ಇಂದು ಮತ್ತೆ 10 ಮಂದಿಗೆ ಕೊರೊನಾ ಪಾಸಿಟಿವ್
ರಾಜ್ಯದಲ್ಲಿ ಒಟ್ಟು 418ಕ್ಕೇರಿದ ಸೋಂಕಿತರ ಸಂಖ್ಯೆ l ಮೃತರ ಸಂಖ್ಯೆ 17ಕ್ಕೆ ಏರಿಕೆ
ಬೆಂಗಳೂರು: ಇಂದು ಬೆಳಗ್ಗೆ 7 ಮಂದಿಗೆ ಕೊರೊನಾ ಪಾಸಿಟಿವ್ ಇದದ್ದು ಸಂಜೆವೇಳೆ10ಕ್ಕೆ ಏರಿದೆ, ಈ ಮೂಲಕ 418ಕ್ಕೇರಿದ ಸೋಂಕಿತರ ಸಂಖ್ಯೆ, ಅದರಲ್ಲಿ 112 ರಿಂದ 129ಕ್ಕೆ ಕೊರೊನಾ ಸೋಂಕಿನಿಂದ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ.
ವಿಜಯಪುರ ಮತು ಕಲಬುರಗಿಯಲ್ಲಿ ತಲಾ ಮೂರು, ನಂಜನಗೂಡಿನಲ್ಲಿ ಎರಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬೆಳಗಾವಿಯಲ್ಲಿ ಒಂದೊಂದು ಪ್ರಕರಣ ಕಂಡುಬಂದಿದೆ.
ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 418ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೆ 17ಮಂದಿ ಅಸುನೀಗಿದ್ದು, 272 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 129ಮಂದಿ ಗುಣಮುಖರಾಗಿದ್ದಾರೆ. ಅಂದರೆ ನಿನ್ನೆವರೆಗೆ ಇದ್ದ 280 ಮಂದಿಯಲ್ಲಿ ಇಂದು ಒಂದೇದಿನ 17 ಮಂದಿ ಮನೆಗೆ ಮರಳಿರುವುದರಿಂದ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಮತ್ತು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ನಾಗರಿಕರು ಕೂಡ ಅವರ ಶ್ರಮಕ್ಕೆ ಕೈಜೋಡಿಸುವ ಮೂಲಕ ಈ ವಿಶ್ವಮಾರಿ ಕೊರೊನಾವನ್ನು ದೇಶದಿಂದ ಬಡಿದೋಡಿಸಲು ಮುಂದಾಗಬೇಕು.
ದೇಶದಲ್ಲಿ 18658ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 18658 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 592 ಮಂದಿ ಮೃತಪಟ್ಟಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 24,82,556 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 1,70482 ಜನರು ಮೃತಪಟ್ಟಿದ್ದಾರೆ.
Related
4 Comments
Leave a Reply Cancel reply
You Might Also Like
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (77) ಇಂದು ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ಇತ್ತೀಚೆಗಷ್ಟೇ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಾಗಾಗಿ ಕಳೆದ 4...
ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ
ಬೆಳಗಾವಿ: ಕಾರಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ...
BMTC ಕಂಡಕ್ಟರ್: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ – ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನುತ್ತಿರುವ ಕಿರಾತಕ
ಬೆಂಗಳೂರು: ಎಂ.ಎಸ್.ಪಾಳ್ಯದಿಂದ-ಯಲಹಂಕ ಮಾರ್ಗದಲ್ಲಿ ಟಿಕೆಟ್ ಕೊಡುತ್ತಲೇ ಮುಗ್ದ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಾತನ ಅಸಲಿ ಮುಖ ಬಯಲಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ....
KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ, ಅಂದರೆ ಚಾಲಕ ನಿರ್ವಾಹಕರು ಪ್ರಾಮಾಣಿಕತೆ ಮೆರೆಯು ಮೂಲಕ ಇತರರಿಗೆ ಮಾದರಿಯಾಗುತ್ತಿರುವುದು ನಿರಂತರವಾಗಿದೆ. ಇದು ಒಂದು ರೀತಿ...
ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬಂಧನ
ಮೈಸೂರು: ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ದಲೈವಾಲ ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ...
ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್
ಬೆಂಗಳೂರು: ಯುವ ದಿನ, ಜನವರಿ 12 ರಂದು, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಜೀವನ ಮತ್ತು ಉಪದೇಶಗಳನ್ನು ಆಚರಿಸುತ್ತದೆ. ಅವರ ಉಪದೇಶಗಳು ಪೀಳಿಗೆಗಳನ್ನು ಪ್ರೇರೇಪಿಸುತ್ತಿವೆ ಎಂದು ಏಮ್ಸ್ ಮತ್ತು...
ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ
ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿಯಲ್ಲಿ) ನೀಡುವಂತೆ...
“ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು...
BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮೂವರು ಅಧಿಕಾರಿಗಳನ್ನೊಳಗಂಡ ಮೇಲ್ವಿಚಾರಣೆ ತಂಡಗಳನ್ನು ರಚಿಸಿ ವ್ಯವಸ್ಥಾಪಕ...
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ-2025 ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ವೃದ್ಧಿ ಬೆಂಗಳೂರು: ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ...
ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಲೋಕಸೇವಾ...
ವಿಜಯಪಥ ಕನ್ನಡ ನ್ಯೂಸ್ ತುಂಬ ಚೆನ್ನಾಗಿ ಬರುತ್ತಿದೆ. ಇನ್ನಷ್ಟು ಹೊಸತನವನ್ನು ಕೊಡುವ ಮೂಲಕ ನಿಮ್ಮ ಓದುಗರನ್ನು ರಂಜಿಸುವ ಮತ್ತು ಇನಷ್ಟು ನಿಖರವಾದ ಮಾಹಿತಿ ನೀಡುವ ಕಡೆ ಹೆಚ್ಚಿನ ಗಮನ ಕೊಡಬೇಕಿದೆ.
ಒಟ್ಟಾರೆ ಕನ್ನಡದಲ್ಲಿ ತಾಜಾ ಸುದ್ದಿಗಳಣ್ನು ಸ್ಪಷ್ಟತೆಯೊಂದಿಗೆ ನೀಡುತ್ತಿರುವುದಕ್ಕೆ ನಿಮಗೆ ಧನ್ಯವಾದ
ನಿಮ್ಮ ವಿಜಯಪಥ ಕನ್ನಡ ನ್ಯೂಸ್ ಹೊಸತನವನ್ನು ನೀಡಲು ಶ್ರಮಿಸುತ್ತಿದೆ. ಜತೆಗೆ ಕೊರೊನಾ ಸಂಬಂಧಿತ ಸುದ್ದಿಗಳನ್ನು ಕೆಲ ನಿಮಿಷ ಅಥವಾ ಗಂಟೆಗಳು ವಿಳಂವಾದರೂ ನಿಖರವಾದ ಸುದ್ದಿ ಕೊಡುವುದರಲ್ಲಿ ಮುಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ನಿಜವಾದ ಹೇಳಿಕೆ