NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ತುಳಿದವರು ಯಾರು? ಆರ್ಥಿಕವಾಗಿ ದಿವಾಳಿ ಅಂಚಿಗೆ ತಂದವರು ಇವರೇನೆ ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸತ್ಯ ಯಾವಾಗಲೂ ಅಗ್ನಿಯಷ್ಟೆ  ಶ್ರೇಷ್ಠ.  ಅದು ತಿಳಿದೋ ತಿಳಿಯದೋ ಹಚ್ಚಿಕೊಂಡರೆ ಸುಡದೆ ಬಿಡದು.

ಈ ಹಿಂದೆ ಸಾರಿಗೆ ಸಂಘಟನೆಗಳ ಮುಖಂಡರು ನಿಗಮಗಳ ಆಡಳಿತ ಮಂಡಳಿ ತೆಗೆದುಕೊಂಡ ನೌಕರರ ವಿರೋಧಿ ನಿಲುವುಗಳನ್ನು ಅಂದೇ ಧಿಕ್ಕರಿಸಿ ಹೋರಾಟ ಮಾಡಿದ್ದರೆ ಇಂದು ನೌಕರರಿಗೆ ಈ ರೀತಿ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ.

1993 ಮತ್ತು 96ರಲ್ಲಿ ಸಂಘಟನೆಗಳ ಮುಖಂಡರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಇಂದು ನೌಕರರು ಪ್ರತಿಯೊಂದಕ್ಕೂ ಹೋರಾಟ ಮಾಡಬೇಕು. ಇಲ್ಲ ಆಡಳಿತ ಮಂಡಳಿ ಮತ್ತು ಸರ್ಕಾರ ಕೊಟ್ಟಿದ್ದನ್ನು ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು.

ಇಂಥ ಸ್ಥಿತಿ ನೌಕರರಿಗೆ ಮುಂದೊಂದು ದಿನ ಬರುತ್ತದೆ ಎಂದು ಅಂದು ನೌಕರರ ಪರ ಸಂಘಟನೆಗಳು ಸ್ವಲ್ಪ ಯೋಚಿಸಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ಈಗಲೂ ನೌಕರರು ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ಸೌಲಭ್ಯದ ಜತೆಗೆ ವೇತನವನ್ನು ಪಡೆದುಕೊಳ್ಳುತ್ತಿದ್ದರು.

ಆದರೆ, ಅಂದು ಮಾಡಿದ ಎಡವಟ್ಟಿನಿಂದ ಇಂದು ಸರಿಯಾದ ವೇತನ ಪಡೆಯಲು ಆಗುತ್ತಿಲ್ಲ. ಜತೆಗೆ ಗ್ರಾಚ್ಯುಟಿಯನ್ನು ಅರ್ಧಕ್ಕರ್ಧ ಕಳೆದುಕೊಳ್ಳುತ್ತಿರಲಿಲ್ಲ. ಅಂದರೆ ಸಂಘಟನೆಗಳ ಮುಖಂಡರಿಗೆ ಅಂದು ಇದರ ಬಗ್ಗೆ ಅರಿವಿರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಏಕೆ ಅರಿವಿರಲಿಲ್ಲ ಇತ್ತು. ಆದರೆ, ಭವಿಷ್ಯದ ಬಗ್ಗೆ ಈಗೇಕೆ ಚಿಂತಿಸಬೇಕು ಎಂದು ಉದಾಸೀನ ಮಾಡಿದರ ಫಲವಾಗಿ ಇಂದು ನೌಕರರು ಮತ್ತು ಅಧಿಕಾರಿಗಳು ಆ ನೋವನ್ನು ಅನುಭವಿಸುತ್ತಿದ್ದಾರೆ.

ಇನ್ನು ಇಷ್ಟೆಲ್ಲ ಆದರೂ ನಾವು ನೌಕರರ ಪರವಾಗಿಯೇ ಇದ್ದೇವೆ ಎಂದು ಈಗಲೂ ಹೇಳುತ್ತಿದ್ದಾರೆ. ಆದರೆ  ಮಾಡುತ್ತಿರುವುದು ಮಾತ್ರ ಈಗಲೂ ಮೇಕೆ ಮೂತಿಗೆ ಮೊಸರು ಸವರುವ ಕೆಲಸವೆ. ಇದನ್ನು ನೌಕರರು ಅರಿತುಕೊಳ್ಳಬೇಕು. ಇಲ್ಲ ಹಿಂದೆ ಮಾಡಿದ ತಪ್ಪಿನ ಬಗ್ಗೆ ಒಮ್ಮೆ ಈ ಮಹಾನ್‌ ನಾಯಕರೆನಿಸಿಕೊಂಡವರು ವಿಮರ್ಶೆ ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ಈ ರೀತಿ ಮತ್ತೆ ಮತ್ತೆ  ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ  ಅದೇನೋ ಹೇಳುತ್ತಾರಲ್ಲ ಹಂಗೆ ಹಳ್ಳಕ್ಕೆ ತಳ್ಳಿ ತಲಾವೊಂದು ಕಲ್ಲು ಎಸೆದರೆ ನಿಗಮದ ನೌಕರರು ಮತ್ತು ಅಧಿಕಾರಿಗಳು ಅದರ ಯಾತನೆ ಅನುಭವಿಸುತ್ತಾರೆಯೇ ವಿನಾಃ ಸಂಘಟನೆಗಳ ಮುಖಂಡರಲ್ಲ.

ಈಗ ನೋಡಿ 2020 ಜನವರಿ 1ರಿಂದ ಆಗಬೇಕಿದ್ದ ವೇತನ ಹೆಚ್ಚಳವನ್ನು 2023ರ ಮಾರ್ಚ್‌ನಲ್ಲಿ ಮಾಡಿಸಿ ಅದರ ಹಿಂಬಾಕಿ ಕೊಡುವ ಬಗ್ಗೆ ಅಂದು ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಈಗಲೂ ನೌಕರರು/ ಅಧಿಕಾರಿಗಳು ಅದರ ಬಗ್ಗೆಯೇ ಯೋಚಿಸುವಂತೆ ಮಾಡಿದ್ದಾರೆ.

ಇಲ್ಲಿ ಸಂಘಟನೆ -ಸಂಘಟನೆಗಳ ಮುಖಂಡರ ಒಳ ಜಗಳದಲ್ಲಿ ನಿಗಮದ ಅಧಿಕಾರಿಗಳೂ / ನೌಕರರು ಆರ್ಥಿಕವಾಗಿ ದೀವಾಳಿತನವನ್ನು ಅನುಭವಿಸುವಂತಾಗಿದೆ. ಯಾವುದೇ ಸಂಘಟನೆ ಇರಲಿ ಮೊದಲು ನಿಗಮದ ಸಿಬ್ಬಂದಿಗೆ ಸಿಗಬೇಕಿರುವ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಒಳಗೊಳಗೆ ಕತ್ತಿ ಮಸೆಯುವ ಕೆಲಸ ಮಾಡಬಾರದು. ಇದು ಸಾರಿಗೆಯ ಕೆಲ ಸಂಘಟನೆಗಳಲ್ಲಿ ನಡೆಯುತ್ತಿದೆ.

ಇದು ಇನ್ನಾದರೂ ಸರಿಹೋಗಿ ನಿಗಮದ ಸಿಬ್ಬಂದಿಗಳಿಗೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಎಲ್ಲರೂ  ಹೋರಾಟ ಮಾಡುವುದಕ್ಕೆ ಮುಂದಾಗಬೇಕು.  ಇಲ್ಲದಿದ್ದರೆ ತಟಸ್ಥವಾಗಿರಬೇಕು ಅದನ್ನು ಬಿಟ್ಟು ಕಡ್ಡಿ ಅಳ್ಳಾಡಿಸುವ ಕೆಲಸ ಮಾಡಿದರೆ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಸ್ಥಿತಿಗೆ ಸಿಬ್ಬಂದಿಗಳನ್ನು ತಳ್ಳಿದಂತಾಗುತ್ತದೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ …!

ಇನ್ನು ಈ ಹಿಂದೆ ಸಾರಿಗೆ ಸಿಬ್ಬಂದಿಗಳ ಸೌಲಭ್ಯ ಕೊಡಿಸುವ ಬಗ್ಗೆ ನಡೆದಿರುವ ಕೆಲ ಬೆಳವಣಿಗೆಗಳ ಬಗ್ಗೆ ಕೆಬಿಎನ್‌ಎನ್‌ ನಾಗರಾಜು ಅವರು ವಿಡಿಯೋ ಮಾಡಿದ್ದು ಆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

 

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ