CrimeNEWSನಮ್ಮಜಿಲ್ಲೆ

ಒಂದೇ ಆಧಾರ್‌ನಲ್ಲಿ ಇಬ್ಬರು ಉಚಿತ ಪ್ರಯಾಣಕ್ಕೆ ಯತ್ನ; ಆದರೂ ಶಿಕ್ಷೆ ನೀಡದ ಸಾರಿಗೆ ನಿಗಮ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಬುರ್ಖಾ ಧರಿಸಿ ಬಂದ ಮಹಿಳೆರಿಬ್ಬರೂ ಆಧಾರ್​ ಕಾರ್ಡ್​ ತೋರಿಸಿ ಉಚಿತ ಟಿಕೆಟ್ ಪಡೆದುಕೊಳ್ಳುವ ವೇಳೆ ನಿರ್ವಾಹಕರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ್ದು, ಈ ಇಬ್ಬರೂ ಒಂದೇ ನಂಬರಿನ ಕಾರ್ಡ್ ನೀಡಿರುವುದು ನೋಡಿ ದಂಗಾಗಿದ್ದಾರೆ.

ಕರ್ನಾಟಕದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ, ಚುನಾವಣೆಗೂ ಮುನ್ನ ನೀಡಿದ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಗ್ಯಾರಂಟಿಗಳಲ್ಲಿ ಅತೀ ಹೆಚ್ಚು ಜನಪ್ರಿಯಗೊಂಡಿರುವ ಶಕ್ತಿ ಯೋಜನೆಗೆ ರಾಜದಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಜಾರಿಗೆ ಬಂದ ಈ ಯೋಜನೆಯನ್ನು ಕೆಲವು ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಬಸ್​​ನಲ್ಲಿ ಫ್ರೀ ಟಿಕೆಟ್​​ ಇದ್ದರೂ ಈ ಮಹಿಳೆಯರಿಬ್ಬರೂ ನಿರ್ವಾಹಕರನ್ನು ವಂಚಿಸಿ ಉಚಿತ ಪ್ರಯಾಣಕ್ಕೆ ಯತ್ನಿಸಿರುವುದು ಏಕೆ. ಇವರಲ್ಲಿ ಒಬ್ಬರು ಹೊರರಾಜ್ಯದ ಮಹಿಳೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಈ ನಡುವೆ ಒಂದೇ ಆಧಾರ್‌ನ ಎರಡು ಕಾಪಿ ತಂದಿದ್ದ ಮಹಿಳೆಯರಿಬ್ಬರು ಉಚಿತ ಟಿಕೆಟ್ ಪಡೆದುಕೊಳ್ಳಲು ಯತ್ನಿಸಿ ಕಂಡಕ್ಟರ್​​ಗೆ ಸಿಕ್ಕಿ ಬಿದ್ದಿದ್ದಾರೆ. ಆದಎ, ಈ ಮಹಿಳೆಯರಿಗೆ ಶಿಕ್ಷೆ ಕೊಡುವ ಹಕ್ಕು ನಿರ್ವಾಹಕರಿಗೆ ಇಲ್ಲದ ಕಾರಣ ಬಿಟ್ಟು ಕಳುಹಿಸಿದ್ದಾರೆ.

ಇನ್ನು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು ಏನ್ ಮಾಡಿದರೂ ನಡೆಯತ್ತೆ ಎಂದು ನಿರ್ವಾಹಕ ತಮ್ಮ ಅಳಲು ತೋಡಿಕೊಂಡಿರುವುದನ್ನು ಕಾಣಬಹುದಾಗಿದೆ.

ನೋಡಿ ನಿರ್ವಾಹಕರು ಮಾಡದ ತಪ್ಪಿಗೆ ಅಮಾನತುನಂತಹ ಶಿಕ್ಷೆ ಅನುಭವಿಸುತ್ತಾರೆ. ಆದರೆ, ಈ ರೀತಿ ಸರ್ಕಾರಕ್ಕೆ ವಂಚನೆ ಎಸಗುವ ಮಹಿಳೆಯರಿಗೆ ಏಕೆ ಶಿಕ್ಷೆ ಕೊಡುವುದಕ್ಕೆ ಸರ್ಕಾರ ಮತ್ತು ಸಾರಿಗೆ ನಿಗಮ ಮುಂದಾಗುತ್ತಿಲ್ಲ ಎಂಬುವುದೆ ನೋವಿಬನ ಸಂಗತಿ.

ಒಂದು ವೇಳೆ ತಪ್ಪು ಮಾಡಿದ ಪ್ರಯಾಣಿಕರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರೆ ಬಸ್‌ಗಳಲ್ಲಿ ಇಂಥ ವಂಚನೆಗಳಿಗೆ ಕಡಿವಾಣ ಬೀಳಬಹುದೇನೋ. ಈ ನಿಟ್ಟಿನಲ್ಲಿ ಇನ್ನಾದರೂ ಸಾರಿಗೆ ನಿಗಮದ ಆಡಳಿತ ಮಂಡಳಿ ಮತ್ತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ಪ್ರಯಾಣಿಕರು ತಪ್ಪು ಮಾಡಿದರೂ ಚಾಲನಾ ಸಿಬ್ಬಂದಿಗೆ ಶಿಕ್ಷೆ ಕೊಡುವುದನ್ನು ಇನ್ನಾದರೂ ನಿಲ್ಲಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವ ಕಾನೂನನ್ನು ಸಾರಿಗೆ ನಿಮಗಗಳಲ್ಲಿ ರೂಪಿಸಿ ಜಾರಿಗೆ ತರುವುದು ಮುಖ್ಯವಾಗಿದೆ. ಈ ಬಗ್ಗೆ ಪ್ರಜ್ಞಾವಂತ ನಾಗರೀಕರು ಒತ್ತಾಯಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ