂಗನವಾಡಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಮುಂದಾಗಬೇಕಿದೆ.

ಅಂಗನವಾಡಿ ನೌಕರರು ಈಗಾಗಲೇ ಹಲವಾರು ಹೋರಾಟಗಳನ್ನು ಮಾಡಿದ್ದು, ಕೆಲವೊಂದನ್ನು ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಕೆಲವೊಂದು ನ್ಯಾಯಯುತವಾಗಿ ಸಿಕ್ಕಿಲ್ಲ ಎಂದ ಕೊರಕೂಡ ನೌಕರರನ್ನು ಕಾಡುತ್ತಿದೆ. ಆದ್ದರಿಂದ ನಾವು ಅಂಗನವಾಡಿ ನೌಕರರ ಪರ ಇದ್ದೇವೆ ಎಂದು ಹೇಳುವ ಸಂಘಟನೆಗಳ ಮುಖಂಡರು ಇನ್ನಾರೂ ಎಚ್ಚೆತ್ತುಕೊಂಡು ನೌಕರರಿಗೆ ಸಿಗಬೇಖಿರುವುದನ್ನು ಕೊಡಿಸುವುದಕ್ಕೆ ಮುಂದಾಗಬೇಕಿದೆ.

ಹೈಕೋರ್ಟ್‌ ಆದೇಶ: ಹೌದು! ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ – ಐಸಿಡಿಎಸ್ ಅಡಿಯಲ್ಲಿ 1983ರಿಂದ 2010ರ ನಡುವಿನ ಅವಧಿಯಲ್ಲಿ ನೇಮಕವಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್‌ ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ, ಪ್ರಯೋಜನಗಳು ಸಿಗುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಿಂಗಳಿಗೆ ಕೇವಲರೂ. 5000 ರೂ.ಗಳು ಸಿಗುತ್ತಿದೆ. ಸರ್ಕಾರಿ ನೌಕರರ ಜತೆಗೆ ಅಂಗನವಾಡಿ ನೌಕರರ ವೇತನವನ್ನು ಹೋಲಿಸಿದರೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಾರತಮ್ಯ ಆಗುತ್ತಿದೆ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲಾಗಿರುವಹೊಣೆ ಮತ್ತು ಅವರ ಕರ್ತವ್ಯ ಬಹಳದೊಡ್ಡದು. ಸರ್ಕಾರಿ ನೌಕರರ ಹೊಣೆ ಮತ್ತು ಕರ್ತವ್ಯಕ್ಕೆ ಹೋಲಿಸಿದರೂ ತಾರತಮ್ಯ ಗೊತ್ತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಾತ್ಕಾಲಿಕ ಹುದ್ದೆಯಲ್ಲಿರುವ ನಾಲ್ಕನೇ ದರ್ಜೆಯ ನೌಕರರಿಗಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ನ್ಯಾಯಪೀಠ ವಿಷಾದವ್ಯ ಕ್ತಪಡಿಸಿದೆ.

ಈ ಎರಡು ಹುದ್ದೆಗಳನ್ನು ಸರ್ಕಾರಿ ಸೇವೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನೀತಿಯೊಂದನ್ನು ರೂಪಿಸಬೇಕು ಎಂದು. ಈ ನೀತಿಯ ಪರಿಣಾಮವಾಗಿ ನೌಕರರಿಗೆ ಸರ್ಕಾರಿ ಪ್ರಯೋಜನಗಳು ದೊರೆಯುವಂತಾಗಬೇಕು ಎಂದು ಅದು ತೀರ್ಪಿನಲ್ಲಿ ತಿಳಿಸಿದೆ.

ಆದೇಶ ಪ್ರಕಟವಾದ ಆರು ವಾರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನಕ್ಕೆ ಸಂಬಂಧಿಸಿದಂತೆ ನೀತಿಯೊಂದನ್ನು ರೂಪಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಆದೇಶ ದೇಶಾದ್ಯಂತ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೌಕರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ! ಚೆಂಡು ಹೂವಿನ ಬೆಲೆ ತೀವ್ರ ಕುಸಿತ- ರಸ್ತೆ ಬದಿ ಹೂ ಸುರಿದು ಬೆಳೆಗಾರ ರೈತರ ಅಕ್ರೋಶ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ: ತುಷಾರ್ ಗಿರಿನಾಥ್ ನಲ್‌ಜಲ್ ಮಿತ್ರ ತರಬೇತಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನುರಾಧ ಚಾಲನೆ