NEWSಕ್ರೀಡೆನಮ್ಮರಾಜ್ಯ

‘ಎಕ್ಸ್ ಎನ್ಸಿಸಿ ಯೋಗದಾನ್’ ಅಭಿಯಾನಕ್ಕೆ ಚಾಲನೆ

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಭಾಗಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಮತ್ತು ಗೋವಾ ಹಿರಿಯ ವಿಭಾಗದ  ಸ್ವಯಂಸೇವಕ ಮಹಿಳಾ ಎನ್ಸಿಸಿ ಕೆಡೆಟ್ ಗಳು ಕೊವಿಡ್ ಸಂತ್ರಸ್ತರಿಗಾಗಿ ಸಿದ್ಧಪಡಿಸಿರುವ ಅಗತ್ಯ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸುವ ‘ಎಕ್ಸ್ ಎನ್ಸಿಸಿ ಯೋಗದಾನ್’ ಕಾರ್ಯಕ್ರಮಕ್ಕೆ  ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಚಾಲನೆ ನೀಡಿದರು.

ನಗರದ ವ್ಹೀಲರ್ ರಸ್ತೆಯ ಎನ್ಸಿಸಿ ಅಧಿಕಾರಿಗಳ ಮೆಸ್ (ಕರ್ನಾಟಕ ಮತ್ತು ಗೋವಾ) ನಿರ್ದೇಶನಾಲಯದ ಆವರಣದಲ್ಲಿ ಅಗತ್ಯ ವಸ್ತುಗಳ ಕಿಟ್ಗಳಿದ್ದ ವಾಹನಗಳನ್ನು ಅವರು ಬೀಳ್ಕೊಟ್ಟರು. ಇದೇ ವೇಳೆ ದಿನಗೂಲಿ ನೌಕರರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಸಂತ್ರಸ್ತರಿಗೆ 200 ಆಹಾರ ಪೊಟ್ಟಣಗಳ ವಿತರಣೆ ಮಾಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, “ಕೊವಿಡ್ 19 ನಿಂದ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎನ್ಸಿಸಿ ನಿರ್ದೇಶನಾಲಯ ಅತ್ಯುತ್ತಮ ಕೆಲಸ ಮಾಡುತ್ತಿದೆ. ಸೋಂಕಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.  ಈ ಸಂಕಷ್ಟದ ಸಮಯದಲ್ಲಿ ಸ್ವಯಂಸೇವಕರಾಗಿ ನೆರವು ಒದಗಿಸಲು ಎನ್ಸಿಸಿ ಕೆಡೆಟ್ಗಳು ಮುಂದೆ ಬಂದಿದ್ದಾರೆ. ಸ್ವಂತ ಸಂಪನ್ಮೂಲದಿಂದ ದಿನಸಿ ಪದಾರ್ಥಗಳನ್ನು ಒದಗಿಸುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸಕ್ಕೂ ಮುಂದಾಗಿದ್ದಾರೆ,”ಎಂದು ಹೇಳಿದರು.

“ಸಾಮಾಜಿಕ ಅಂತರ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎನ್ಸಿಸಿ ಕೆಡೆಟ್ಗಳು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ನೆರವಾಗಬಹುದು. ಎನ್ಸಿಸಿ ನಿರ್ದೇಶನಾಲಯದ ಎಲ್ಲ ಸಾಮಾಜಿಕ ಕಾರ್ಯಗಳಿಗೆ  ಕರ್ನಾಟಕ ಸರ್ಕಾರದ ಬೆಂಬಲ ಇರುತ್ತದೆ,”ಎಂದು ಅವರು ಭರವಸೆ ನೀಡಿದರು.

“ವ್ಯಕ್ತಿಯಲ್ಲಿ ಶಿಸ್ತು, ಸಾಮರ್ಥ್ಯ ಹೆಚ್ಚಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಎನ್ಸಿಸಿ ಪಾತ್ರ ದೊಡ್ಡದು. ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಿರುವ ಎನ್ಸಿಸಿ ಕೆಡೆಟ್ಗಳ ಬಗ್ಗೆ ಹೆಮ್ಮೆ ಇದೆ.  ಒಬ್ಬ ಎನ್ಸಿಸಿ ಕೆಡೆಟ್ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖುಷಿ ಆಗುತ್ತಿದೆ. ಇಂಥ ಹಲವು ಒಳ್ಳೆಯ ಕಾರ್ಯಗಳಿಗೆ ಎನ್ಸಿಸಿ ವೇದಿಕೆ ಆಗಿರುವುದು ಶ್ಲಾಘನೀಯ,”ಎಂದರು.

5000 ಎನ್ಸಿಸಿ ಕೆಡೆಟ್ ಗಳ ಸಹಾಯ

ಸುಮಾರು 5000 ಎನ್ಸಿಸಿ ಕೆಡೆಟ್ಗಳು ಸಹಾಯವಾಣಿ ನಿರ್ವಹಣೆ, ಪರಿಹಾರ ವಸ್ತುಗಳು, ಔಷಧ , ಊಟ, ಅಗತ್ಯ ಸರಕುಗಳ ವಿತರಣೆ ಮತ್ತು ಸಮುದಾಯ ಸಹಾಯ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಎನ್ಜಿಒಗಳ ಸಹಕಾರದೊಂದಿಗೆ ರಾಜ್ಯದ ಇತರ ಸ್ಥಳಗಳಲ್ಲೂ ಆಹಾರ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಎನ್ಸಿಸಿ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕರಾದ ಏರ್ ಕಮಾಂಡರ್ ಲಲಿತ್ ಕುಮಾರ್ ಜೈನ್, ಪದಾಧಿಕಾರಿಗಳು, ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದ್ದರು.

Leave a Reply

error: Content is protected !!
LATEST
ಸಾವಿರ ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಚಾಲನೆ: ನೇಮಿರಾಜ್ ಕೃಷಿ ಸಚಿವರ ತವರು ನೆಲದಲ್ಲೇ ಕೊಬ್ಬರಿ ಮಾರಿದ ರೈತರ ಪರದಾಟ : ರೈತ ಸಂಘ ಕಿಡಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ- ಆಕ್ರೋಶ ಮಳೆ ನೀರ ನೇರವಾಗಿ ಒಳಚರಂಡಿಗೆ ಬಿಡುವವರ ವಿರುದ್ಧ ಜಲಮಂಡಳಿ ಕ್ರಮಕ್ಕೆ ಆಕ್ಷೇಪ: ಡಿಸಿಎಂ ಡಿಕೆಶಿಗೆ ಎಎಪಿ ಬಹಿರಂಗ ಪತ್ರ ಕಿಟಕಿ ಮೂಲಕ ನುಸುಳಿ ಹಣ ದೋಚುತ್ತಿದ್ದ ಖತರ್ನಾಕ್‌ ಅಕ್ಕ-ತಮ್ಮ ಅಂದರ್‌ KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ! ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ ಮಹರ್ಷಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ: ಸಚಿವ ನಾಗೇಂದ್ರ ಸ್ಪಷ್... ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಮಂತ್ರಿಯ ಸಂಪುಟದಿಂದ ಕಿತ್ತುಹಾಕಿ: ಎಎಪಿ KKRTC: ಡಬಲ್ ಡ್ಯೂಟಿ, ದೂರದ ಪ್ರಯಾಣಕ್ಕೆ ವಿಶ್ರಾಂತಿ ಕಡ್ಡಾಯ ಆದರೆ ದೇವದುರ್ಗ ಘಟಕದ ನೌಕರರಿಗೆ ಮರೀಚಿಕೆ!