ಬೆಂಗಳೂರು: ಮಹಿಳೆಯ ನಗ್ನ ವಿಡಿಯೋವನ್ನು ವಾಟ್ಸಪ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿ ಬಳಿಕ ಬ್ಲ್ಯಾಕ್ ಮಾಡುತ್ತಿದ್ದ ಕೇರಳ ತ್ರಿಶೂರ್‌ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಎಂಬಾತನೆ ಬಂಧಿತ ಆರೋಪಿ. ಇನ್ನು ಇತ್ತ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇವಾಲಯದ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.
ಅರ್ಚಕನ ಕಾಮದಾಟ ಏನು?: ಬೆಂಗಳೂರಿನ ನಿವಾಸಿ ಮಹಿಳೆಯೊಬ್ಬರು ತನಗೆ ಮಾಟಮಂತ್ರ ಮಾಡಿಸಿದ್ದಾರೆಂದು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್‌ನನ್ನು ಈ ಮಹಿಳೆ ದೇವಾಲಯದಲ್ಲಿ ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಆಗ 24,000 ರೂ. ಕೊಟ್ಟರೆ ಪೂಜೆ ಮಾಡೋದಾಗಿ ಅರುಣ್ ಹೇಳಿದ್ದ.
ಇದಾದ ಬಳಿಕ ಮಹಿಳೆಯ ಫೋನ್ ನಂಬರ್ ಪಡೆದು ನಾನು ಯಾವಾಗ ಪೂಜೆ ಮಾಡಬೇಕು ಎಂದು ಫೋನ್‌ನಲ್ಲಿ ತಿಳಿಸುತ್ತೇನೆ ಆಗ ನೀವು ಬನ್ನಿ ಎಂದು ಹೇಳಿದ್ದ. ಮಹಿಳೆ ಸರಿ ಎಂದು ಒಪ್ಪಿಕೊಂಡು ವಾಸ್ ಬೆಂಗಳೂರಿಗೆ ಬಂದಿದ್ದರು.
ದೇವಸ್ಥಾನದಲ್ಲಿ ಪರಿಚಯವಾಗಿ ಫೋನ್ ನಂಬರ್ ಪಡೆದ ಬಳಿಕ ಕೆಲ ದಿನಗಳು ಸಂಪರ್ಕದಲ್ಲಿದ್ದರು. ಅದಾದ ಬಳಿಕ ಮಹಿಳೆಗೆ ಸಮಯವಿಲ್ಲದೆ ತಡರಾತ್ರಿಯಲ್ಲಿ ನಿರಂತರ ವಾಟ್ಸಪ್ ಕರೆ ಮಾಡುತ್ತಿದ್ದ. ಅದು ಕೂಡ ತಾನು ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡುತ್ತಿದ್ದ. ಅಲ್ಲದೇ ನಿಮಗೆ ಮಾಡಿರುವ ಮಾಟ ಮಂತ್ರ ಪರಿಹಾರ ಆಗಬೇಕಾದ್ರೆ ಸಂಪೂರ್ಣ ಬೆತ್ತಲಾಗಬೇಕು ಎಂದು ಹೇಳಿದ್ದಾನೆ.
ಅದಕ್ಕೆ ಮಹಿಳೆ ಇದು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ಆಗ ನೀವು ಬೆತ್ತಲಾಗಿಲ್ಲ ಅಂದ್ರೆ ನಿನ್ನ ಇಬ್ಬರು ಮಕ್ಕಳು ಸಾಯೋ ಹಾಗೆ ರಿಟರ್ನ್ ಪೂಜೆ ಮಾಡ್ತೀನಿ ಅಂತ ಬೆದರಿಕೆಯೊಡ್ಡಿದ್ದಾನೆ. ಈ ಕಿರಾತಕ ಅರ್ಚಕನ ಬೆದರಿಕೆಗೆ ಹೆದರಿದ ಮಹಿಳೆ ಬೆತ್ತಲಾಗಿದ್ದಾಳೆ.

ಬಳಿಕ ಬೆತ್ತಲೆ ಆಗಿರೋದನ್ನು ಅರ್ಚಕ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಆ ನಂತರ ಅದೇ ವಿಡಿಯೋ ಇಟ್ಟುಕೊಂಡು ಕರೆದಾಗಲೆಲ್ಲ ಕೇರಳಕ್ಕೆ ಬರುವಂತೆ ಒತ್ತಾಯ ಮಾಡಿದ್ದಾನೆ. ನೀನು ಬರುವಾಗ ಹೇಳು ರೂಂ ಬುಕ್ ಮಾಡುತ್ತೀಬು ಅಂತ ಚಿತ್ರಹಿಂಸೆ ಕೊಟ್ಟಿದ್ದಾನೆ. ಅದರಿಂದ ಬೇಸತ್ತ ಮಹಿಳೆ ಅರ್ಚಕ ಅರುಣ್ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನು ಈ ಇಬ್ಬರ ವಿರುದ್ಧ ಅಸಭ್ಯ ವರ್ತನೆ ಮತ್ತು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ ಆರೋಪದಡಿ ಮಹಿಳೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅರ್ಚಕ ಅರುಣ್‌ನನ್ನ ಬಂಧಿಸಿದ್ದಾರೆ. ಆದರೆ ವಿಷಯ ತಿಳಿಯುತ್ತಿದ್ದಂತೆ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Related
