NEWSನಮ್ಮರಾಜ್ಯ

ಇಂದು ಮತ್ತೆ ಹತ್ತು ಮಂದಿಯಲ್ಲಿ ಸೋಂಕು ದೃಢ

ಮೈಸೂರಿನಲ್ಲಿ 38, ಬೆಂಗಳೂರಿನಲ್ಲಿ 65ಕ್ಕೇರಿದ ಸೋಂಕಿತ ಸಂಖ್ಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲಾಕ್‍ಡೌನ್ ಇದ್ದರೂ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತ್ತಿತಲೇ ಇದೆ. ಗುರುವಾರ (ಏ.9) ಒಂದೇ ದಿನ 10 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಕದಲ್ಲಿ ಒಟ್ಟು 191 ಮಂದಿಗೆ ಕೊರೊನಾ ಪಾಸಿಟಿವ್  ಇರುವುದು ದೃಢಪಟ್ಟಿದೆ.

ಬೆಳಗಾವಿಯ 50 ವರ್ಷದ ವ್ಯಕ್ತಿ, ಮೈಸೂರಿನ 55 ಹಾಗೂ 68 ವರ್ಷದ ವ್ಯಕ್ತಿ, ನಂಜನಗೂಡಿನ ಔಷಧ ಕಂಪನಿಯ ಉದ್ಯೋಗಿಯ ಸಹ ಪ್ರಯಾಣಿಕನಾಗಿದ್ದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ಬಾಗಲಕೋಟೆಯ 165ನೇ ರೋಗಿಯ 4 ವರ್ಷದ ಪುತ್ರ, 13 ವರ್ಷದ ಸಂಬಂಧಿಕರ ಗಂಡು ಮಗು ಮತ್ತು 9 ವರ್ಷದ ಹೆಣ್ಣುಮಗುವಿಗೂ ಸೋಂಕು ತಗುಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನ್ಯೂಡೆಲ್ಲಿಗೆ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 19 ವರ್ಷದ ಮಹಿಳೆ ಹಾಗೂ 27 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿರಿ ಭಾರತದಲ್ಲಿ 24 ಗಂಟೆಯಲ್ಲಿ 18ಮಂದಿ ಬಲಿ ಪಡೆದ ಕೊರೊನಾ

ಇನ್ನು ಮೈಸೂರಿನಲ್ಲಿ ದೃಢಪಟ್ಟಿರುವ ಮೂರು ಸೋಂಕಿತರು ನಂಜನಗೂಡಿನ ಜ್ಯುಬಿಲಿಯಂಟ್‌ನ ಸೋಂಕಿತರ ಸಂಪರ್ಕದಲ್ಲಿದ್ದವರು ಮತ್ತು ಬೆಂಗಳೂರಿನ ಇಬ್ಬರು ನ್ಯೂಡೆಲ್ಲಿ ತಬ್ಲೀಘಿ ಸಮಾವೇಶಕ್ಕೆ ಹೋಗಿ ಬಂದವರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

Leave a Reply

error: Content is protected !!