ಯಾವಾಗ ಸ್ವಾಮಿ ತಾವು ಸರಿ ಸಮಾನ ವೇತನ ಕೊಡಿಸುವುದು 2024ರ ಅಗ್ರಿಮೆಂಟ್ ಆದ ಮೇಲಾ: ನೌಕರರ ಪ್ರಶ್ನೆ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು 1/1/2020ರ ವೇತನ ಅಗ್ರಿಮೆಂಟ್ ಬೇಡ ಎಂದು ಮುಷ್ಕರ ಮಾಡಿಸಿದ್ದೀರಾ, ಮುಷ್ಕರ ಫೇಲಾದ ನಂತರ ಸರಿಸಮಾನ ವೇತನ ಕೊಡಿಸುತ್ತೇನೆ ಎಂದು ಹೋರಾಟಗಳನ್ನು ಮಾಡುತ್ತೀರಾ. ನಿಮ್ಮ ಕಡೆ ವೇತನ ಹೆಚ್ಚಾಗದೆ ಇದ್ದ ಕಾರಣ ಜಂಟಿ ಸಮಿತಿ ಮಧ್ಯ ಪ್ರವೇಶ ಮಾಡಿತು.
ಆ ಬಳಿಕ ಸಾರಿಗೆ ನೌಕರರಿಗೆ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿತ್ತು. ಜಂಟಿ ಹೋರಾಟದಿಂದಲೇ ಇದು ಆಯಿತು ಎಂದು ಹೇಳಲೇಬೇಕು. ಏಕೆಂದರೆ ನೀವು ಅಗ್ರಿಮೆಂಟ್ ಬೇಡ ಎಂದು ಹೋರಾಟ ಮಾಡುತ್ತಲೇ ಬಂದಿದ್ದೀರಿ ಹಾಗಾಗಿ ಅಗ್ರಿಮೆಂಟ್ ವೇಳೆ ಶೇ. 15ರಷ್ಟು ವೇತನ ಹೆಚ್ಚಳವಾಗಿರುವುದರಲ್ಲಿ ನಿಮ್ಮ ಕೂಡದ ಹೋರಾಟ ಸೊನ್ನೆಯೇ ಆಗಿದೆ.
ಇನ್ನು ಶೇ.15ರಷ್ಟು ವೇತನ ಹೆಚ್ಚಳ 2020ರ ಜ.1ರಿಂದ ಜಾರಿಗೆ ಬರುವಂತೆ ಸರ್ಕಾರ ಘೋಷಣೆ ಮಾಡಿದ್ದು 2023ರ ಮಾರ್ಚ್‌ನಲ್ಲಿ. ಆ ಬಳಿಕ ಸರ್ಕಾರ ಮಾಡಿರುವ ಹೆಚ್ಚಳದ ಹಿಂಬಾಕಿ ಕೊಡಿಸುವುದಕ್ಕಾದರೂ ಹೋರಾಟ ಮಾಡಬಹುದಿತ್ತು. ಅದಕ್ಕೂ ಸಮರ್ಪಕವಾಗಿ ನಿಮ್ಮ ಕೂಟ ತೊಡಗಿಸಿಕೊಳ್ಳಲಿಲ್ಲ. ಈಗಲೂ ಆ ಬಗ್ಗೆ ತೊಡಗಿಸಿಕೊಂಡಿಲ್ಲ ಎಂದೇ ಹೇಳಬಹುದು.
ಸರಿ ಆದರೂ ನೌಕರರು ನಿಮ್ಮ ಕೂಟವನ್ನು ನಂಬಿಕೊಂಡು ಈಗಲೂ ನಮಗೆ ಸರಿ ಸಮಾನ ವೇತನ ಆಗುತ್ತದೆ ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ತಾವು ಏನು ಮಾಡಿದ್ಧೀರಿ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಿಸುವುದಕ್ಕೆ ಮುಂದಾದರ ಇಲ್ಲ. ಅದೂ ಹೋಗಲಿ 2020ರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯೂ ಈವರೆಗೂ ಬಂದಿಲ್ಲ ಏನು ಮಾಡುತ್ತಿದ್ದೀರಿ?
ಇನ್ನು ತಾವು ಸರ್ಕಾರ ಬದಲಾದ ಬಳಿಕ ಸರಿ ಸಮಾನ ವೇತನ ಆಗುತ್ತದೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವುದನ್ನು ನಮಗೆ ಕೊಡುತ್ತದೆ ಎಂದು ಹೇಳಿಕೊಂಡೇ ಕಳೆದ ಒಂದೂವರೆ ವರ್ಷದಿಂದಲೂ ನೌಕರರ ಸೊಸೈಟಿ ಚುನಾವಣೆ, ಆಟೋಟ ಹಾಗೂ ಇನ್ನಿತ ನಿಮ್ಮ ಒಕ್ಕೂಟದ ಕೆಲಸಗಳಲ್ಲಿ ಬ್ಯುಸಿ ಆಗಿ ವೇತನದ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಆದರೂ ನೌಕರರು ಕೂಟ ಮತ್ತು ಒಕ್ಕೂಟವನ್ನು ನಂಬಿಕೊಂಡೆ ಈಗಲೂ ಇದ್ದಾರೆ.
ಹೀಗಾಗಿ ತಾವು ಈಗಲಾದರೂ ನೌಕರರಿಗೆ ಅತೀ ಶೀಘ್ರದಲ್ಲೇ ಸಿಹಿ ಸುದ್ದಿಕೊಡಲು ಸರ್ಕಾರ ಮುಂದಾಗುತ್ತಿದೆ ಎಂದೋ ಅಥವಾ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದೋ ಹೇಳಿಲ್ಲ. ಹೇಳಿದ್ದರೂ ಅದಕ್ಕೆ ಯಾವುದೆ ಸಮಯದ ಗಡಿ ನಿರ್ಧಾರವಾಗಿಲ್ಲ. ಏಕೆ ಹೀಗೆ ನೌಕರರ ದಿಕ್ಕು ತಪ್ಪಿಸಿಕೊಂಡೇ ಬರುತ್ತಿದ್ದೀರಿ?
2024ರ ಜನವರಿ 1ರಿಂದ ಅಗ್ರಿಮೆಂಟ್ ಮಾಡುವುದಕ್ಕೋ ಇಲ್ಲ ನಿಮ್ಮ ಹೇಳಿಕೆಯಂತೆ ಸರಿ ಸಮಾನವೇತನ ಮಾಡುವುದಕ್ಕೋ ಈ 11 ತಿಂಗಳಿಂದ ಏಕೆ ಸಾಧ್ಯವಾಗಿಲ್ಲ. ಸರ್ಕಾರದ ಖಜಾನೆಯಲ್ಲಿ ನೌಕರರಿಗೆ ಕೊಡಲು ಹಣವಿಲ್ಲವೇ? ಈ ಕಾಲವಕಾಶದಲ್ಲಿ ಅಂದರೆ ಕಳೆದ 11 ತಿಂಗಳಲ್ಲಿ ತಾವು ನೌಕರರಿಗೆ ಸರಿ ಸಮಾನ ವೇತನ ಕೊಡಿಸ ಬಹುದಾಗಿತ್ತು. ಆದರೆ ಇದರ ಬಗ್ಗೆ ಈವರೆಗೂ ದೃಢ ನಿರ್ಧಾರ ತೆಗೆದುಕೊಂಡಿಲ್ಲ.
ಬದಲಿಗೆ ಕೆಎಸ್‌ಆರ್‌ಟಿಸಿ ಸೊಸೈಟಿ ಎಲೆಕ್ಷನ್ ಗಾಗಿ ವಿನೂತನವಾಗಿ ಹೋರಾಟ ಮಾಡಿ ಜಯಶೀಲರಾಗಿ ಇದ್ದೀರಾ ಒಳ್ಳೆಯದಾಗಲಿ. ಆದರೆ, ಈಗ ಜಂಟಿ ಸಮಿತಿ ಅವರು ವೇತನ ಹೆಚ್ಚಳ ಮಾಡಿಸುವುದಕ್ಕಾಗಿ ಹೋರಾಟ ಮಾಡಲು ಮುಂದೆ ಬಂದ ಬಳಿಕ ಈಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೇಳಿಕೆ ಕೊಡುವ ಮೂಲಕ ಯಾಕೆ ನೌಕರರನ್ನು ದಾರಿ ತಪ್ಪಿಸುತ್ತಿದ್ದೀರಾ?
ಇನ್ನು ತಮಗೆ ಡಿ.31ರವರೆಗೂ ಅಂದರೆ 16 ದಿನಗಳ ಸಮಯವಿದೆ. ಈ ಸಮಯದಲ್ಲಾದರೂ ತಾವು ಸರಿ ಸಮಾನ ವೇತನ ಕೊಡಿಸಿ ನೌಕರರಿಗೆ ಒಳ್ಳೆ ಸುದ್ದಿ ಕೊಡಬೇಕು ಅಲ್ಲವೇ? ಅದನ್ನು ಬಿಟ್ಟು ಈಗಲೂ ತಾವು ಆ ನಿಟ್ಟಿನಲ್ಲಿ ಹೇಳಿಕೆ ಕೊಡದೆ ಡಿ.31ರ ಹೋರಟಕ್ಕೆ ಬೆಂಬಲವಿಲ್ಲ ಎಂದರೆ ತಾವು ಏನು ಮಾಡಲು ಹೊರಟಿದ್ದೀರಿ ಹೇಳುತ್ತೀರಾ?
ಇಲ್ಲ ನಮ್ಮ ಕೂಟ ಹಾಗೂ ಒಕ್ಕೂಟದಿಂದ ಸರಿ ಸಮಾನ ವೇತನ ಕೊಡಿಸಲು ಆಗುವುದಿಲ್ಲ ಎಂದಾದರೆ ತಾವು ಮೌನವಾಗಿ ಇದ್ದುಬಿಡಿ. ಸಂಬಳ ಹೆಚ್ಚಾಗಲಿ ಇಲ್ಲ ಆಗದೆ ಇರಲಿ ಅದನ್ನು ನಾವು ಅಧಿಕಾರಿಗಳ ಜತೆ ಸೇರಿ ನೋಡಿಕೊಳ್ಳುತ್ತೇವೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಂಬಂಧ ಹೋರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರೊಂದಿಗೆ ನಾವು ಸೇರಿ ಹೋರಾಟ ಮಾಡುತ್ತೇವೆ ಎಂದು ನೊಂದ ನೌಕರರು ಪ್ರಶ್ನಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ತಾವು ಉತ್ತರನ ಪೌರುಷ ಒಲೆಮುಂದೆ ಎಂಬಂತೆ ನೌಕರರಿಗೆ ದಾರಿ ತಪ್ಪಿಸುವ ಕೆಲಸ ಬಿಟ್ಟು ಸರಿ ಸಮಾನ ವೇತನ ಕೊಡಿಸುವತ್ತ ಮುಂದಾಗಿ ಇಲ್ಲ ಅದೂ ಕೂಡ ಈ 16 ದಿನದಲ್ಲೇ ಆಗಬೇಕು. ಇಲ್ಲ ಸರ್ಕಾರ ಇದಕ್ಕೆ ಒಪ್ಪಲಿಲ್ಲ ಎಂದಾದರೆ ಜಂಟಿ ಸಮಿತಿಯವರಂತೆ ಹೋರಾಟದ ದಿನಾಂಕ ಘೊಷಿಸಿ ನೌಕರರು ಅಧಿಕಾರಿಗಳಿಗೆ ಮನವಿ ಮಾಡಿ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...