NEWSಬೆಂಗಳೂರು

ಆಳಂದಕ್ಕೆ ಹೋಗುತ್ತಿದ್ದ ಬಸ್‌ ವಾಪಸ್‌ ಕರೆಸಿಕೊಂಡ ಡಿಸಿ – ಟಿಕೆಟ್‌ ಪಡೆದೂ 3ಗಂಟೆಗಳ ಕಾಲ ಪರದಾಡಿದ ಪ್ರಯಾಣಿಕರು

ವಿಜಯಪಥ ಸಮಗ್ರ ಸುದ್ದಿ

ಆಳಂದ (ಕಲಬುರಗಿ): ದೇವಲಗಾಣಗಾಪುರದಿಂದ ಆಳಂದಕ್ಕೆ ಸುಮಾರು 60 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ಅನ್ನು ಗಾಣಗಾಪುರ ರೈಲ್ವೇ ಗೇಟ್‌ ಬಸ್‌ನಿಲ್ದಾಣದಿಂದ ವಾಪಸ್‌ ಕರೆಸಿಕೊಂಡಿದ್ದು, ಇದರಿಂದ ಆಳಂದಕ್ಕೆ ಹೋಗಬೇಕಿದ್ದ ಸುಮಾರು 20 ಪ್ರಯಾಣಿಕರು 3 ಗಂಟೆಗೂ ಹೆಚ್ಚುಕಾಲ ಪರದಾಡಿದ ಘಟನೆ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಳಂದ ಘಟಕದ ಬಸ್‌ (KA 34 F 894 ) ಇಂದು (ಗುರುವಾರ) ಬೆಳಗ್ಗೆ ಸುಮಾರು 10.30ರಲ್ಲಿ ದೇವಲಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿತ್ತು. ಬಸ್‌ ಸುಮಾರು 15 ಕಿಲೋ ಮೀಟರ್‌ ದೂರ ಹೋಗುತಿದ್ದಂತೆ ಗಾಣಗಾಪುರದ ರೈಲ್ವೇ ಗೇಟ್‌ ಬಳಿ ಇರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮತ್ತೆ ವಾಪಸ್‌ ಅದು ಕೂಡ ಖಾಲಿಯಾಗಿ 15 ಕಿಮೀ ದೇವಲಗಾಣಗಾಪುರಕ್ಕೆ ವಾಪಸ್‌ ಹೋಗಿದೆ.

ಇನ್ನು ಇತ್ತ ದೇವಲಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿದ್ದ ಸುಮಾರು 20 ಜನ ಪ್ರಯಾಣಿಕರು ಟಿಕೆಟ್‌ ಕೂಡ ತೆಗೆದುಕೊಂಡಿದ್ದರು. ಆದರೆ, ಅವರನ್ನು ಗಾಣಗಾಪುರ ಬಸ್‌ನಿಲ್ದಾಣದಲ್ಲಿ ಏಕಾಏಕಿ ಇಳಿಸಿದ್ದು, ಇದರಿಂದ ಆಳಂದಕ್ಕೆ ಕೆಲಸದ ನಿಮಿತ್ತ ಮತ್ತು ಆಸ್ಪತ್ರೆ ಹಾಗೂ ನ್ಯಾಯಾಲಯಕ್ಕೆ ಹೋಗುತ್ತಿದ್ದ ಮಂದಿ ಪರದಾಡುವಂತಾಯಿತು.

ಬಸ್‌ ಟಿಕೆಟ್‌ ಪಡೆದರೂ 3 ಗಂಟೆ ಪರದಾಡಿದ ಪ್ರಯಾಣಿಕರು.

ಪ್ರಯಾಣಿಕರು ಪರದಾಡುತ್ತಿದ್ದರೆ ಇದಾವುದನ್ನು ಲೆಕ್ಕಿಸದ ಸಂಚಾರ ನಿಯಂತ್ರಕ (TC) ಅವರು ನನಗೆ ಕಲಬುರಗಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ವಾಪಸ್‌ ಕಳಿಸುವಂತೆ ಹೇಳಿದ್ದಾರೆ. ಹೀಗಾಗಿ ಮತ್ತೆ 1-2ಗಂಟೆಯಲ್ಲೇ ಈ ಬಸ್‌ ವಾಪಸ್‌ ಬರುತ್ತದೆ ಆಗ ನಾವು ಈ ಪ್ರಯಾಣಿಕರನ್ನು ಮತ್ತೆ ಇದೇ ಬಸ್‌ನಲ್ಲೇ ಕಳಿಹಿಸುತ್ತೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಇದರಿಂದ ಬೇಸತ್ತ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ನಾವು ಬಿಟ್ಟಿ ಏನು ಬಂದಿಲ್ಲ. ದೇವಲಗಾಣಗಾಪುರದಿಂದ ಆಳಂದಕ್ಕೆ ಟಿಕೆಟ್‌ ತೆಗೆದುಕೊಂಡು ಬಂದಿದ್ದೇವೆ. ನೀವೆ ನಮ್ಮ ಟಿಕೆಟ್‌ಗಳನ್ನು ನೋಡಿ ಎಂದು ಟಿಸಿ ಅವರ ವಿರುದ್ಧ ಕಿಡಿಕಾರಿದ್ದು, ನಮಗೆ ಬೇರೆ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದ್ದ ಟಿಸಿ ಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿದ್ದ ಮತ್ತೊಂದು ಬಸ್‌ಗೂ ನಮ್ಮನ್ನು ಹತ್ತಲು ಬಿಡಲಿಲ್ಲ ಎಂದು ಸಿಟ್ಟುಹೊರಹಾಕಿದರು.

ಅಲ್ಲದೆ ಈ ಸುಮಾರು 20 ಪ್ರಯಾಣಿಕರನ್ನು ದೇವಲಗಾಣಗಾಪುರಕ್ಕೆ ವಾಪಸ್‌ ಹೋಗಿದ್ದ ಬಸ್‌ (KA 34 F 894 ) ಗಾಣಗಾಪುರಕ್ಕೆ ಮತ್ತೇ ಬರುವವರೆಗೂ ಅಂದರೆ ಸುಮಾರು 3 ಗಂಟೆಗಳ ಕಾಲ ಬಸ್‌ ನಿಲ್ದಾಣದಲ್ಲೇ ಕಾಯುವಂತೆ ಮಾಡಿ ಬಳಿಕ ಅದೇ ಬಸ್‌ನಲ್ಲಿ ಆಳಂದಕ್ಕೆ ಕಳುಹಿಸಿದ್ದಾರೆ.

ಇದನ್ನು ಗಮನಿಸಿದರೆ, ಇಲ್ಲಿ ಪ್ರಯಾಣಿಕರಿಗೆ ಸೇವೆ ಕಲ್ಪಿಸುವ ಬದಲಿಗೆ ಅಧಿಕಾರಿಗಳು ಸರ್ವಾಧಿಕಾರಿಯಂತೆ ನಡೆದುಕೊಂಡಿರುವುದು ತಿಳಿಯುತ್ತದೆ. ಈ ರೀತಿ ಮಾಡಿರುವುದರಿಂದ ತಮ್ಮ ಕೆಲಸ ಕಾರ್ಯಗಳೆಲ್ಲ ಹಾಳಾದವು ಎಂದು ಅಸಮಾಧಾನ ಹೊರಹಾಕಿ ಮತ್ತು ಮೇಲಧಿಕಾರಿಗಳಿಗೆ ಶಾಪಹಾಕುತ್ತ ಆಳಂದಕ್ಕೆ ಪ್ರಯಾಣಿಕರು ಹೊರಟರು.

ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳ ಅಂಧದರ್ಬಾರ್‌ ಹೆಚ್ಚಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ. ಈ ರೀತಿ ಡಿಸಿ ನಡೆದುಕೊಂಡಿದ್ದರೆ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲ ಟಿಸಿ ಸುಳ್ಳು ಹೇಳಿದ್ದರೆ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ಟಿಸಿಯನ್ನು ಅಮಾನತು ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!