NEWSನಮ್ಮರಾಜ್ಯ

ಇಂದು 15 ಮಂದಿಗೆ ಕೊರೊನಾ ಸೋಂಕು ದೃಢ

ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು (ಏ.13) 15 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,  ಒಟ್ಟು ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರ ಸೋಮವಾದ ಬೆಳಗಿನ ವರದಿಯನ್ನು ಬಿಡುಗಡೆ ಮಾಡಿದ್ದು, ಸಂಜೆ ಮತ್ತೊಂದು ವರದಿ ಬಿಡುಗಡೆ ಮಾಡಲಿದೆ. ಬೆಳಗಾವಿ ಮತ್ತು ಮಂಡ್ಯದಲ್ಲಿ ಒಬ್ಬನಿಂದ ಮೂವರಿಗೆ, ಬೀದರ್‌ನಲ್ಲಿ ಓರ್ವನಿಂದ ಇಬ್ಬರಿಗೆ ಕೊರೊನಾ ತಗುಲಿದೆ. ಇವರಿಗೆಲ್ಲ ನ್ಯೂಡೆಲ್ಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳ ಸಂಪರ್ಕದಿಂದಾಗಿ ಸೋಂಕು ಬಂದಿದೆ.

ನ್ಯೂಡೆಲ್ಲಿಗೆ ವ್ಯಾಪಾರಕ್ಕೆ ತೆರಳಿದ ಹುಬ್ಬಳ್ಳಿಯ ವ್ಯಕ್ತಿಯಿಂದಾಗಿ ಇಂದು 4 ಮಂದಿಗೆ ಸೋಂಕು ತಗುಲಿದೆ. ನ್ಯೂಡೆಲ್ಲಿಗೆ ಪ್ರಯಾಣ ಬೆಳೆಸಿದ ದೊಡ್ಡಬಳ್ಳಾಪುರ ಮತ್ತು ಉಸಿರಾಟದ ತೊಂದರೆ ಇರುವ ಬೆಂಗಳೂರಿನ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ರೋಗಿ 233 – 55 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.
ರೋಗಿ 234 – 36 ವರ್ಷದ ಧಾರವಾಡದ ವ್ಯಕ್ತಿ ರೋಗಿ 194ರ ಸಂಪರ್ಕ.
ರೋಗಿ 235 – 74 ವರ್ಷದ ವರ್ಷದ ವೃದ್ಧೆ, ರೋಗಿ 194ರ ಸಂಪರ್ಕ.
ರೋಗಿ 236 – 37 ವರ್ಷದ ಧಾರವಾಡದ ವ್ಯಕ್ತಿ, ರೋಗಿ 194ರ ಸಂಪರ್ಕ.

ರೋಗಿ 237 – 60 ವರ್ಷದ ಮಳವಳ್ಳಿಯ ವೃದ್ಧೆ, ಮಗನ(ರೋಗಿ 179) ಸಂಪರ್ಕ.
ರೋಗಿ 238 – 8 ವರ್ಷದ ಹೆಣ್ಣು ಮಗು, ರೋಗಿ 179ರ ಸಂಪರ್ಕ.
ರೋಗಿ 239 – 18 ವರ್ಷದ ಯುವಕ, ರೋಗಿ 179ರ ಸಂಪರ್ಕ.

ರೋಗಿ 240 – 27 ವರ್ಷದ ಬಾಗಲಕೋಟೆ ಮುಧೋಳ್ ಯುವಕ, ರೋಗಿ 164ರ ಸಂಪರ್ಕ.
ರೋಗಿ 241 – 16 ವರ್ಷದ ಬೀದರ್ ಬಾಲಕಿ, ರೋಗಿ 211ರ(ಸಹೋದರನ ಮಗಳು) ಸಂಪರ್ಕ.

ರೋಗಿ 243 – 20 ವರ್ಷದ ಬೆಳಗಾವಿಯ ಯುವಕ, ರೋಗಿ 149ರ ಸಂಪರ್ಕ.
ರೋಗಿ 244 – 14 ವರ್ಷದ ಬೆಳಗಾವಿಯ ಬಾಲಕ, ರೋಗಿ 149ರ ಸಂಪರ್ಕ.
ರೋಗಿ 245 – 45 ವರ್ಷದ ಬೆಳಗಾವಿ ವ್ಯಕ್ತಿ, ರೋಗಿ 149ರ ಸಂಪರ್ಕ.

ರೋಗಿ 246 – 39 ವರ್ಷದ ದೊಡ್ಡಬಳ್ಳಾಪುರದ ವ್ಯಕ್ತಿ, ದೆಹಲಿ ಪ್ರಯಾಣದ ಹಿನ್ನೆಲೆ.
ರೋಗಿ 247 – 62 ವರ್ಷದ ಬೆಂಗಳೂರಿನ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ