ಸಾರಿಗೆ ನೌಕರರ ಕುರಿತು ಸರ್ಕಾರ, ಸಂಘಟನೆಗಳ ನಡೆ ಏನು? ಅಧಿಕಾರಿಗಳ ಬೇಡಿಕೆಗಳಿಗೆ ಸ್ಪಂದಿಸುತ್ತಾ ಸರ್ಕಾರ?

ಬೆಂಗಳೂರು: KSRTCಯ ನಾಲ್ಕೂ ನಿಗಮಗಳ ನೌಕರರಿಗೆ ಕೊಡಬೇಕಿರುವ 38ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಅಲ್ಲದೆ 2024ರ ಜನವರಿ 1ರಿಂದ ಮತ್ತೆ ಆಗಬೇಕಿರಯವ ವೇತನ ಹೆಚ್ಚಳ ಮಾಡದರೆ 24 ತಿಂಗಳುಗಳನ್ನು ಕಳೆದಿದೆ.

ಹೌದು! ಸಾರಿಗೆ ನೌಕರರಿಗೆ ಕೊಡಬೇಕಾಗಿರೋ2020 ಜನವರಿ 1ರಿಂದ ಅನ್ವಯಾಗುವಂತೆ ಶೇ.15ರಷ್ಟು ಹೆಚ್ಚಳವಾಗಿರುವ ಮೂಲಕ ವೇತನದ 38 ತಿಂಗಳ ಹಿಂಬಾಕಿ ಕೊಡಬೇಕಿದೆ. ಆದರೆ, ಈವರೆಗೂ ಒಂದೊಂದು ಭಿನ್ನರಾಗಹಾಡಿಕೊಂಡು ಸರ್ಕಾರ ಬರುತ್ತಿದ್ದು, ಒಮ್ಮೆ ನಿಮಗೆ ಅದನ್ನು ಕೊಡುವುದಕ್ಕೆ ಹಿಂದಿನ ಸರ್ಕಾರ ಹೇಳಿಲ್ಲ ಎನ್ನುವುದು ಮತ್ತೆ ನಾವು 14 ತಿಂಗಳ ಹಿಂಬಾಕಿ ಕೊಡುತ್ತೇವೆ ಇನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿಕೊಂಡು ಬರುತ್ತಿದೆ.
ರಾಜ್ಯದ ಸಾರಿಗೆ ನೌಕರರಿಗೆ ಅನ್ಯಾಯ ಎಸಗುತ್ತಿರುವ ಸರ್ಕಾರ ಅವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಈಗಲಾದರೂ ಮನಸ್ಸು ಮಾಡಿ ಕಾಂಗ್ರೆಸ್ ನಾಯಕರು ತಾವು ಚುನಾವಣೆ ಪೂರ್ವದಲ್ಲಿ ಕೊಟ್ಟ ಪ್ರಣಾಳಿಕೆ ಭರವಸೆಯಂತೆ ಸರಿ ಸಮಾನ ವೇತನ ಜಾರಿ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ನಡೆಯುತ್ತಿದ್ದೇವೆ ಎಂದು ತೋರಿಸಿ ಎಂದು ನೌಕರರು ಮನವಿ ಮಾಡಿದ್ದಾರೆ.
ಈ ನಡುವೆ ಕಳೆದ ತಿಂಗಳಿನಿಂದ ಸಿಎಂ ಕುರ್ಚಿಯ ಬಗ್ಗೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಅದು ಅಧಿವೇಶನದಲ್ಲು ಸೌಂಡ್ ಮಾಡಿತ್ತು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು ಆ ಬಗ್ಗೆಯೇ ಆಡಳಿತ ಪಕ್ಷದ ನಾಯಕರು ಮುಳುಗಿರುವುದರಿಂದ ಸಾರಿಗೆ ನೌಕರರ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುತ್ತಿಲ್ಲ ಇದು ನೌಕರರಿಗೆ ಭಾರಿ ನೋವುಂಟು ಮಾಡುತ್ತಿದೆ.
ಮತ್ತೊಂದು ಮಜಲನ್ನೇ ದಾಟಿ ಹೋಗುತ್ತಿದೆ: ಇನ್ನು ಪ್ರಸ್ತುತ ಸಾರಿಗೆ ಸಂಘಟನೆಗಳ ಕತೆಯೂ ಮತ್ತೊಂದು ಮಜಲನ್ನೇ ದಾಟಿ ಹೋಗುತ್ತಿದೆ. ಈ ವಿಷಯದಲ್ಲಿ ಅನಂತ ಸುಬ್ಬರಾವ್ ಅವರಿಗೆ ನೌಕರರಿಗೆ ಒಳ್ಳೇದು ಮಾಡುವ ಇರಾದೇ ಇಲ್ಲದಂತೆ ಕಾಣುತ್ತಿದೆ, ಬದಲಾಗಿ ಅವರ ಇತ್ತೀಚಿನ ವಿಡಿಯೋ ಹೇಳಿಕೆಗಳು ಚಂದ್ರು ಹಾಗೂ ಕೂಟವನ್ನು ಮುಗಿಸಿದರೆ ತನ್ನ ಜನ್ಮ ಸಾರ್ಥಕ ಎಂಬ ಭಾವನೆಯಲ್ಲಿದ್ದಾರೆ ಎನಿಸುತ್ತಿದೆ.
ನಿಮ್ಮ ಶಕ್ತಿ ಏನೇ ಇರಲಿ ಯಾಮಾರಿದರೆ ಯುದ್ಧರಂಗದಲ್ಲಿ ಓಡುತ್ತಿರುವ ರಥದ ಚಕ್ರಕ್ಕೆ ಅಳವಡಿದ ಸಣ್ಣ ಲಾಕ್ ತಪ್ಪಿದರೆ ರಥ ಉರುಳುವ ರೀತಿ ತಮ್ಮ ಅನುಭವವನ್ನು ಹಾಳು ಮಾಡಿಕೊಳ್ಳಬೇಡಿ, ಒಳ್ಳೇದಕ್ಕೆ ಉಪಯೋಗಿಸಿ ಅದು ಸಾರಿಗೆ ನೌಕರರಿಗೆ ಪೂರಕವಾಗಿ ಇರಲಿ.
ಸಮಸ್ತ ಸಾರಿಗೆ ಅಧಿಕಾರಿಗಳು ಆಗ್ರಹ ಏನು?: ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನವನ್ನು ಕನಿಷ್ಠ 36,000 ರೂ.ಗಳಿಗೆ ಹೆಚ್ಚಿಸುವ ಜತೆಗೆ ವೇತನ ಆಯೋಗದಂತೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನಿಗದಿ ಮಾಡಬೇಕು ಎಂದು ಸಮಸ್ತ ಸಾರಿಗೆ ಅಧಿಕಾರಿಗಳು ಆಗ್ರಹಿಸಿದ್ದಾರೆ.
ಕಳೆದ 2020 ಜನವರಿ 1ರಿಂದ ಜಾರಿಗೆ ಬಂದಿರುವ ವೇತನ ಹೆಚ್ಚಳದ ಶೇ.15ರಷ್ಟರ 38 ತಿಂಗಳ ಮೂಲ ವೇತನದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಕೂಡ ಕಾನೂನಾತ್ಮಹವಾಗಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನಿಂದಲೂ ಟ್ರೇಡ್ ಯೂನಿಯನ್‌ಗಳು ಬರಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಷ್ಟೇ ಹೋರಾಟದಲ್ಲಿ ಭಾಗವಹಿಸಬೇಕು ಕಾರಣ ಇವರೆಲ್ಲ ಕಾರ್ಮಿಕರು ಎಂದು ಸಂಸ್ಥೆಯಲ್ಲಿ ಬೇಡದ ನಿಯಮವನ್ನು ಹಾಕಿ ಹೋರಾಟ ಮಾಡಿಕೊಂಡು ಬರುತ್ತಿರುವುದರಿಂದ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ. ಇದರಿಂದ ನಾವು ಕೂಡ ಸಂಸ್ಥೆಯಲ್ಲಿ ಬರಿ ದುಡಿಯುವ ಎತ್ತುಗಳಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮ ಸಂಸ್ಥೆಗಳಲ್ಲಿ ಜಂಟಿ ಕ್ರಿಯಾ ಸಮಿತಿ ಎಂಬ ಬಣ ನಮಗೆ ಅಗ್ರಿಮೆಂಟ್ ಮೂಲಕವೇ ವೇತನ ಹೆಚ್ಚಳ ಮಾಡಬೇಕು. ಅದು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಅತ್ತ ನೌಕರರ ಒಕ್ಕೂಟ ಎಂಬ ಬಣ ಸಮಾನವ ವೇತನ ಬೇಕು. ಅದು ನೀವು ಕಳೆದ ವಿಧಾನ ಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.
ಆದರೆ, ಈವರೆಗೂ ಸರ್ಕಾರ ಈ ಎರಡೂ ಬಣಗಳ ಬಡಿದಾಟವನ್ನೇ ಬಂಡವಾಳ ಮಾಡಿಕೊಂಡು ನಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡದೆ ಕಾಲಹರಣ ಮಾಡುತ್ತಿದ್ದೆ. ಹೀಗಾಗಿ ನಾವು ಕೂಡ ಹೋರಾಟ ಮಾಡಬೇಕಾದ ಅನಿವಾರ್ಯತೆ ಈಗ ಬಂದಿದೆ ಎಂದು ಭಾವಿಸಿದ್ದೇವೆ. ಆದರೆ ಸರ್ಕಾರ ನಾವು ಹೋರಾಟ ಮಾಡುವಂತಹ ಸನ್ನಿವೇಶವನ್ನು ತಂದುಕೊಳ್ಳದೇ ಕೂಡಲೇ ನಮಗೆ ಸಿಗಬೇಕಿರುವ ಸೌಲಭ್ಯವನ್ನು ವೇತನ ಹೆಚ್ಚಳ ಮಾಡುವ ಮೂಲಕ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರ ನೌಕರರಿಗೆ ಕೊಟ್ಟ ಭರವಸೆ ಈಡೇರಿಸದೆ ಕಾಲದೂಡುತ್ತಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಎಂದಿದ್ದರೂ ತಾವು ನಮಗೆ ಈ ಸೌಲಭ್ಯಗಳನ್ನು ಕೊಡಲೇಬೇಕು. ಹೀಗಾಗಿ ಈ ವಿಳಂಬ ನೀತಿ ಬಿಟ್ಟು ನಮಗೆ ಬರಬೇಕಿರುವ 38 ತಿಂಗಳ ಹಿಂಬಾಕಿಯನ್ನು ಕೊಡಲೇ ಬಿಡುಗಡೆ ಮಾಡಬೇಕು. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಬೇಕು. ಅದಕ್ಕೆ ಮಧ್ಯಂತ್ರ ಪರಿಹಾರವನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
Related









