ಮೈಸೂರು: ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪನ್ನು ವೈ.ರಾಮಕೃಷ್ಣ ಮೂಡಿಸಿದ್ದು, ಅವರ ಸೇವೆ ಮತ್ತು ಹೋರಾಟ ಇಂದಿಗೂ ಸಹ ಸ್ಮರಣೀಯವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಇಂದು ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತೀರ್ಣ ಕೇಂದ್ರ, ಮಾನಸಗಂಗೋತ್ರಿ ಮೈಸೂರು ಇವರ ವತಿಯಿಂದ ಇಂದು ರಾಣಿ ಬಹಾದ್ದೂರ್ ಸಭಾಂಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ವೈ. ರಾಮಕೃಷ್ಣ ಅವರ ಸಾಧನೆ ( ಬದುಕು, ಸಂಘಟನೆ ಮತ್ತು ರಾಜಕಾರಣ) ಎಂಬ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇವರು ವಿಧಾನ ಸಭೆಯಲ್ಲಿ ಮಾತನಾಡುವಂತಹ ಶೈಲಿಯೇ ಆಕರ್ಷಣೆಯಾಗಿತ್ತು ರಾಜಕೀಯ ಪಕ್ಷಗಳು ಇವರನ್ನು ನಾಯಕನಾಗಿ ಮಾಡಿಕೊಳ್ಳಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಇವರ ನಡವಳಿಕೆ, ಭಾಷಣಗಳು, ಕಮಿಟ್ ಮೆಂಟ್‌ಗಳು ಇವರನ್ನು ಇಲ್ಲಿಯವರೆಗೂ ಕರೆತಂದಿತು. ಇವರು ಯಾರ ಜತೆ ಇದ್ದರೂ ರಾಯಲ್ ಆಗಿ ಸಿನ್ಸಿಯರ್ ಆಗಿ ಇರುತ್ತಿದ್ದರು ಎಂದು ಹೇಳಿದರು.
ಇವರು ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ಸುಧಾರಣೆಗಾಗಿ, ಸಮಾಜದಲ್ಲಿ ಸುಧಾರಣೆ ತರಬೇಕೆಂದು ಹೋರಾಡಿದವರು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಶ್ರಮಿಸಿದವರು ರಾಮಕೃಷ್ಣ ಅವರು ಎಂದು ತಿಳಿಸಿದರು.
ಇವರು ವಿಧಾನ ಸೌಧದಲ್ಲಿ ನಿಂತು ಮಾತನಾಡುತ್ತಿದ್ದರೆ ರಾಮಕೃಷ್ಣ ಎಂದು ಕಾಣುತ್ತಿರಲಿಲ್ಲ ರಾಮಕೃಷ್ಣ ರಾವ್ ಎಂದು ಕಾಣುತ್ತಿದ್ದರು. ಇವರು ವಿಧಾನ ಸೌಧದಲ್ಲಿ ಮಾಡಿದಂತಹ ಹೆಸರು ಬೇರೆ ಯಾರು ಸಹ ಮಾಡಿಲ್ಲ. ಈ ಸಮಾಜದಲ್ಲಿ ಪ್ರಾಮಾಣಿಕ ರಾಜಕಾರಣಿ ಇದ್ದರು ಎಂದರೆ ಅವರೇ ರಾಮಕೃಷ್ಣ ಅವರು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಎನ್. ಕೆ.ಲೋಕನಾಥ್ ಮಾತನಾಡಿ ವೈ.ರಾಮಕೃಷ್ಣ ಅವರು ಸಮಾಜದಲ್ಲಿ ಏನೆಲ್ಲ ಸುಧಾರಣೆ ಮಾಡಿದ್ದರೆ ಎಂಬುದನೆಲ್ಲ ನಾವು ಸ್ಮರಿಸಬೇಕು. ಅವರು ಮಾಡಿರುವಂತಹ ಕೆಲಸದ ಮೇಲೆ ಗೌರವವನ್ನು ಇಡಬೇಕು. ಅವರು ನಡೆದುಬಂದಂತಹ ಆದಿಯಲ್ಲಿ ನಾವು ನಡೆಯಬೇಕು. ಅವರು ಹೇಳಿರುವಂತಹ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವರಾದ ಸೋಮಶೇಖರ್, ಸಿ.ಎಂ ಇಬ್ರಾಹಿಂ, ಕೋಟೆ ಎಂ.ಶಿವಣ್ಣ, ವಿಶ್ವನಾಥ್, ಕೆ.ಪಿ.ಸಿ.ಸಿ..ಎಸ್.ಸಿ. ರಾಜ್ಯ ಘಟಕದ ಅಧ್ಯಕ್ಷರಾದ ಆರ್.ಧರ್ಮಸೇನಾ, ಮಾತಾಂಗ ಫೌಂಡೇಶನ್ ನ ಅಧ್ಯಕ್ಷರಾದ ಆರ್.ಲೋಕೇಶ್,ಖಜಾಂಚಿ ಆರ್.ಟಿ.ಒ.ವೆಂಕಟೇಶ್, ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಸದಾಶಿವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Related

You Might Also Like
ಎಲ್ಲವೂ ಕೋರ್ಟ್ನಲ್ಲಿ ಇತ್ಯರ್ಥ ಆಗತ್ತೆ: 3.15 ಕೋಟಿ ರೂ. ವಂಚನೆ ಆರೋಪಕ್ಕೆ ಧ್ರುವ ಮ್ಯಾನೇಜರ್ ಸ್ಪಷ್ಟನೆ
ಬೆಂಗಳೂರು: ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ವಿರುದ್ಧ ಈಗ 3.15 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. 2016ರ ಜಗ್ಗು ದಾದ ಸಿನಿಮಾ ನಿರ್ದೇಶಕ ಹಾಗೂ...
ಕುಡಿದು ಠಾಣೆಗೆ ನುಗ್ಗಿ ಪೊಲೀಸರಿಗೇ ಅವಾಜ್ ಹಾಕಿ ಅಧಿಕಾರಿ ಸಹೋದರನ ರಂಪಾಟ
ಗದಗ: ಪೊಲೀಸ್ ಅಧಿಕಾರಿ ಸಹೋದರನೊಬ್ಬ ರಾತ್ರಿ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರಿಗೆ ಅವಾಜ್ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಕಿರಿಕ್ ಮಾಡಿಕೊಂಡ ಘಟನೆ ಬೆಟಗೇರಿ ಪೊಲೀಸ್...
ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆ ಆರೋಪ: FIR ದಾಖಲು
ಬೆಂಗಳೂರು: ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರು ಸಿನಿಮಾ ಮಾಡುವುದಾಗಿ ನಂಬಿಸಿ 3.15 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪದಡಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ...
KSRTC ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಅಮಾನತು: ಎಸ್ಪಿ ಆದೇಶ
ಕೂಡ್ಲಿಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕರ್ತವ್ಯ ನಿರತ ಚಾಲಕನ ಮೇಲೆ ಮನಬಂದಂತೆ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಚಪ್ಪಲಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಇಂದು...
ರಾತ್ರೋರಾತ್ರಿ ಡಾ.ವಿಷ್ಣುವರ್ಧನ್ ಸಮಾಧಿ ತೆರವು- ಅಭಿಮಾನಿಗಳ ಆಕ್ರೋಶ
ಬೆಂಗಳೂರು: ರಾತ್ರೋರಾತ್ರಿ ಅಭಿಮಾನಿಗಳ ವಿರೋಧದ ನಡುವೆಯೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನ ರಾತ್ರೋರಾತ್ರಿ...
ವಿಜಯಪಥ ವರದಿ ಪರಿಣಾಮ: ವರದಿ ಬಂದ ಅರ್ಥಗಂಟೆಯಲ್ಲಿ ಹಣ ಪಾವತಿ ಸಂಬಂಧ ಲೆಕ್ಕಾಧಿಕಾರಿಗೆ ಟಿಪ್ಪಣಿ ಬರೆದ ಡಿಸಿ
ವಿಜಯಪುರ: KKRTC ವಿಜಯಪುರ: ನಿವೃತ್ತ ನೌಕರನಿಗೆ 29ಲಕ್ಷ ಕೊಡುವಂತೆ ಹೈ ಕೋರ್ಟ್ ತೀರ್ಪು- ಈ ಆದೇಶವನ್ನೇ ಉಲ್ಲಂಘಿಸುತ್ತಿರುವ ಡಿಸಿ! ಎಂಬ ಶೀರ್ಷಿಕೆಯಡಿ ವಿಜಯಪಥ ದಲ್ಲಿ ವರದಿ ಬಂದ ಕೇವಲ...
ಲಾಲ್ಬಾಗ್: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್ಬಾಗ್ನಲ್ಲಿ ಆಯೋಜಿಸಿರುವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅವರ...
KKRTC ವಿಜಯಪುರ: ನಿವೃತ್ತ ನೌಕರನಿಗೆ 29ಲಕ್ಷ ಕೊಡುವಂತೆ ಹೈ ಕೋರ್ಟ್ ತೀರ್ಪು- ಈ ಆದೇಶವನ್ನೇ ಉಲ್ಲಂಘಿಸುತ್ತಿರುವ ಡಿಸಿ!
ವಿಜಯಪುರ: ಉಚ್ಚ ನ್ಯಾಯಾಲಯ ಆದೇಶಕ್ಕೂ ಕಿಮ್ಮತ್ತು ಕೊಡದೆ ಹಿಂಬಾಕಿ ವೇತನ ನೀಡಲು ಸತಾಯಿಸುತ್ತಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ...