CrimeNEWSದೇಶ-ವಿದೇಶವಿದೇಶ

ಕೀನ್ಯಾದ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ 47 ಕ್ಕೂ ಅಧಿಕ ಶವಗಳು ಪತ್ತೆ – ಸ್ವರ್ಗದ ಆಸೆಗೆ ಜೀವಂತ ಸಮಾಧಿ

ಜಮೀನಿನಲ್ಲಿ ಪತ್ತೆಯಾದ 47 ಶವಗಳು, ಭಯ ಹುಟ್ಟಿಸುತ್ತೆ ಈ ಸಾವಿನ ಹಿಂದಿರುವ ಕಾರಣ

ವಿಜಯಪಥ ಸಮಗ್ರ ಸುದ್ದಿ

ಕೀನ್ಯಾ: ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ.

ಹೌದು! ಕೀನ್ಯಾದಲ್ಲಿ ಪಾದ್ರಿಯೊಬ್ಬರ ಜಮೀನಿನಲ್ಲಿ ಬರೋಬ್ಬರಿ 47 ಶವಗಳು ಪತ್ತೆಯಾಗಿವೆ. ಒಂದೊಮ್ಮೆ ನೀವು ಸ್ವರ್ಗಕ್ಕೆ ಹೋಗಬಯಸುತ್ತೀರಿ ಎಂದರೆ ಉಪವಾಸವಿರಿ ಬಳಿಕ ಜೀವಂತ ಸಮಾಧಿಯಾಗಿ ಎಂದು ಪಾದ್ರಿ ಸಲಹೆ ನೀಡಿದ್ದರಂತೆ.

ಉಪವಾಸವಿರುವ ನಿಮ್ಮನ್ನು ಸಮಾಧಿ ಮಾಡಿದರೆ ಸ್ವರ್ಗಕ್ಕೆ ಹೋಗುತ್ತೀರಿ, ಯೇಸುವನ್ನು ಭೇಟಿಯಾಗುತ್ತೀರಿ ಎಂದು ಹೇಳಿದ್ದ ಕಾರಣ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ಕೀನ್ಯಾ ಪೊಲೀಸರು ಒಂದೇ ಕುಟುಂಬದ ಐವರ ಮೃತದೇಹಗಳನ್ನು ಸಮಾಧಿಯಿಂದ ತೆಗೆದಿದ್ದಾರೆ. ಇಲ್ಲಿಯವರೆಗೆ 65 ಸಮಾಧಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇನ್ನು ಯಾರಾದರೂ ಸಮಾಧಿಯೊಳಗೆ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಸಮಾಧಿಯನ್ನು ಅಗೆಯುತ್ತಿದ್ದಾರೆ. ಸಿಕ್ಕಿರುವ ಮೃತದೇಹಗಳಲ್ಲಿ ಮಕ್ಕಳೂ ಇದ್ದಾರೆ.

ಈ ವಿಷಯ ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಈ ವೇಳೆ ವಿಚಾರಣೆಗೆ ಒಳಪಟ್ಟ ಪಾದ್ರಿ ಆತ್ಮಹತ್ಯೆಗೆ ಅವರನ್ನು ಪ್ರೇರೇಪಿಸಲಿಲ್ಲ ಎಂದು ಹೇಳಿದ್ದಾರೆ. 2019ರಲ್ಲೇ ಚರ್ಚ್​ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲ ಮೃತ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಇನ್ನು ಇದರಿಂದ ಜನರು ಹಸಿವಿನಿಂದ ಸತ್ತರು ಎಂದು ಸಾಬೀತುಪಡಿಸಬಹುದು. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು. ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಚರ್ಚನ್ನು ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಪಾದ್ರಿಯ ಮೌಡ್ಯಕ್ಕೆ ಒಳಗಾದ 47ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಇದರಿಂದ ಕೀನ್ಯಾದಲ್ಲೂ ಸೂತಕದ ಛಾಯೆ ಮನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ