CRIMENEWSನಮ್ಮಜಿಲ್ಲೆ

ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೇ ನದಿಗೆ ನೂಕಿ ಹತ್ಯೆ ಮಾಡಲು ಯತ್ನಿಸಿದ ಪತ್ನಿ!

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನೇ ನದಿಗೆ ನೂಕಿ ಹತ್ಯೆ ಮಾಡಲು ಪತ್ನಿಯೇ ಯತ್ನಿಸಿದ ಆರೋಪ ಕೇಳಿ ಬಂದಿದ್ದು, ಸದ್ಯ ನದಿ ಪಾಲಾಗುತ್ತಿದ್ದ ಪತಿಯನ್ನು ಸಾರ್ವನಿಕರು ರಕ್ಷಿಸಿದ್ದಾರೆ.

ಇದು ರಾಯಚೂರು ತಾಲೂಕಿನ ಗುರ್ಜಾಪುರ ಸೇತುವೆ ಬಳಿ ನಡೆದಿದೆ. ಕೃಷ್ಣಾ ನದಿಗೆ ಪತ್ನಿ ನೂಕಿ ಅಲ್ಲಿಂದ ಪರಾರಿಯಾಗಿದ್ದಾಳೆ. ಇತ್ತ ನದಿಗೆ ಬಿದ್ದ ವ್ಯಕ್ತಿಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೀವ ಉಳಿಸಿಕೊಂಡು ಬಂದ ವ್ಯಕ್ತಿ ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಳು ಎಂದು ಹೇಳಿದ್ದಾರೆ. ಆದರೆ, ಘಟನೆ ಬಗ್ಗೆ ಇನ್ನೂ ವಿವರಣೆ ಸಿಕ್ಕಿಲ್ಲ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿರುವುದರಿಂದ ಮೈದುಂಬಿ ಹರಿಯುತ್ತಿದೆ.

ಈ ವೇಳೆ ಸೇತುವೆ ಮಾರ್ಗದಿಂದ ತೆರಳಿದ್ದ ನವದಂಪತಿ ಇದನ್ನು ಕಂಡು ಫೋಟೊ ತೆಗೆದುಕೊಳ್ಳಲು ನಿಂತಿದ್ದಾರೆ. ಮೊದಲು ಪತ್ನಿ ಫೊಟೋ ತೆಗೆದ ಪತಿ ಬಳಿಕ ತನ್ನ ಫೋಟೋ ತೆಗೆಯಲು ಪತ್ನಿಗೆ ಹೇಳಿದ್ದಾರೆ.

ಆಗ ಸೇತುವೆ ತುದಿಗೆ ನಿಲ್ಲಿಸಿದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನನ್ನನ್ನು ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸುತ್ತಿದ್ದಾರೆ.

ಅಲ್ಲದೆ ನಾನು ನದಿಗೆ ಬಿದ್ದ ಕೂಡಲೇ ಈಜಿಕೊಂಡು ಹೋಗಿ ಕಲ್ಲು ಬಂಡೆಯಲ್ಲಿ ಕುಳಿತುಕೊಂಡೆ. ಬಳಿಕ ರಕ್ಷಣೆಗಾಗಿ ಜೋರಾಗಿ ಕೂಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಹಗ್ಗದ ನೆರವಿನೊಂದಿಗೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ನನ್ನನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ದಂಪತಿ ಎಲ್ಲಿಯವರು, ಆಕೆ ಹೀಗೆ ಏಕೆ ಮಾಡಿದಳು ಎಂಬ ಬಗ್ಗೆ ಹಾಗೂ ಈ ಘಟನೆಯ ಬಗ್ಗೆಯೂ ನಿಖರ ಕಾರಣ ತಿಳಿದು ಬಂದಿಲ್ಲ.

Megha
the authorMegha

Leave a Reply

error: Content is protected !!