CrimeNEWSನಮ್ಮರಾಜ್ಯ

“ವಿಜಯಪಥ ಇಂಪ್ಯಾಕ್ಟ್‌”:  ನಕಲಿ ಬಸ್‌ಪಾಸ್‌ನಲ್ಲೇ 23ವರ್ಷಗಳು ಓಡಾಡಿದ್ದ  ಹೋಂ ಗಾರ್ಡ್‌ ಬಂಧಿಸಿದ KSRTC ಎಸ್‌&ವಿ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಕಲಿ ಬಸ್‌ ಪಾಸ್‌ ಇಟ್ಟುಕೊಂಡು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಕಳೆದ 23 ವರ್ಷಗಳಿಂದಲೂ ಉಚಿತವಾಗಿ ಓಡಾಡುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ (ಹೋಂ ಗಾರ್ಡ್‌) ಮುನಿರಾಜು ಎಂಬಾತನ ಬಗ್ಗೆ ಬುಧವಾರ ವಿಜಯಪಥದಲ್ಲಿ ವರದಿ ಮಾಡಲಾಗಿತ್ತು.

KSRTC: ಗೃಹ ರಕ್ಷಕ ದಳದ ಸಿಬ್ಬಂದಿಗೆ 54 ವರ್ಷಗಳವರೆಗೂ ಮಾನ್ಯತೆ ಇರುವ ಬಸ್‌ಪಾಸ್‌ ವಿತರಣೆ!!? 2001ರಿಂದ ಫ್ರೀಯಾಗಿ ಪ್ರಯಾಣಿಸುತ್ತಿರುವ ಭೂಪ! ಎಂಬ ಶೀರ್ಷಿಕೆಯಡಿ ವಿಜಯಪಥದಲ್ಲಿ ವರದಿ ಬರುತ್ತಿದಂತೆ ಅಲರ್ಟ್‌ ಆದ ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ಅಧಿಕಾರಿಗಳು ಹೋಂ ಗಾರ್ಡ್‌ನ ಪತ್ತೆ ಕಾರ್ಯದಲ್ಲಿ ನಿರತರಾಗಿದ ಕೇವಲ 24 ಗಂಟೆಯೊಳಗೆ ಆತನನ್ನು ಹಿಡಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವರದಿ ಆಧರಿಸಿ ಬುಧವಾರ ರಾತ್ರಿಯಿಂದ ಆತ ಎಲ್ಲಿದ್ದಾನೆ ಎಂಬುದರ ಬಗ್ಗೆ ಶೋಧ ನಡೆಸುತ್ತಿದ್ದರು. ಇಂದು ಅಂದರೆ ಗುರುವಾರ ಮುಂಜಾನೆ 6 ಗಂಟೆ ವೇಳೆಗೆ ಆತ ಮೆಜೆಸ್ಟಿಕ್ ತುಳಸಿ ಪಾರ್ಕ್ ಹತ್ತಿರ ಗೃಹರಕ್ಷಕ ದಳದ ಪೆರೇಡ್‌ ಬಳಿ ಬಂದಾಗ ಸಾರಿಗೆ ಸಂಸ್ಥೆಯ ಕೆಂಪೇಗೌಡ ಬಸ್ ನಿಲ್ದಾಣದ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಹಿಡಿದು ತಂದಿದ್ದಾರೆ.

ಬಳಿಕ ವಿಚಾರಣೆ ನಡೆಸಿದ್ದು ಆತ ನಿನ್ನೆಯೇ ಪಾಸ್‌ಅನ್ನು ನಿನ್ನೆಯೇ ಯಾರೋ ಕೆ.ಆರ್.ಮಾರ್ಕೆಟ್‌ನಲ್ಲಿ ಕಿತ್ತುಕೊಂಡು ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಮಾನಸಿಕ ಅಸ್ವಸ್ಥನಂತೆ ನಟಿಸುತ್ತ ಯಾವುದೇ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡ ವಿವಿ ಪುರಂ ಪೊಲೀಸ್ ಠಾಣೆಗೆ ಆತನನ್ನು ಕರೆದುಕೊಂಡು ಹೋಗಿದ್ದು, ಪಾಸ್ ಕಿತ್ತುಕೊಂಡು ಹೋಗಿರುವ ಬಗ್ಗೆ ಕೆ.ಆರ್.ಮಾರ್ಕೆಟ್‌ನಲ್ಲಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದಿದ್ದಾರೆ. ಮತ್ತೆ ಮುನಿರಾಜುವಿನ ಸ್ವಂತ ಊರಾದ ಕೋಲಾರದ ಶ್ರೀನಿವಾಸಪುರ ತಾಲೂಕು, ರೋಣೂರು ಹೋಬಳಿಯ ಕೊಟ್ರುಗುಳಿ ಗ್ರಾಮಕ್ಕೂ ಕೂಡ ಸಂಸ್ಥೆಯ ಭದ್ರತಾ ಮತ್ತು ಜಾಗೃತ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಈ ವೇಳೆ ಮುನಿರಾಜು ಪತ್ನಿ ಮತ್ತು ಮಕ್ಕಳ ವಿಚಾರಿಸಿದ್ದಾರೆ. ಅವರ ಹತ್ತಿರ ಪಾಸ್‌ ಇತ್ತು ಎಂದು ಹೇಳಿದ್ದಾರೆ. ಈ ಎಲ್ಲ ಬಳವಳಿಗೆಯ ಮಧ್ಯೆಯೇ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಆರೋಪಿ ಮುನಿರಾಜುವನ್ನು ಒಪ್ಪಿಸಿ ಭದ್ರತಾ ಮತ್ತು ಜಾಗೃತ ಅಧಿಕಾರಿಗಳು ದೂರು ನೀಡಿದ್ದಾರೆ.

Vijayapatha - ವಿಜಯಪಥ

Leave a Reply

error: Content is protected !!
LATEST
BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್!