CrimeNEWS

ಅಕ್ರಮ ಮಾರಾಟಕ್ಕೆ ಮದ್ಯ ಸಾಗಿಸುತ್ತಿದ್ದ ನಾಲ್ವರ ಬಂಧನ

ಪ್ರತ್ಯೇಕ ದಾಳಿಯಲ್ಲಿ 1.22 ಲಕ್ಷ ರೂ. ಮೌಲ್ಯದ ಮದ್ಯ ವಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಸಾಗಾಣಿಕೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ  ಮದ್ಯದ ಬಾಟಲ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಯಲಹಂಕ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಯಲಹಂಕ ವಲಯ ಕಚೇರಿ ವ್ಯಾಪ್ತಿಯ ಶ್ರೀರಾಂಪುರ ನಗರದ ರಾಯಲ್ ಎನ್ಕ್ಲೇವ್ ಆರ್ಚ್‍ನ ಮುಂಭಾಗದ ರಸ್ತೆಯ ಅಮೃತಹಳ್ಳಿ ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ವಿಶ್ವನಾಥ್ ಮತ್ತು ನರಸಮ್ಮ ಎಂಬುವರು ಅಕ್ರಮವಾಗಿ ಮಾರಾಟ ಮಾಡಲು ಮದ್ಯದ ದಾಸ್ತಾನು ಮಾಡಿ ಸಾಗಾಣಿಕೆ ಮಾಡುತ್ತಿದ್ದ ವೇಳೆ  1.22 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದು, ಆ ಇಬ್ಬರನ್ನು ಬಂಧಿಸಿದ್ದಾರೆ.

ಸಾಗಾಣಿಕೆ ಮಾಡುತ್ತಿದ್ದ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ, 180 ಮಿಲಿಯ ಎಸ್‍ಎನ್‍ಜೆ ನಂ.1 ಎಕ್ಸ್ ಓ ಸ್ಟ್ರಾಂಗ್ ಬ್ರಾಂದಿಯ 22 ಬಾಟಲಿಗಳಲ್ಲಿ ಒಟ್ಟು 3.960 ಲೀಟರ್ ಶಂಕಿತ ನಕಲಿ ಮದ್ಯದ ಹೊಂದಿದ್ದು, ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಮಾಡಿದ್ದಾಗಿ ಅಬಕಾರಿ ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವರುಣೇಶ್, ರಘು. ಎನ್. ಎಂಬುವರು ಹೀರೊ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ   180 ಮಿಲಿಯ ಡೇ ಅಂಡ್ ನೈಟ್ ಮದ್ಯದ ಒಟ್ಟು 48 ಬಾಟಲಿಗಳಲ್ಲಿ 8.640 ಲೀಟರ್ ಶಂಕಿತ ನಕಲಿ ಮದ್ಯದ ದಾಸ್ತಾನನ್ನು ಹೊಂದಿದ್ದು, ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಮಾಡಿ ಆರೋಪಿಗಳನ್ನು ಮಾಲ್‌ ಸಹಿತ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ವಿರುದ್ಧ ಯಲಹಂಕ ವಲಯದ ಅಬಕಾರಿ ನಿರೀಕ್ಷಕ  ಕೆ.ಸಿ.ಸಿದ್ದಲಿಂಗಸ್ವಾಮಿ ಅವರು  ಮೊಕದ್ದಮೆ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ  ಎಂದು ಅಬಕಾರಿ ಉಪ ಆಯುಕ್ತ ಎಸ್. ಶ್ರೀನಾಥ್  ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಉತ್ತರ ವಲಯದ ಅಬಕಾರಿ ಉಪ ಆಯುಕ್ತ ಪಿ.ಎಸ್.ಶ್ರೀನಾಥ್ ಮತ್ತು ಯಶವಂತಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಜಿ.ವಿವೇಕ್  ಅವರ ಮಾರ್ಗದರ್ಶನದಂತೆ ಗಸ್ತು ಕಾರ್ಯಾಚರಣೆಯನ್ನು ಅಬಕಾರಿ ಉಪ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿ ನಡೆಸಿದರು.

Leave a Reply

error: Content is protected !!