NEWSನಮ್ಮಜಿಲ್ಲೆನಮ್ಮರಾಜ್ಯ

ಗ್ರಾಮಾಂತರ ಪತ್ರಕರ್ತರಿಗೆ ಬಸ್‌ ಪಾಸ್‌: ಅವರಪ್ಪನಾಣೆ ಒಬ್ಬರಿಗೂ ಕೊಡಲು ಸಾಧ್ಯವಿಲ್ಲ- ಬಂಗ್ಲೆ ಮಲ್ಲಿಕಾರ್ಜುನ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಲ್ಲಿ ತಾರತಮ್ಯ ತೋರಿ ಕರಾಳ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಧಿಕ್ಕಾರ ಧಿಕ್ಕಾರ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.

ಸರ್ಕಾರ ಹೊರಡಿಸಿರುವ ಈ ಆದೇಶ ನಾಯಿ ತಿ*ದಲ್ಲಿ ಜೇನು ಇಟ್ಟಾಂತಾಗಿದೆ. ಇದೇ 26/9/2024 ರಂದು ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಸಿದ್ದರಾಮಯ್ಯ ಅವರ ಸರ್ಕಾರ ಹೊರಡಿಸಿರುವ ಆದೇಶ ತಾರತಮ್ಯ ಹಾಗೂ ಅವೈಜ್ಞಾನಿಕ ವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತಿದ್ದು, ಈ ಕರಾಳ ಆದೇಶಕ್ಕೆ ರಾಜ್ಯಾಧ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜತೆಗೆ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ನಮ್ಮ ಕಾನಿಪ ಧ್ವನಿಯಿಂದ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. 1)ಮಾಧ್ಯಮ ಪಟ್ಟಿಯಲ್ಲಿರಲೇಬೇಕೆಂಬ ಮಾನದಂಡಕ್ಕೆ ಸಂಬಂಧಿಸಿದಂತೆ, ಮಾಧ್ಯಮ ಪಟ್ಟಿಯಲ್ಲಿರದ ಪತ್ರಕರ್ತರು ನಕಲಿ ಪತ್ರಕರ್ತರೇ?

2)ತಾವು ಜಾಹೀರಾತಿನಲ್ಲಿ ತಿಳಿಸಿರುವಂತೆ ವಿದ್ಯುನ್ಮಾನ/ ಮುದ್ರಣ ಮಾಧ್ಯಮ ಸಂಸ್ಥೆಗಳ 5,222 ಪತ್ರಕರ್ತರಿಗೆ ಮಾತ್ರ ಅನುಕೂಲ. ರಾಜ್ಯದಲ್ಲಿ 5,222 ಮಾತ್ರ ಪತ್ರಕರ್ತರು ಇರುವುದಷ್ಟೆಯೇ?

3)ದಿನ ಪತ್ರಿಕೆ ಹಾಗೂ ಟಿವಿಗಳಲ್ಲಿ ಕೆಲಸ ನಿರ್ವಹಿಸುವವರು ಮಾತ್ರ ಪತ್ರಕರ್ತರೇ? ನಿಯತಕಾಲಿಕ ಪತ್ರಿಕೆಗಳಲ್ಲಿ ಅಂದರೆ ವಾರ, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರು ಪತ್ರಕರ್ತರಲ್ಲವೇ? ಅವರೇನಾದರೂ ಭಯೋತ್ಪಾದಕರೇ?

4)ಅರ್ಜಿದಾರರು ಪೂರ್ಣಾವಧಿಗೆ ನೇಮಕಗೊಂಡು ನಾಲ್ಕು ವರ್ಷಗಳಾಗಿರಬೇಕು ಜತೆಗೆ ನೇಮಕಾತಿ ಆದೇಶ, ವೇತನ ರಸೀತಿ ಒದಗಿಸಬೇಕೆಂದಿರುವುದು ದುರಾದೃಷ್ಟವೇ ಸರಿ. ಇಂದು ಅಕ್ರೆಡೇಷನ್ ಹೊಂದಿರುವ ಪತ್ರಕರ್ತರುಗಳಿಗೇ ಮಾಲೀಕರುಗಳು ಕಾಯಂ ನೇಮಕಾತಿ ಆದೇಶ ಪತ್ರ ನೀಡಿರುವುದಿಲ್ಲ. ಜತೆಗೆ ಕ್ಷೇಮನಿಧಿ ಅಂತೂ ಸಂಪಾದಕರುಗಳಿಂದ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಓಡಾಡಲು ಇಷ್ಟೆಲ್ಲಾ ನಿಯಮಗಳು ಬೇಕಾ ಎಂಬ ಪ್ರಶ್ನೆಗಳು ರಾಜ್ಯದಲ್ಲಿರುವ ಪ್ರತಿಯೊಬ್ಬ ಪತ್ರಕರ್ತರನ್ನು ಕಾಡುತ್ತಿದೆ.

ಆರ್.ಎನ್.ಐ. ಪ್ರಮಾಣ ಪತ್ರ ಪತ್ರಕರ್ತರಿಗೆ ಪರವಾನಿಗೆ ಪತ್ರ ಇದ್ದಂತೆ, ಇದರ ಜತೆ ನಿರಂತರವಾಗಿ ಪ್ರಕಟವಾಗುವ ಸಂಚಿಕೆಗಳು ಹಾಗೂ ಪ್ರಸಾರ ಸಂಖ್ಯೆಯನ್ನು ಪರಿಗಣಿಸಬೇಕಿತ್ತು ಸರ್ಕಾರ.

ಆದರೆ, ಹಿತ್ತಾಳೆ ಕಿವಿ ಹೊಂದಿರುವ ಮುಖ್ಯಮಂತ್ರಿಗಳು ಕೆಲ ಹೊಗಳು ಭಟ್ಟರ ಮಾತಿಗೆ ಮನ್ನಣೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ಅಪರಾಧವೆಸಗಿದಂತಾಗಿದೆ. ಇನ್ನೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಒಬ್ಬ ವಿತರಕನಾಗಿ, ಪತ್ರಕರ್ತನಾಗಿ ಬಂದಿದ್ದರೂ ಪತ್ರಕರ್ತರ ನೋವು ಇವರಿಗೆ ಮನವರಿಕೆ ಇಂದಿಗೂ ಆಗದಿರುವುದು ವಿಷಾದನೀಯ. ಬರೀ ಸಭೆ ಸಮಾರಂಭಗಳಲ್ಲಿ ರಾಜಕಾರಣಿಯಂತೆ ಪತ್ರಕರ್ತರಿಗೆ ಆಶ್ವಾಸನೆ ಕೊಡವುದೊಂದೆ ಆಗಿದೆ ಎಂದೆನಿಸುತ್ತಿದೆ.

5) ರಾಜ್ಯದ ಎರೆಡೂವರೆ ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ವಾರ್ಷಿಕ 1800 ಕೋಟಿ ರೂ.ಗಳು ವ್ಯಯ ಮಾಡಿ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್ ಪಾಸ್ ಅದೂ ಆಧಾರಕಾರ್ಡ್ ಎಂಬ ಮಾನದಂಡ ಹೊಂದಿದ್ದರೆ ಸಾಕು ಎಂಬ ನಿಯಮ ವಿಧಿಸಿರುವ ಸಾಮಾಜಿಕ ಹರಿಕಾರರಾದ ಸಿದ್ದರಾಮಯ್ಯನವರು ಕೇವಲ 16 ಕೋಟಿ ರೂ.ಗಳಿಗೆ ಗ್ರಾಮಾಂತರ ಪತ್ರಕರ್ತರಿಗೆ ಇಷ್ಟೆಲ್ಲಾ ಮಾನದಂಡಗಳನ್ನು ಹಾಕಬೇಕಿತ್ತಾ?

ಇನ್ನು ಇದೇನಾ ನಿಮ್ಮ ಸಾಮಾಜಿಕ ಹರಿಕಾರತನ? ಈಗ ನಮಗೆ ಈ ಪ್ರಶ್ನೆ ಹಾಗೂ ನಿಮ್ಮ ಮುಖವಾಡ ಗೋಚರಿಸುತ್ತಿದೆ ಸಿದ್ದರಾಮಯ್ಯನವರೇ. 7 ಕೋಟಿ ಜನರ ನಾಡಿ ಮಿಡಿತ ಅರಿತಿರುವ ತಾವು 15 ಬಜೆಟ್‌ ಮಂಡಿಸಿರುವ ತಮಗೆ ಕೇವಲ 12,000 ಗ್ರಾಮಾಂತರ ಪತ್ರಕರ್ತರ ಕಷ್ಟ ಸುಖ ನೋವನ್ನು ಅರಿಯುವುದಲ್ಲಿ ವಿಫಲರಾಗಿದ್ದೀರಿ.

ಎರೆಡೂವರೆ ಕೋಟಿ ಮಹಿಳೆಯರಿಗಿರುವ ಬೆಲೆ ರಾಜ್ಯದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜ ತಿದ್ದುವ ಹಾಗೂ ಸಾರ್ವಜನಿಕರು ಸರ್ಕಾರದ ಮಧ್ಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಹನ್ನೆರೆಡು ಸಾವಿರ ಪತ್ರಕರ್ತರಿಗಿಲ್ಲವೇ? ಈ ಎಲ್ಲಾ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು.

6)ಇಷ್ಟೆಲ್ಲ ಅಂಕಿ ಅಂಶಗಳ ಸಮೇತ ನಾಡಿನ ಪತ್ರಕರ್ತರಿಗೆ ಅನ್ಯಾಯವಾಗಿದ್ದರೂ ಕೂಡ ಕೆಲ ಪತ್ರಕರ್ತರ ಸಂಘಟನೆಗಳು ಸಿದ್ದರಾಮಯ್ಯನವರಿಗೆ ಅಭಿನಂದನೆ ನೆಪದಲ್ಲಿ ಬಹುಪರಾಕ್ ಹಾಡಿ ಪತ್ರಕರ್ತರ ಸಮಾಧಿಗಳ ಮೇಲೆ ಸೌಧ ನಿರ್ಮಾಸಿ ಜೀವನದಲ್ಲಿ ಸಾಧಿಸಿರುವುದು ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯರಾಗಿ ದೊಡ್ಡಸ್ಥಿಕೆ ಸಾಧಿಸುವುದೊಂದೇನಾ ಎಂಬ ನೋವು ಕಾಡುತ್ತಿದೆ.

ಜತೆಗೆ ಯಾವೊಬ್ಬ ತಾಲೂಕು ವರದಿಗಾರರಿಗೂ ದೊಡ್ಡ ದೊಡ್ಡ ಪತ್ರಿಕೆಗಳ ಮಾಲೀಕರು ಇಂದಿನವರೆಗೂ ಕಾಯಂ ನೇಮಕಾತಿ ಆದೇಶ ಪತ್ರ ನೀಡಿಲ್ಲ. ಆ ನಿಟ್ಟಿನಲ್ಲಾದರೂ ನಾವೆಲ್ಲರೂ ಪ್ರಯತ್ನ ನಡೆಸಿ ಸ್ಮಶಾನದ ಹಾದಿ ಹಿಡಿದಿರುವ ನೊಂದಂತ ನಾಡಿನ ಪತ್ರಕರ್ತರಿಗೆ ಆಸರೆಯಾಗೋಣ ವೆನ್ನುತ್ತಾ, ಗ್ರಾಮಾಂತರ ಪತ್ರಕರ್ತರಿಗೆ ಸರ್ಕಾರ ಮಾಡಿರುವ ಆದೇಶ ನಿಜಕ್ಕೂ ನಾಯಿ ತಿ*ದಲ್ಲಿ ಜೇನು ಇಟ್ಟಂತಾಗಿದೆ.

ಅಂದರೆ ಈ ಜೇನು ಪೂಜೆಗೂ ಬರುವುದಿಲ್ಲ ಜತೆಗೆ ತಿನ್ನುವುದಕ್ಕೂ ಆಗುವುದಿಲ್ಲ ಎಂಬ ಸ್ಥಿತಿಯಲ್ಲಿ ನಮ್ಮ ನಾಡಿನ ಪತ್ರಕರ್ತರು ಎನ್ನುತ್ತಾ ಈಗ ಜಾರಿಯಾಗಿರುವ ಆದೇಶ 5222 ಸಂಖ್ಯೆಯ ಪತ್ರಕರ್ತರಲ್ಲಿ ಕನಿಷ್ಠ 100 ಸಂಖ್ಯೆ ಪತ್ರಕರ್ತರು ಈ ಕಠಿಣ ನಿಯಮದಿಂದ ಪಾಸ್‌ ಪಡೆಯಲು ಸಾಧ್ಯವಿಲ್ಲ.

ಇನ್ನು ಕಾಟಚಾರಕ್ಕೆ ಸರ್ಕಾರ ಇಲ್ಲವೆನ್ನದೇ ಸಮಸ್ತ ಪತ್ರಕರ್ತರ ಕಿವಿಗೆ ಹೂವು ಮುಡಿಸುವ ಕಾರ್ಯದಲ್ಲಿ ತೊಡಗಿರುವುದು ಸ್ಪಷ್ಟ. ಕಾರಣ ಈವರೆಗೂ ತಾಲೂಕು ಹೋಬಳಿಯಲ್ಲಿ ಇರುವ ಪತ್ರಕರ್ತರನ್ನು ಬಿಡಿ ವರದಿಗಾರರು ಎಂದೇ ಕರೆಯಲಾಗುತ್ತಿದೆ. ಜತೆಗೆ 1 ಸಾವಿರರಿಂದ 5 ಸಾವಿರ ರೂಪಾಯಿ ಸಂಭಾವನೆ ಕೊಡುವುದೇ ಹೆಚ್ಚು. ಅಂದ ಮೇಲೆ ಅವರಿಗೆ ನೇಮಕಾತಿ ಆದೇಶ ಪತ್ರ ನೀಡುವುದು ಎಲ್ಲಿಂದ? ಇದನ್ನು ಗಮನಿಸಿದರೆ ನೀವು ಗ್ರಾಮಾಂತರ ಪತ್ರಕರ್ತರಿಗೊಬ್ಬರಿಗೂ ಪಾಸ್‌ ವಿತರಿಸಲು ಸಾಧ್ಯವೇ ಇಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ KSRTC ಬಸ್‌-ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್