Please assign a menu to the primary menu location under menu

NEWSನಮ್ಮಜಿಲ್ಲೆ

ಅಕ್ರಮ ಮದ್ಯಮಾರಾಟ ಅಡ್ಡಗಳ ಮೇಲೆ ದಾಳಿ-34 ಪ್ರಕರಣ ದಾಖಲು

20 ದಿನದಲ್ಲಿ 663 ಕಡೆ ತಪಾಸಣೆ l ಕಲಬುರಗಿ ಅಬಕಾರಿ ಉಪ ಆಯುಕ್ತ ಮಾಹಿತಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಈಗಾಗಲೇ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಮಾರ್ಚ್ 16 ರಿಂದ ಏಪ್ರಿಲ್ 6 ರವರೆಗೆ ಒಟ್ಟು 663 ಅಬಕಾರಿ ದಾಳಿ ನಡೆಸಿ 34 ಪ್ರಕರಣ ದಾಖಲಿಸಲಾಗಿದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ 279.840 ಲೀಟರ್ ಮದ್ಯ, 221.480 ಲೀ. ಬೀಯರ್, 524 ಲೀ, ಸೇಂಧಿ, 16 ಲೀ, ಕಳ್ಳಭಟ್ಟಿ ಸಾರಾಯಿ, 260 ಲೀ. ಬೆಲ್ಲದ ಕೊಳೆ ಮತ್ತು 1.750 ಸಿ.ಹೆಚ್. ಮತ್ತು 07 ವಾಹನಗಳನ್ನು ಜಪ್ತು ಮಾಡಲಾಗಿದೆ. 02 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇದುವರೆಗೆ 220 ಲೀಟರ್ ಸ್ಯಾನಿಟೈಸರ್‌ ಅನ್ನು ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ವಿತರಿಸಲಾಗಿದೆ.

ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮತ್ತು ನಕಲಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ ಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಆಯಾ ತಾಲೂಕುಗಳ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ತಾಲೂಕಿನ ಹೆಸರು, ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳ ಹೆಸರು ಹಾಗೂ ಅವರ ಮೊಬೈಲ್ ಸಂಖ್ಯೆ ವಿವರ ಇದೆ.

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಬಂಧಿಸಿದಂತೆ-ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಇವರ ಮೊಬೈಲ್ ಸಂಖ್ಯೆ 9449597145 ಹಾಗೂ ಅಬಕಾರಿ ಉಪ ನಿರೀಕ್ಷಕ ರಮೇಶ ಬಿರಾದಾರ ಇವರ ಮೊಬೈಲ್ ಸಂಖ್ಯೆ 9945369528.

ಕಲಬುರಗಿ, ಆಳಂದ, ಅಫಜಲಪುರ ಹಾಗೂ ಜೇವರ್ಗಿ ತಾಲೂಕು: ಅಬಕಾರಿ ಉಪ ಅಧೀಕ್ಷಕ ವಿಠ್ಠಲರಾವ ವಾಲಿ ಇವರ ಮೊಬೈಲ್ ಸಂಖ್ಯೆ 9449597146.

ಕಲಬುರಗಿ ತಾಲೂಕಿನ ವಲಯ-1ಕ್ಕೆ (ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ)- ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದುಕಣ್ಣ ಇವರ ಮೊಬೈಲ್ ಸಂಖ್ಯೆ 9449618814.

ಕಲಬುರಗಿ ತಾಲೂಕಿನ ವಲಯ-2ಕ್ಕೆ (ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ)- ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಇವರ ಮೊಬೈಲ್ ಸಂಖ್ಯೆ 9036944439.

ಆಳಂದ ಹಾಗೂ ಅಫಜಲಪುರ ತಾಲೂಕು-ಅಬಕಾರಿ ನಿರೀಕ್ಷಕ ಶ್ರೀಶೈಲ್ ಆವಜಿ ಇವರ ಮೊಬೈಲ್ ಸಂಖ್ಯೆ 9742872011.

ಜೇವರ್ಗಿ ತಾಲೂಕು: ಅಬಕಾರಿ ನಿರೀಕ್ಷಕ ವನೀತಾ ಸೀತಾಳೆ ಇವರ ಮೊಬೈಲ್ ಸಂಖ್ಯೆ 8095955545. ಚಿತ್ತಾಪೂರ, ಸೇಡಂ ಮತ್ತು ಚಿಂಚೋಳಿ ತಾಲೂಕು- ಅಬಕಾರಿ ಉಪ ಅಧೀಕ್ಷಕ ಗ್ಲಾಡಸನ್ ಸಂಜಯಕುಮಾರ ಇವರ ಮೊಬೈಲ್ ಸಂಖ್ಯೆ 9449597149.

ಚಿತ್ತಾಪೂರ ತಾಲೂಕು: ಅಬಕಾರಿ ನಿರೀಕ್ಷಕ ಓಂ ಪ್ರಕಾಶ ಇವರ ಮೊಬೈಲ್ ಸಂಖ್ಯೆ 9972921188. ಸೇಡಂ ತಾಲೂಕು: ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಇವರ ಮೊಬೈಲ್ ಸಂಖ್ಯೆ 9731287156.

ಚಿಂಚೋಳಿ ತಾಲೂಕು: ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಹನಗಂಡಿ ಇವರ ಮೊಬೈಲ್ ಸಂಖ್ಯೆ 9035897229.

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ