
ತುಮಕೂರು: ಆಟೋದಲ್ಲಿ ಮರೆತು ಬಿಟ್ಟುಹೋಗಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವರಸುದಾರರಿಗೆ ಮರಳಿ ಒಪ್ಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕರೆ ಮೆರೆದಿದ್ದು ಪೊಲೀಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತುಮಕೂರು ನಗರದ ಹನುಮಂತಪುರ ನಿವಾಸಿ ಆಟೋ ಚಾಲಕ ರವಿಕುಮಾರ್ ಎಂಬುವರೆ ಪ್ರಾಮಾಣಿಕತೆ ಮೆರೆದವರು. ಅರಸೀಕೆರೆ ಮೂಲದ ಗಾಯತ್ರಿ ಎಂಬುವರು ಇವರ ಆಟೋದಲ್ಲಿ ಪ್ರಯಾಣಿ ಮಾಡಿದ್ದು, ಇಳಿಯುವ ವೇಳೆ ತಮ್ಮ ಚಿನ್ನಾಭರಣವಿದ್ದ ಬ್ಯಾಗ್‌ಅನ್ನು ಮರೆತು ಬಿಟ್ಟು ಹೋಗಿದ್ದರು.
ಹೌದು! ಕುಂದೂರು ಗ್ರಾಮದಲ್ಲಿ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕಾಗಿ ಗಾಯತ್ರಿ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮೂರು ಜನ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಇಳಿಯುವಾಗ ಆಟೋದಲಳೇ ಬ್ಯಾಗ್ ಬಿಟ್ಟು ಹೋಗಿದ್ದರು.
ಗಾಯತ್ರಿ ಅವರು ಬ್ಯಾಗ್ ಬಿಟ್ಟುಹೋಗಿರುವುದನ್ನು ಸ್ವಲ್ಪ ಸಮಯದ ಬಳಿಕ ಗಮನಿಸಿದ ಆಟೋ ಚಾಲಕ ರವಿಕುಮಾರ್ ಪ್ರಯಾಣಿಕರಿಗಾಗಿ ಹುಡುಕಾಡಿದ್ದಾರೆ. ಮತ್ತೊಂದು ಕಡೆ ಬ್ಯಾಗ್ ಬಿಟ್ಟಿರುವುದು ನೆನಪಾಗಿ ಪ್ರಯಾಣಿಕರು ಕೂಡ ಆಟೋಗಾಗಿ ಹುಡುಕಾಡಿದ್ದಾರೆ.
ಆದರೆ ಒಬ್ಬರಿಗೊಬ್ಬರು ಸಿಗದೆ ಹೋದಾಗ ಪ್ರಯಾಣಿಕರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅದೇ ಸಮಯಕ್ಕೆ ಪ್ರಯಾಣಿಕರು ಸಿಗದ ಕಾರಣ ಆಟೋ ಚಾಲಕ ಬ್ಯಾಗ್ ಒಪ್ಪಿಸಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಪೊಲೀಸ್‌ಠಾಣೆಯಲ್ಲೇ ಒಬ್ಬರಿಗೊಬ್ಬರು ನಡೆದ ವಿಷಯವನ್ನು ಹಂಚಿಕೊಂಡಿರು.
ಇದರ ನಡುವೆ ಪ್ರಯಾಣಕರನ್ನು ಖಚಿತಪಡಿಸಿಕೊಂಡ ಪೊಲೀಸರು ಬ್ಯಾಗ್‌ನ್ನು ಮರಳಿಸಿದ್ದಾರೆ. ಆ ಬ್ಯಾಗ್‌ನಲ್ಲಿ ಬರೋಬರಿ 4 ಲಕ್ಷ ರೂ. ಮೌಲ್ಯದ 52 ಗ್ರಾಂ ಚಿನ್ನಾಭರಣಗಳಿದ್ದವು. ಅದನ್ನು ಮರಳಿ ಪಡೆದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಆಟೋ ಚಾಲಕ ರವಿಕುಮಾರ್ ಪ್ರಾಮಾಣಿಕತೆಗೆ ನಗರ ಠಾಣೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂಥ ಆಟೋ ಚಾಲಕರು ಇದ್ದರೆ ಜನರು ನೆಮ್ಮದಿಯಿಂದ ಹಾಗೂ ಧೈರ್ಯದಿಂದ ಓಡಾಡುತ್ತಾರೆ ಎಂದು ಶ್ಲಾಘಿಸಿದ್ದಾರೆ.