ವಿಜಯಪುರ: 4 ವರ್ಷಗಳಿಂದ ಹತ್ಯೆ ಆರೋಪದಡಿ ಜೈಲಿನಲ್ಲಿದ್ದ 23 ಮಂದಿಗೂ ಜಾಮೀನು ನೀಡಿ ಆದೇಶಿಸಿದ ಜಿಲ್ಲಾ ಕೋರ್ಟ್

- ಆರೋಪಿಗಳ ಪರ ವಕಾಲತ್ತುವಹಿಸಿದ್ದು ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು
ವಿಜಯಪುರ: 2022ರ ಮಾರ್ಚ್‌ನಲ್ಲಿ ಅಪ್ಪ ಸಾಬ್‌ಎಂಬುವರ ಹತ್ಯೆ ಮಾಡಿದ ಆರೋಪದಡಿ ಜೈಲು ಸೇರಿದ್ದ 23 ಮಂದಿಗೂ ಇಂದು ಜಿಲ್ಲಾ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಈ ಹತ್ಯೆ ಪ್ರಕರಣದಡಿ ಈರಣ್ಣ ಸುಂಕನೂರ, ರಮೇಶ್ ಬಾಡದಗಂಡಿ, ಗಿರೀಶ್ ಅಗನವಾಡಿ ಸೇರಿದಂತೆ 23 ಮಂದಿ 2022ರ ಮಾರ್ಚ್‌ನಿಂದ ಈವರೆಗೂ ಜಾಮೀನು ಸಿಗದೆ ಜೈಲಿನಲ್ಲೇ ಇದ್ದರು.
ಈ ಹಿನ್ನೆಲೆಯಲ್ಲಿ ಈ 23 ಮಂದಿಯ ಕುಟುಂಬದವರು ಜಾಮೀನು ಮಂಜೂರು ಮಾಡುವಂತೆ ಕೋರಿ ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಪರ ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ವಕಾಲತ್ತುವಹಿಸಿದ್ದರು.
ಇಂದು ಬೆಳಗ್ಗೆ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಈ ಜಾಮೀನು ಅರ್ಜಿ ಕೈಗೆತ್ತಿಕೊಂಡ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರು ಸುಮಾರು ಒಂದೂವರೆ ಗಂಟೆ ಕಾಲ ವಾದ ಪ್ರತಿವಾದವನ್ನು ಆಲಿಸಿ, ಬಳಿಕ ಮಧ್ಯಾಹ್ನ 3ಗಂಟೆಗೆ ತೀರ್ಪು ಕಾಯ್ದಿರಿಸಿದರು. ಮತ್ತೆ ಮಧ್ಯಾಹ್ನ 3ಕ್ಕೆ ಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆ ಈ 23 ಆರೋಪಿಗಳಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೋರಡಿಸಿದರು.
ಆದೇಶ: ಈರಣ್ಣ ಸುಂಕನೂರ, ರಮೇಶ್ ಬಾಡದಗಂಡಿ, ಗಿರೀಶ್ ಅಗನವಾಡಿ ಸೇರಿದಂತೆ 23 ಮಂದಿ ಅರ್ಜಿದಾರರಿಗೆ ಜಾಮೀನನ್ನು ಷರತ್ತುಗಳೊಂದಿಗೆ ಅನುಮತಿಸಲಾಗಿದೆ. ಅದರಲ್ಲಿ 23 ಮಂದಿಗೂ ತಲಾ ಇಬ್ಬರು ಜಾಮೀನು ನೀಡಬೇಕು ಹಾಗೂ ತಲಾ ಒಂದು ಲಕ್ಷ ರೂ. ಬಾಂಡ್ ನೀಡಬೇಕು ಮತ್ತು ನ್ಯಾಯಾಲಯ ನೀಡಿರುವ ನಿಯಮಗಳನ್ನು ಪಾಲಿಸಬೇಕು.
23 ಮಂದಿ ಅರ್ಜಿದಾರರು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು. ಅರ್ಜಿದಾರರು ಸಾಕ್ಷಿಗಳನ್ನು ತಿರುಚಬಾರದು ಅಥವಾ ಅವರಿಗೆ ಬೆದರಿಕೆ ಹಾಕಬಾರದು. 5) ಅರ್ಜಿದಾರರು ಪ್ರತಿ ಭಾನುವಾರ ಪೊಲೀಸ್ ಠಾಣೆಗೆಹೋಗಿ ಸಹಿ ಮಾಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸುವ ಮೂಲಕ ಜಾಮೀನು ಮಂಜೂರು ಮಾಡಿದೆ.
ಈ 23 ಮಂದಿಯ ವಿರುದ್ಧ ವಿಜಯಪುರ ನಗರ ಠಾಣೆಯಲ್ಲಿ ಐಪಿಸಿ ಸಕ್ಷನ್ 302, 120 (ಬಿ), 504 ಮತ್ತು 506ರಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಈ ಪ್ರಕರಣದಲ್ಲಿ 214 ಮಂದಿ ಸಾಕ್ಷಿಗಳಿದ್ದು, ಅವರಲ್ಲಿ ಈವರೆಗೂ 59 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಈ ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿಗಳಿಗೆ ಪ್ರತಿಕೂಲವಾಗುವಂತ ಸಾಕ್ಷ್ಯ ಸಿಗದ ಕಾರಣ ಇವರೆಲ್ಲರಿಗೂ ಜಾಮೀನು ಮಂಜೂರು ಮಾಡಬೇಕು ಎಂದು ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ವಾದ ಮಂಡಿಸಿದ್ದರು.
ಇನ್ನು ಕಳೆದ 2022ರ ಮಾರ್ಚ್‌ನಿಂದ ಈವರೆಗೂ ಜಿಲ್ಲಾ ನ್ಯಾಯಾಲಯ, ಕರ್ನಾಟಕ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಕೋರಿ ಈ 23 ಆರೋಪಿಗಳು ಹಾಕಿದ್ದ ಅರ್ಜಿ ತಿರಷ್ಕೃತಗೊಂಡಿತ್ತು. ಆದರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬಲವಾದ ಸಾಕ್ಷ್ಯ ಸಿಗದ ಕಾರಣ ಇಂದು ಈ 23 ಮಂದಿಗೂ ಜಾಮೀನಿ ಸಿಕ್ಕಿದೆ.
ಒಟ್ಟಾರೆ ಈ ಜಾಮೀನು ಪಡೆಯಲು ಜಿಲ್ಲಾ ನ್ಯಾಯಾಲಯ, ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕುವುದು ಸೇರಿದಂತೆ ಸುಮಾರು 1.05 ಕೋಟಿ ರೂಪಾಯಿಯನ್ನು 23 ಮಂದಿ ವ್ಯಯಿಸಿದ್ದರು. ಆದರೂ ಜಾಮೀನು ಸಿಕ್ಕಿರಲ್ಲಿಲ್ಲ. ಆದರೆ, ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿರುವುದಕ್ಕೆ ಕುಟುಂಬದವರಾದ ನಮಗೆ ಸಂತೋಷವಾಗಿದ್ದು ಮಾಡದ ತಪ್ಪಿಗೆ ಜೈಲಿನಲ್ಲಿದ್ದ ನಮ್ಮವರಿಗೆ ಜಾಮೀನು ಮಂಜೂರಾಗುವಂತೆ ವಾದ ಮಂಡಿಸಿದ ವಕೀಲ ಎಚ್.ಬಿ.ಶಿವರಾಜು ಅವರಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದ್ದಾರೆ.
Related









