NEWSದೇಶ-ವಿದೇಶಸಂಸ್ಕೃತಿ

ಅನಿವಾಸಿ ಕನ್ನಡಿಗರೊಂದಿಗೆ ಸಚಿವ ಸಿ.ಟಿ.ರವಿ ಆನ್‌ಲೈನ್‌ ಸಂವಾದ

 ವಿಶ್ವದ 38 ದೇಶಗಳ 125 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಗರೋತ್ತರ ದೇಶಗಳಲ್ಲಿ ನೆಲೆಸಿ ಬದುಕನ್ನು ಕಟ್ಟಿಕೊಂಡಿರುವ ಅನಿವಾಸಿ ಕನ್ನಡಿಗರೊಂದಿಗೆ ಕೊರೊನಾ ಲಾಕ್ಡೌನ್‍ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಜನರ ಸಮಸ್ಯೆಗಳನ್ನು ಸುದೀರ್ಘವಾಗಿ ಆಲಿಸಿ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವುದಾಗಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಸ್ವಯಂ ಗೃಹ  ಕ್ವಾರಂಟೈನ್‍ ನಲ್ಲಿದ್ದು ಆನ್‌ಲೈನ್‌ ಸಂವಾದದಲ್ಲಿ ಭರವಸೆ ನೀಡಿದರು.

ಇಂದು ಅವರು ಕುಮಾರ ಕೃಪಾ ಅತಿಥಿಗೃಹದಲ್ಲಿ ಕನ್ನಡಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನಿವಾಸಿ ಕನ್ನಡಿಗರಿಗೆ ಆಯೋಜಿಸಲಾಗಿದ್ದ ಆನ್ಲೈ ನ್‍ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ನಡೆದ 3 ಗಂಟೆಗಳ ಸುಧೀರ್ಘ ಆನ್ಲೈದನ್‍ ಸಂವಾದದಲ್ಲಿ ವಿಶ್ವದ ಸುಮಾರು 38 ದೇಶಗಳ 125ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರು/ ಕನ್ನಡ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ಸಮಸ್ಯೆಗಳನ್ನು ಮನನ ಮಾಡಿದರು. ಈ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು, ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಡನೆ ಚರ್ಚಿಸಿ, ಅನಿವಾಸಿ ಕನ್ನಡಿಗರೊಡನೆ ನೇರಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಶೀಘ್ರದಲ್ಲಿಯೇ ಸಹಾಯವಾಣಿ ಕೇಂದ್ರವನ್ನು ವಿಧಾನಸೌಧದಲ್ಲಿ ತೆರೆಯುವುದರ ಜೊತೆಗೆ ನೋಡಲ್‍ ಅಧಿಕಾರಿಯನ್ನು ನೇಮಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಗಲ್ಫ್ ದೇಶಗಳಲ್ಲಿ ನೆಲೆಸಿರುವಅನಿವಾಸಿ ಕನ್ನಡಿಗರಲ್ಲಿ ಬಹುಸಂಖ್ಯೆಯ ಕಾರ್ಮಿಕ ವರ್ಗದವರಾಗಿದ್ದು ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರು, ಗರ್ಭಿಣಿಯರು, ಹಿರಿಯ ನಾಗರೀಕರು, ವಿದ್ಯಾರ್ಥಿಗಳು ಕೊರೊನ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ಕಾರ್ಮಿಕರು ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವೈದ್ಯಕೀಯ ವೆಚ್ಚ ದುಬಾರಿಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ವಾಪಾಸ್ಸಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಪ್ರವಾಸಿ ವೀಸಾದಲ್ಲಿ ತೆರಳಿರುವ ಪ್ರವಾಸಿಗರು ವಾಪಾಸ್ಸಾಗುವ ಇರಾದೆ ಇದ್ದರೂ ಕೊರೊನಾದಿಂದಾಗಿ ಮರಳಲೂ ಆಗದೇ ಅಲ್ಲಿಯೇ ಉಳಿಯಲೂ ಆಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರನ್ನು ವಾಪಾಸ್ಸು ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿದೇಶಿ ಮಂತ್ರಾಲಯ ಹಾಗೂ  ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳೊಡನೆ ಸಂಪರ್ಕ ಸಾಧಿಸಿ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಸಚಿವರ ಸಂಕಷ್ಟಕ್ಕೀಡಾದ ಅನಿವಾಸಿ ಕನ್ನಡಿಗರು ಭಾರತೀಯ ಯೋಗಕ್ಷೇಮ ಸಮುದಾಯ ನಿಧಿಯಿಂದ ನೆರವು ಪಡೆಯಲು ಭಾರತೀಯ ರಾಯಭಾರಿ ಕಛೇರಿಯ ಸಂಪರ್ಕ ಹೊಂದಿರುವಂತೆ ಸಲಹೆ ಮಾಡಿದರು.

ಹೊರದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ಕರೆಸಿಕೊಳ್ಳುವುದು ಸಾಹಸವೇ ಸರಿ. ಸಣ್ಣ ಮೈಮರೆವು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು  ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಭಾರತ ಹೆಮ್ಮೆ ಪಡುವಂತೆ ಸಾಧ್ಯವಾಗುವ ರೀತಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ತೀವ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರ ಸದಾ ನಿಮ್ಮೊಂದಿಗಿದೆ, ಕೊರೊನಾವನ್ನು ನಿಯಂತ್ರಿಸಲು ನಾವು ನೀವೆಲ್ಲರೂ ಒಂದಾಗಿ ಕೆಲಸ ಮಾಡುವ ಮನೋಭೂಮಿಕೆಯನ್ನು ಬೆಳಸಿಕೊಳ್ಳೋಣ ಎಂದರು.

ಕನ್ನಡಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‍. ನಾಗಾಭರಣ, ಪ್ರವಾಸೋಧ್ಯಮ ಇಲಾಖೆಯ ನೋಡಲ್‍ ಅಧಿಕಾರಿ ರತ್ನಾಕರ ಸಂವಾದದಲ್ಲಿ ಪಾಲ್ಗೊಂಡಿದ್ದರು,

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!