NEWSನಮ್ಮಜಿಲ್ಲೆನಮ್ಮರಾಜ್ಯ

ಆ.5ರ ಮುಷ್ಕರ ದಿನದ ಚಾಲಕ, ನಿರ್ವಾಹಕರ ವೇತನ ಕಡಿತ- ಇದು ನ್ಯಾಯಸಮ್ಮತವೇ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ 2021ರ ಏಪ್ರಿಲ್‌ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಲಾಗಿತ್ತು.

ಈ ಎಲ್ಲ ಪ್ರಕರಣಗಳಲ್ಲಿ ಬಹುತೇಕ ಇತ್ಯರ್ಥವಾಗಿದ್ದು ಇನ್ನೂ ಕೆಲವು ಬಾಕಿ ಉಳಿದಿವೆ ಅವುಗಳನ್ನು ವಾಪಸ್‌ ಪಡೆಯಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಇನ್ನು ಸಮಸ್ಯೆಗಳಿಗೆ ಒಳಗಾಗಿರುವ ನೌಕರರ ಬದುಕನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು. ಜತೆಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಜಾರಿಗೊಳಿಸಿ ಅದರ ವೇತನ ಹಿಂಬಾಕಿಯನ್ನು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾರಿಗೆ ಬಹುತೇಕ ಎಲ್ಲ ನೌಕರರ ಸಂಘಟನೆಗಳ ಮುಖಂಡರು ಇದೇ ಒತ್ತಾಯವನ್ನು ಸರ್ಕಾರ ಮತ್ತು 4 ಸಾರಿಗೆಯ ಆಡಳಿತ ಮಂಡಳಿಗೆ ಮಾಡುತ್ತಿದ್ದು, ಸೆ.20ರೊಳಗೆ ಬಿಎಂಟಿಸಿಯಲ್ಲಿ ಮುಷ್ಕರದ ಕಾರಣದಿಂದ ವಜಾಗಿಳಿಸಿರುವ ಎಲ್ಲ ನೌಕರರನ್ನು ವಾಪಸ್‌ ಡ್ಯೂಟಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕಳೆದ ಆ.5ರಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್‌ ನೇತೃತ್ವದಲ್ಲಿ ನಡೆದ ಒಂದು ದಿನದ ಮುಷ್ಕರದಲ್ಲಿ ಕೇವಲ ಚಾಲಕರು ಹಾಗೂ ನಿರ್ವಾಹಕರ ವೇತನವನ್ನು ಮಾತ್ರ ಕಡಿತಮಾಡಲಾಗಿದ್ದು ಉಳಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ವೇತನ ನೀಡಲಾಗಿದೆ. ಇದು ಸರಿಯಾದ ಕ್ರಮವಲ್ಲ ಚಾಲನಾ ಸಿಬ್ಬಂದಿಗಳಿಗೂ ಆ ಒಂದು ದಿನ ರಜೆ ಪಡೆದು ವೇತನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ನೌಕರರ ವಿರುದ್ಧ ಕೊಟ್ಟಿರುವ ಮೆಮೋ ಹಾಗೂ ಇತರೆ ನೋಟಿಸ್‌ಗಳನ್ನು ಕೂಡಲೇ ವಾಪಸ್‌ ಪಡೆದು ಅವರಿಗೆ ಆ ಒಂದು ದಿನದ ವೇತನ ಕೊಡುವ ಜತೆಗೆ ಅವರ ಎಲ್ಲ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳು, ಸಾರಿಗೆ ಸಚಿವರ ಗಮನಕ್ಕೆ ತಂದು ಸರಿಪಡಿಸಿಕೊಡುವಂತೆ ಮನವಿ ಮಾಡಲಾಗಿದ್ದು ಮತ್ತೊಮ್ಮೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.

Advertisement

ಸಾರಿಗೆ ಸಂಸ್ಥೆಯ ಸಂಘಟನೆಗಳು ಇನ್ನಾದರೂ ಸ್ಟ್ರಾಂಗಾದ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಾರಿಗೆ ಅಡಳಿತ ಮಂಡಳಿ ಜತೆ ಖಡಕ್‌ಆಗಿ ಮಾತುಕತೆ ನಡೆಸಿ ಎಲ್ಲವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ನೌಕರರು ಒತ್ತಾಯಿಸಿದ್ದಾರೆ.

ಇನ್ನು ವೇತನ ಹೆಚ್ಚಳ ಮಾಡಬೇಕು ಎಂದು ನೌಕರರು ಮುಷ್ಕರ ಮಾಡಿದರೆ ಅಧಿಕಾರಿ ಮಹಾಶಯರೆನಿಸಿಕೊಂಡ ಬಹುತೇಕ ಎಲ್ಲ ಅಧಿಕಾರಿಗಳು ತಮಗೂ ವೇತನ ಹೆಚ್ಚಳವಾಗುತ್ತದೆ ಎಂಬುವುದು ತಿಳಿದಿದ್ದರೆ ಪರೋಕ್ಷವಾಗಿಯಾದರೂ ಬೆಂಬಲಿಸದೆ ಹೋರಾಟದಿನ ಡ್ಯೂಟಿ ಮಾಡದ ನೌಕರರ ವೇತನವನ್ನು ಕಟ್‌ ಮಾಡಿರುವುದು ನ್ಯಾಯಸಮ್ಮತವೆ?

ಇನ್ನಾದರೂ ಈ ಬಗ್ಗೆ ಅಧಿಕಾರಿಗಳಾದ ತಾವುಗಳು ಪ್ರಭುದ್ಧರಾಗಿ ಯೋಚಿಸಿ ನೌಕರರು ನಿಮ್ಮ ಪಾಲಿನ ಹೋರಾಟದ ಜವಾಬ್ದಾರಿಯನ್ನು ಹೊತ್ತು ರಸ್ತೆಗಿಳಿದಿದ್ದರೂ ಎಂದು ಅರಿತು ಸೆಪ್ಟೆಂಬರ್‌ ವೇತನದೊಂದಿಗಾದರೂ ವೇತನ ಬಿಡುಗಡೆ ಮಾಡಿ. ಇಲ್ಲ ನಾವು ಕೆಳಮಟ್ಟದಲ್ಲೇ ಯೋಚಿಸುವವರು ಅಂತ ಅಂದುಕೊಂಡಿದರೆ ತಮ್ಮ ಅಂಧಾದರ್ಬಾರನ್ನೇ ಮುಂದುವರಿಸಿ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!