NEWSನಮ್ಮಜಿಲ್ಲೆ

ಅಬಕಾರಿ ಸನ್ನದ್ದು ಬಾರ್, ರೆಸ್ಟೋರೆಂಟ್ ಗ‌ಳ ವಿರುದ್ಧ FIR 

577 ದಾಳಿಗಳನ್ನು ನಡೆಸಿ, 44 ಅಬಕಾರಿ ಮೊಕದ್ದಮೆ ದಾಖಲು l 29 ಮಂದಿ ಬಂಧನ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ಮಾ. 24 ರಿಂದ  ಏ.14 ರವರೆಗೆ ಮದ್ಯದ ದಾಸ್ತಾನು ಮಾರಾಟ ನಿಷೇಧ ಮಾಡಿ ಮದ್ಯದಂಗಡಿ ಮುಚ್ಚಲಾಗಿತ್ತು. ಆದರೂ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .

ಜಿಲ್ಲೆಯ ತುಮಕೂರು ತಾಲೂಕು ಮಲ್ಲಸಂದ್ರದಲ್ಲಿರುವ ಗಣೇಶ್ ಬಾರ್ ಅಂಡ್ ರೆಸ್ಟೋರೆಂಟ್, ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿಯಲ್ಲಿರುವ ಹನುಮನ್ ವೈನ್ಸ್, ಕುಣಿಗಲ್ ತಾಲೂಕು ಉಜನಿ ಗ್ರಾಮದಲ್ಲಿರುವ ವೆಂಕಟೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ ಸನ್ನದ್ದುಗಳ ಮಾಲೀಕರು ಸನ್ನದ್ದು ಷರತ್ತು ಉಲ್ಲಂಘಿಸಿ ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್  ಈ ಸನ್ನದ್ದುಗಳನ್ನು ಅಮಾನತು ಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಟ ಕಳ್ಳಬಟ್ಟಿ, ನಕಲಿ ಮದ್ಯ, ಸೇಂದಿ ಮುಂತಾದ ಅಬಕಾರಿ ಅಕ್ರಮಗಳ ನಡೆಯದಂತೆ ಕಟ್ಟೇಚ್ಚರವಹಿಸಿದ್ದು, ವಲಯಮಟ್ಟದಲ್ಲಿ ಹಗಲು ಮತ್ತು ರಾತ್ರಿ ಪಾಳಿ ಗಸ್ತು ತಂಡಗಳನ್ನು ರಚಿಸಿ, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಸತತ ಕಾರ್ಯಚಾರಣೆ ಮೂಲಕ 577 ದಾಳಿಗಳನ್ನು ನಡೆಸಿ, 44 ಅಬಕಾರಿ ಮೊಕದ್ದಮೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 29 ಆರೋಪಿಗಳನ್ನು ಬಂಧಿಸಿ, 2344 ಲೀಟರ್ ಮದ್ಯ, 391 ಲೀ. ಬಿಯರ್, 1 ಕಾರು, 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 3 ಮೆಥನಾಲ್ ಘಟಕಗಳಿದ್ದು, ಈ ಘಟಕಗಳ ಮೇಲೆ ತೀವ್ರ ನಿಗಾವಣೆ ವಹಿಸಲಾಗಿದೆ. ಮದ್ಯ ವ್ಯಸನಿಗಳು ಮೆಥನಾಲ್ ಸೇವಿಸಿ ಅಪಾರ ಸಾವು-ನೋವು ಸಂಭವಿಸುವ ಹಿನ್ನೆಲೆಯಲ್ಲಿ ಈ ಘಟಕಗಳಿಗೆ ಗಸ್ತಿನಲ್ಲಿರುವ ತಂಡ ಭೇಟಿ ನೀಡಿ, ಪರಿಶೀಲಿಸಿ, ದುರ್ಬಳಕೆ ಮಾಡದಂತೆ ಕಟ್ಟೇಚ್ಚರವಹಿಸಲಾಗಿದೆ. ಅಲ್ಲದೇ ಜಿಲ್ಲೆಯ ಹೆದ್ದಾರಿಗಳ ಮೂಲಕ ಹಾದು ಹೋಗುವ ಮೆಥನಾಲ್ ತುಂಬಿದ ಟ್ಯಾಂಕರ್ಗಳನ್ನು ಜಿಲ್ಲೆಯ ಹಿರಿಯೂರು ಮತ್ತು ಶಿರಾ ಸರಹದ್ದಿನಿಂದ ತುಮಕೂರು ನೆಲಮಂಗಲ ಸರಹದ್ದಿನವರೆಗೆ ಗಸ್ತಿನಲ್ಲಿರುವ ಅಬಕಾರಿ ತಂಡಗಳು ಎಸ್ಕಾರ್ಟ್ ಮೂಲಕ ಜಿಲ್ಲೆಯ ಸರಹದ್ದು ದಾಟಿಸುವ ಕೆಲಸ ಮಾಡುತ್ತಿವೆ.

ಕೋವಿಡ್-19 ಹರಡದಂತೆ ತಡೆಗಟ್ಟುವ ಸಲುವಾಗಿ ಅಬಕಾರಿ ಇಲಾಖೆ ವತಿಯಿಂದ ಹ್ಯಾಂಡ್/ಸ್ಯಾನಿಟೈಜರ್ಗಳನ್ನು ಜಿಲ್ಲೆಯ ಡಿಸ್ಟಿಲರಿಗಳಲ್ಲಿ ಉತ್ಪಾದಿಸಿ, 800 ಲೀಟರ್ ತುಮಕೂರು ಜಿಲ್ಲಾಡಳಿತಕ್ಕೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಲಾ 500 ಲೀಟರ್ ಹಾಗೂ ಶಿವಮೊಗ್ಗ ಜಿಲ್ಲಾಡಳಿತಕ್ಕೆ 300 ಲೀಟರ್ ಸ್ಯಾನಿಟೈಜರ್ಗಳನ್ನು ಪೂರೈಸಲಾಗಿದೆ.

ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ: 0816-2272922 ಸ್ಥಾಪಿಸಿದ್ದು, ದೂರು ಬಂದ ತಕ್ಷಣ ಅಬಕಾರಿ ತಂಡ ಕಾರ್ಯ ಪ್ರವೃತ್ತರಾಗಿ ದಾಳಿ ನಡೆಸಿ ಅಕ್ರಮಗಳನ್ನು ತಡೆಗಟ್ಟಲಾಗುತ್ತಿದೆ. ಸಾರ್ವಜನಿಕರು ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿಯ ದೂರವಾಣಿಗೆ ಸಂಪರ್ಕಿಸಿ ತಕ್ಷಣ ತಿಳಿಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು