NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ನಲ್ಲಿ ತವರಿಗೆ ಹೊರಟ ಪತ್ನಿ – ಆಕೆ ಮೇಲಿನ ಕೋಪಕ್ಕೆ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಪತಿ!!

ವಿಜಯಪಥ ಸಮಗ್ರ ಸುದ್ದಿ

ನೆಲಮಂಗಲ: ಪತ್ನಿ ಫ್ರೀ ಬಸ್​ನಲ್ಲಿ ತವರಿಗೆ ಹೋಗಿದ್ದಕ್ಕೆ ಕೋಪಗೊಂಡ ಕುಡುಕ ಪತಿಯೊಬ್ಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಸಿಬ್ಬಂದಿ ಮೇಲೆ ಚಾಕು, ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನಲ್ಲಿ ನಡೆದಿದೆ.

ಉಚಿತ ಬಸ್ ಇದೆ ಎಂದು ತನಗೆ ಹೇಳದೆ ಕೇಳದೆ ಪತ್ನಿ ತವರಿಗೆ ಹೊಗಿದ್ದಾಳೆ ಎಂದು ಚಿಕ್ಕಸಂದ್ರದ ನಾಗ ಎಂಬಾತ ಸಿಟ್ಟಿಗೆದ್ದು ರಂಪಾಟ ನಡೆಸಿದ್ದಾನೆ. ಮೊದಲು ಚಾಕು ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ತಡೆದಿದ್ದಾರೆ.

ಅದಾದ ಬಳಿಕ ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾದಗಿದ್ದಾನೆ. ಆಗಲೂ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನಾಗನನ್ನು ತಡೆದಿದ್ದಾರೆ. ಇಲ್ಲದಿದ್ದರೆ ಸಾರಿಗೆ ನಿಗಮದ ಯಾವ ಸಿಬ್ಬಂದಿ ಈತನ ಕೋಪಕ್ಕೆ ತುತ್ತಾಗುತ್ತಿದ್ದರೋ ಗೊತ್ತಿಲ್ಲ.

ಇಲ್ಲಿ ಅಧಿಕಾರಿಗಳು ಕೂಡ ಕೆಲ ಪ್ರಯಾಣಿಕ ಮಹಿಳೆಯರು ಮಾಡುವ ತಪ್ಪಿಗೆ ಚಾಲನಾ ಸಿಬ್ಬಂದಿಯನ್ನು ಹೊಣೆಮಾಡಿ ದಂಡ ಅಮಾನತು ಮಾಡುತ್ತಾರೆ. ಇದರ ನಡುವೆ ತನ್ನ ಹೆಂಡತಿ ನನಗೆ ಹೇಳದೆ ತವರಿಗೆ ಹೋಗಿದ್ದಾಳೆ ಎಂದು ಅತ್ತ ಪತಿಯೂ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗುತ್ತಾನೆ.

ಇದನ್ನು ನೋಡಿದರೆ ಇಲ್ಲಿ ಸಾರಿಗೆ ಚಾಲನಾ ಸಿಬ್ಬಂದಿ ಮಾಡಿದ ತಪ್ಪಾದರೂ ಏನು? ಅಲ್ಲದೆ ಯಾರೋ ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ ಎಂಬುವುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಇದನ್ನು ಗಮನಿಸಿದರೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಯತ್ತಿರುವ ಸಿಬ್ಬಂದಿಗಳು ಒಂದು ರೀತಿ ಶಾಪಗ್ರಸ್ತರು ಎಂಬಂತೆ ಭಾಸವಾಗುತ್ತಿದೆ.

ಹೌದು! ಯಾರೋ ಪ್ರಯಾಣಿಕ ಮಹಿಳೆಯೊಬ್ಬರು ಉಚಿತ ಟಿಕೆಟ್‌ ಪಡೆಯದೆ ಉದಾಸೀನತೆಯಿಂದ ಕುಳಿತಿದ್ದರೆ ತನಿಖಾಧಿಕಾರಿಗಳು ಬಂದು ಆಕೆಗೆ ಏಕೆ ಟಿಕೆಟ್‌ ಕೊಟ್ಟಿಲ್ಲ ಎಂದು ಕಾರಣ ಕೇಳಿ ಮೆಮೋ ನೀಡುತ್ತಾರೆ. ಇತ್ತ ಆಕೆ ನಾನು ಕೇಳಿದರೂ ಆತನೆ ಟಿಕೆಟ್‌ ಕೊಟ್ಟಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ನಡುಗಿಕೊಂಡು ಸುಳ್ಳು ಹೇಳುತ್ತಾಳೆ. ಆಕೆ ಮಾತನ್ನು ನಂಬುವ ತನಿಖಾ ಸಿಬ್ಬಂದಿ ಇಲ್ಲೂ ನಿರ್ವಾಹಕನದೇ ತಪ್ಪು ಎಂಬಂತೆ ಬಿಂಬಿಸುತ್ತಾರೆ.

60 ಜನ ಪ್ರಯಾಣಿಸಬಹುದಾದ ಬಸ್‌ನಲ್ಲಿ 80-100 ಮಂದಿ ಪ್ರಯಾಣಿಸುತ್ತಿರುತ್ತಾರೆ ಈ ವೇಳೆ ನಿರ್ವಾಹಕರನ್ನು ಕೇಳಿ ಟಿಕೆಟ್‌ ಪಡೆದುಕೊಳ್ಳುವುದನ್ನು ಬಿಟ್ಟು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬತೆ ಕೆಲ ಮಹಿಳೆಯರು ನಡೆದುಕೊಂಡಿದ್ದರಿಂದ ಈಗಾಗಲೇ ನೂರಾರು ಮಂದಿ ನಿರ್ವಾಹಕರು ಅಮಾತುಗೊಂಡು ಮನೆಯಲ್ಲಿದ್ದಾರೆ.

ಇಲ್ಲಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ತಮ್ಮ ಚಾಲನಾ ಸಿಬ್ಬಂದಿಯನ್ನೇ ಹರಕೆಯ ಕುರಿ ಮಾಡುತ್ತಿದ್ದಾರೆ. ಇದು ಭಾರಿ ನೋವಿನ ಸಂಗತಿ. ಇನ್ನು ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಉನ್ನತ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿರುವುದು ಚಾಲನಾ ಸಿಬ್ಬಂದಿಗೆ ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ.

ಒಟ್ಟಾರೆ ಇಲ್ಲಿ ಚಾಲನಾ ಸಿಬ್ಬಂದಿ ಸ್ಥಿತಿ ಇತ್ತ ದರಿ ಅತ್ತ ಪುಲಿ ಎಂಬಂತಾಗಿರುವುದಂತು ಸತ್ಯ. ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದರಿಂದ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಜತೆಗೆ ಇಂಥ ಒತ್ತಡದಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ಡ್ಯೂಟಿ ಮಾಡುವ ಸ್ಥಿತಿ ನಿಜಕ್ಕೂ ಶೋಚನೀಯ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ