ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ

ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ.
ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು ಕುಡಿದು ಕಳೆದ ಮೂರು ದಿನಗಳಿಂದ 30ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೆ ಈ ವಿಷಯ ತಿಳಿಯುತ್ತಿದ್ದಂತೆ ವೈದರ ತಂಡವೊಂದು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಎರಡು ಅಂಬುಲೆನ್ಸ್ ಕೂಡ ಇಲ್ಲಿಯೇ ಇದ್ದು ಅಸ್ವಸ್ಥಗೊಂಡಿರುವ ಮಂದಿ ಗಂಭೀರ ಸ್ಥಿತಿಗೆ ತಲುಪಿದರೆ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆಗಳಿಗೆ ಸಾಗಿಸುವುದಕ್ಕೆ ಸಿದ್ದವಾಗಿವೆ.
ಈಗಾಗಲೇ ಕೆಲವರನ್ನು ಚಿಕಿತ್ಸೆಗಾಗಿ ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಜತೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಿಲಾಗಿದೆ ಎಂದು ಗ್ರಾಪಂ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಬ್ಯಾಲಿಹಾಳ ಗ್ರಾಮದ ಬಹುತೇಕ ಗ್ರಾಮಸ್ಥರು ಆಸ್ಪತ್ರೆಗಳಲ್ಲಿ ಠಿಕಾಣಿ ಹೂಡಿದ್ದು, ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ವೈದರ ತಂಡ ಗ್ರಾಮದಲ್ಲಿಯೇ ಇದ್ದು ಸೂಕ್ತ ಚಿಕಿತ್ಸೆ ನೀಡುತ್ತಿದೆ. ಹೀಗಾಗಿ ಇದುವರೆಗೂ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Related








