ಬೆಂಗಳೂರು: ಆಟೋದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1 ಕೋಟಿ ರೂಪಾಯಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಅನುಮಾನಗೊಂಡು ಆಟೋ ಒಂದನ್ನು ತಪಾಸಣೆ ಮಾಡುತ್ತಿದ್ದಾಗ ಬರೋಬ್ಬರಿ 1 ಕೋಟಿ ರೂ. ಪತ್ತೆಯಾಗಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಈ 1 ಕೋಟಿ ರೂ. ಹಣವನ್ನ ಜಪ್ತಿ ಮಾಡಿದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಣ ಸಾಗಿಸುತ್ತಿದ್ದ ಸುರೇಶ್ ಮತ್ತು ಪ್ರವೀಣ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಈ ಹಣ ರಾಜೇಶ್ ಎಂಟರ್‌ಪ್ರೈಸಸ್ ಗೆ ಸೇರಿದೆ ಎಂದು ಇಬ್ಬರು ಹೇಳಿದ್ದಾರೆ. ಹಣದ ಮೂಲದ ಬಗ್ಗೆ ಅನುಮಾನಗೊಂಡ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಸಿ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.
ಹಣದ ಮೂಲ ಯಾವುದು? ಎಲ್ಲಿಂದ ತರಲಾಗುತ್ತಿತ್ತು ಹೀಗೆ ಹಲವಾರು ಆಯಾಮಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈಗ ವಿಚಾರಣೆ ಆರಂಭಿಸಿದ್ದಾರೆ. ಆಟೋ ಕೆಟ್ಟು ನಿಂತಿದ್ದ ವೇಳೆ ಪೊಲೀಸರು ಪರಿಶೀಲಸಿದಾಗ ಈ 1 ಕೋಟಿ ರೂ. ಪತ್ತೆಯಾಗಿದೆ.