Please assign a menu to the primary menu location under menu

CrimeNEWSನಮ್ಮಜಿಲ್ಲೆವಿಡಿಯೋ

BMTC ಬಸ್‌ನಲ್ಲಿ ಕಿಟಕಿ ವಿಚಾರ: ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳಾ ಮಣಿಗಳಿಬ್ಬರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಫ್ರೀಯಾಗಿ ಸರ್ಕಾರಿ ಬಸ್‌ಗಳಲ್ಲಿ ಓಡಾಡುವುದಕ್ಕೆ ಅನುಕೂಲ ಮಾಡಿಕೊಟ್ಟ ಬಳಿಕ ಮಹಿಳೆ ಮಹಿಳೆಯರ ನಡುವೆ ಗಲಾಟೆ, ಹೊಡೆದಾಟಗಳು ಹೆಚ್ಚಾಗಿವೆ.

ಈ ಗಲಾಟೆಗಳು ಈಗ ಒಂದು ಹಂತ ಮೇಲಕ್ಕೆ ಹೋಗಿದ್ದು, ಚಪ್ಪಲಿಯಿಂದ ಹೊಡೆದಾಡಿಕೊಳ್ಳುವ ಮಟ್ಟವನ್ನು ತಲುಪಿದೆ. ಆದರೂ ಇಂಥವರಿಗೆ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವುದಕ್ಕೆ ಸರ್ಕಾರವಾಗಲಿ ಅಥವಾ ಸಾರಿಗೆ ಅಧಿಕಾರಿಗಳಾಗಲಿ ಮುಂದೆ ಬಾರದಿರುವುದು ಇತರ ಪ್ರಯಾಣಿಕರಲ್ಲಿ ಕೀಳು ಭಾವನೆಗೆ ಕಾರಣವಾಗಿದೆ.

ಹೌದು! ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ʼಶಕ್ತಿʼ ಯೋಜನೆಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ಬಸ್‌ಗಳು ಪ್ರತಿದಿನ ಫುಲ್‌ ರಷ್‌ ಆಗಿರುತ್ತವೆ. ಕರ್ನಾಟಕದ ಯಾವುದೇ ಬಸ್‌ಸ್ಟ್ಯಾಂಡ್‌ ನೋಡಿ ನಾರಿಮಣಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಇನ್ನು ಸೀಟು ಹಿಡಿಯಲು ಅನೇಕರು ಪ್ರಾಣ ಕಳೆದುಕೊಂಡಿದ್ದು ಇದೆ. ಈ ನಡುವೆ ಬಸ್‌ನಲ್ಲಿ ಸೀಟು ಹಿಡಿಯಲು ಜನರ ನಡವೆ ಫೈಟ್‌ ನಡೆಯುತ್ತಲೇ ಇದೆ.

ಬಹುತೇಕ ಘಟನೆಗಳಲ್ಲಿ ಬಸ್‌ನ ಸೀಟಿಗಾಗಿ ಹೆಣ್ಣುಮಕ್ಕಳೇ ಜಗಳವಾಡುವುದು, ಹೊಡೆದಾಡುವುದು ಮಾಡಿಕೊಂಡಿದ್ದಾರೆ. ಅದೇ ರೀತಿಯ ಮತ್ತೊಂದು ಘಟನೆ ಇದೀಗ ನಡೆದಿದೆ. ಫ್ರೀ ಪ್ರಯಾಣದ ಎಫೆಕ್ಟ್‌ನಿಂದ ರಾಜ್ಯದಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಫುಲ್‌ ರಷ್‌ ಆಗಿರುತ್ತವೆ. ಇದರ ಜತೆಗೆ ಬಸ್‌ ಹತ್ತುವ ಬಹುತೇಕ ಮಹಿಳೆಯರಿಗೆ ಕಿಟಕಿ ಸೈಡ್‌ ಸೀಟ್‌ನಲ್ಲೇ ಕುಳಿತುಕೊಳ್ಳಬೇಕು ಎಂಬ ಹಠ. ಈ ಹಠದಿಂದಲ್ಲೇ ನಿನ್ನೆ ಮಹಿಳೆಯರ ನಡುವೆ ದೊಡ್ಡ ಫೈಟ್‌ ನಡೆದಿದೆ.

ರಾಜ್ಯ ಸರ್ಕಾರದ ಉಚಿತ ಬಸ್ ಯೋಜನೆಯಿಂದ ಅನುಕೂಲ ಎಷ್ಟಿದೆಯೋ ಅಷ್ಟೇ ಅನಾನುಕೂಲಗಳಾಗುತ್ತಿವೆ. ತುಂಬಿ ತುಳುಕುತ್ತಿರುವ ಬಸ್‌ನಲ್ಲಿ ಕಿಟಕಿ ಓಪನ್ ಮಾಡೋ‌ ವಿಚಾರಕ್ಕೆ ಚಪ್ಪಲಿಯಿಂದ ಯುವತಿಯರಿಬ್ಬರು ಹೊಡೆದಾಡಿದ್ದಾರೆ.

ಬೆಂಗಳೂರಿನ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮೆಜೆಸ್ಟಿಕ್ ಟು ಪೀಣ್ಯಾ ಬಸ್‌ನಲ್ಲಿ ಈ ಘಟನೆ ನಡೆದಿದೆ.

ಮೆಜೆಸ್ಟಿಕ್‌ನಿಂದ‌ ಪೀಣ್ಯಾ ಕಡೆ ಈ ಬಸ್ ಸಂಚರಿಸುತ್ತಿತ್ತು. ಈ ವೇಳೆ ಈ ಬಸ್‌ನಲ್ಲಿ ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ಕಿರಿಕ್ ಆಗಿದೆ. ಅದು ಮಾತಿಗೆ ಮಾತು ಬೆಳೆದು ಚಪ್ಪಲಿ, ಶೂನಿಂದ ಪರಸ್ಪರ ಆ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಜನರು ಫ್ರೀ ಬಸ್‌ ಎಫೆಕ್ಟ್‌ ಬಗ್ಗೆ ಪರ-ವಿರೋಧವಾಗಿ ವ್ಯಾಪಕ ಚರ್ಚೆ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್