NEWSನಮ್ಮರಾಜ್ಯರಾಜಕೀಯ

ಬಜೆಟ್‌ನಲ್ಲಿ ಸಾರಿಗೆ ನೌಕರರಿಗೆ ದೊಡ್ಡ ಗಾತ್ರದ ಮೊಟ್ಟೆ ಭಾಗ್ಯ ಕರುಣಿಸಿದ ಹಣಕಾಸು ಸಚಿವರೂ ಆದ ಸಿಎಂ ಬೊಮ್ಮಾಯಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ನೌಕರರಿಗೆ ಈ ಬಾರಿಯೂ ದೊಡ್ಡಗಾತ್ರದ ಮೊಟ್ಟೆಯನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರುಣಿಸುವ ಮೂಲಕ ನೌಕರರ ಆಸೆಗೆ ತಣ್ಣೀರು ಎರಚಿದ್ದಾರೆ.

ಹೌದು! ಸಾರಿಗೆ ನೌಕರರು ಕಳೇದ 2016ರ ಜನವರಿ 1ರಂದು ವೇತನ ಪರಿಷ್ಕರಣೆ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ವೇತನ ಹೆಚ್ಚಳ ಮಾಡಲಾಗಿಲ್ಲ. ಹೀಗಾಗಿ ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಒಳ್ಳೆ ವೇತನ ನೀಡುವ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ, ನೌಕರರ ಬೇಡಿಕೆಯನ್ನು ಕಡಿಗಣಿಸಿರುವ ಬಸವರಾಜ ಬೊಮ್ಮಾಯಿ ಅವರು ನೌಕರರ ನಿರೀಕ್ಷೆಯನ್ನು ಹುಸಿಗೊಳಿಸುವ ಮೂಲಕ ಅವರನ್ನು ಕಡೆಗಣಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಕೋವಿಡ್‌ ಸಮಯದಲ್ಲಿ ನೌಕರರಿಗೆ ಸುಮಾರು 6 ಸಾವಿರ ಕೋಟಿ ವರೆಗೂ ಅನುದಾನ ನೀಡಿದ್ದೇವೆ ಎಂದು ಮೌಖಿಕವಾಗಿ ಹೋದೆಡೆಯಲ್ಲ ಹೇಳಿಕೊಳ್ಳುತ್ತಿದ್ದದ ಸಾರಿಗೆ ಸಚಿವರು ಈ ನೌಕರರ ಸಮಸ್ಯೆಗ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇವೆ. ನೌಕರರಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದೇ ಹೇಳಿಕೊಂಡು ಬರುತ್ತಿದ್ದರು. ಆದರೆ ಈ ಬಜೆಟ್‌ನಲ್ಲಿ ಸಾರಿಗೆ ನಿಗಮಗಳ ನೌಕರರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಇಲ್ಲಿ ಬಸ್‌ಗಳ ಖರೀದಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ನೌಕರರ ವೇತನದ ಬಗ್ಗೆ ಈವರೆಗೂ ಮುಖ್ಯಮಂತ್ರಿಗಳು ಮಾತನಾಡದಿರುವುದು ಖೇದಕರ ಸಂಗತಿಯಾಗಿದೆ. ಇದನ್ನು ಗಮನಿಸಿದರೆ ರಾಜ್ಯ ಬಿಜೆಪಿ ಸರ್ಕಾರ ನೌಕರರ ಪರ ಎಂದು ಮಾತಿನಲ್ಲಷ್ಟೇ ಹೇಳುತ್ತಿದೆ ಎಂಬುವುದು ಸಾಬೀತಾಗಿದೆ ಎಂದು ನೌಕರರು ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.

ಇನ್ನು ಕಳೆದ 7 ವರ್ಷಗಳಿಂದಲೂ ನೌಕರರಿಗೆ ವೇತನ ಹೆಚ್ಚಳ ಮಾಡದೆ ಕಡಿಮೆ ವೇತನದಲ್ಲೇ ದುಡಿಯುತ್ತಿರುವ ಮಂದಿಯನ್ನುಇನ್ನಷ್ಟು ಕಡೆಗಣಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆದರೆ ಈ ಬಗ್ಗೆ ಚಕಾರವೆತ್ತಬೇಕಿರುವ ವಿಪಕ್ಷಗಳು ಮೌನವಹಿಸಿರುವುದು ಇನ್ನಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ಇದನ್ನು ಗಮನಿಸಿದರೆ ಆಡಳಿತ ಪಕ್ಷದ ಜತೆಗೆ ವಿಪಕ್ಷಗಳು ಸೇರಿಕೊಂಡು ಸಾರಿಗೆ ನಿಗಮಗಳನ್ನು ಮುಗಿಸುವ ಹುನ್ನಾರ ನಡೆಸುತ್ತಿವೆಯೇ ಎಂಬ ಅನುಮಾನ ಮೂಡಿಸುವಂತಿದೆ. ನೌಕರರ ಭವಿಷ್ಯದ ಜತೆ ಚಲ್ಲಾಟವಾಡುತ್ತಿರುವ ರಾಜಕೀಯ ಪಕ್ಷಗಳ ನಡೆಯನ್ನು ಪ್ರಜಾಪ್ರಭುತ್ವದಲ್ಲಿ ಖಂಡಿಸುವುದಕ್ಕೆ ಜನಸಾಮಾನ್ಯರೆ ಬರಬೇಕು ಎಂಬ ಸಂದೇಶವನ್ನು ನೀಡುವಂತೆ ಕಾಣುತ್ತಿದೆ.

ಒಟ್ಟಾರೆ ಸಾರಿಗೆ ನೌಕರರಿಗೆ ಕಳೆದ 7 ವರ್ಷದಿಂದಲೂ ವೇತನ ಹೆಚ್ಚಳ ಮಾಡದೆ ಅವರನ್ನು ಕಡೆಗಣಿಸಿಕೊಂಡು ಬರುತ್ತಿರುವುದು ಸರ್ಕಾರ ನಿಗಮಗಳನ್ನು ಖಾಸಗಿಯವರಿಗೆ ಒಪ್ಪಿಸುವುದಕ್ಕೆ ಮಾಡುತ್ತಿರುವ ಪಿತೂರಿ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ KSRTC ಬಸ್‌-ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್...