NEWSದೇಶ-ವಿದೇಶ

ಕರ್ನಾಟಕದಲ್ಲಿ ಮೂರು ಜಿಲ್ಲೆಗಳು ರೆಡ್‌ ಜೋನ್‌ಪಟ್ಟಿಯಲ್ಲಿ

ದೇಶಾದ್ಯಂತ 733 ಜಿಲ್ಲೆಗಳು ಹಸಿರು, ಕಿತ್ತಳೆ ಮತ್ತು ಕೆಂಪು ಪಟ್ಟಿಯಲ್ಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎರಡನೇ ಲಾಕ್ ಡೌನ್ ಮುಕ್ತಾಯದ ಹಂತದಲ್ಲಿರುವಂತೆಯೇ ಕೇಂದ್ರ ಸರ್ಕಾರ ಸೋಂಕಿನ ತೀವ್ರತೆ ಆಧಾರದ ಮೇಲೆ ಹಸಿರು, ಕಿತ್ತಳೆ ಮತ್ತು ಕೆಂಪು ಎಂಬ 3 ಪಟ್ಟಿ ಮಾಡಿದ್ದು, ದೇಶಾದ್ಯಂತ 733 ಜಿಲ್ಲೆಗಳನ್ನು ಈ 3 ಪಟ್ಟಿಯಾಗಿ ವಿಭಜಿಸಿದೆ.

ರಾಜ್ಯದ ಕೆಲ ಜಿಲ್ಲೆಗಳು ಮತ್ತು ರಾಜಧಾನಿ ಬೆಂಗಳೂರು ನಗರದ ವಿವಿಧೆಡೆ ಹೆಚ್ಚಿನ ಕೊರೊನಾ ಪ್ರಕರಣಗಳು ಪತ್ತೆಯಾಗಿರುವುದನ್ನು ಗಮನಿಸಿ ಅಂಥ ಪ್ರದೇಶವನ್ನು ರೆಡ್ ಜೋನ್ ಪಟ್ಟಿಗೆ ಸೇರಿಸಲಾಗಿದೆ. ದೇಶಾದ್ಯಂತ 733 ಜಿಲ್ಲೆಗಳನ್ನ ಈ 3 ಪಟ್ಟಿಗೆ ವಿಭಜಿಸಿದ್ದು,  ಕರ್ನಾಟಕದ ಬೆಂಗಳೂರು, ಬೆಂ. ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ರೆಡ್ ಜೋನ್ ಪಟ್ಟಿಯಲ್ಲಿವೆ. ಇದೇ ವೇಳೆ, ರಾಜ್ಯ ಸರ್ಕಾರ ಕೂಡ ತನ್ನದೇ ಕೆಂಪು ಪಟ್ಟಿ ಬಿಡುಗಡೆ ಮಾಡಿದೆ.

ಪ್ರಸ್ತತ ಸೋಂಕಿನ ತೀವ್ರತೆ ಆಧಾರದ ಮೇಲೆ ಪ್ರದೇಶವಾರು ಲಾಕ್ ಡೌನ್ ಸಡಿಲಿಕೆ ಆಗುವ ಸಾಧ್ಯತೆ ಇದ್ದು, ರೆಡ್ ಜೋನ್ ಇರುವ ಪ್ರದೇಶಗಳಲ್ಲಿ ಬಹುತೇಕ ಲಾಕ್ ಡೌನ್ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ನಗರ ಸೇರಿದಂತೆ ನಂಜನಗೂಡಿನ ನಂಜಿನಿಂದ ಬಳಲುತ್ತಿರುವ ಮೈಸೂರು, ತಬ್ಲೀಘಿ ಜಮಾತ್ ಸೋಂಕಿನಿಂದ ಬಳಲುತ್ತಿರುವ ಕಲಬುರ್ಗಿ ಮತ್ತು ವಿಜಯಪುರ ಸೇರಿದಂತೆ ಒಟ್ಟು 15 ಜಿಲ್ಲೆಗಳು ಕೆಂಪು ಪಟ್ಟಿಯಲ್ಲಿವೆ. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು  ಸೋಂಕು ಇರುವ ಪ್ರದೇಶಗಳನ್ನು ಗುರುತಿಸಿ ಪ್ರತ್ಯೇಕ ಕೆಂಪು ಪಟ್ಟಿ ಮಾಡಲಾಗಿದೆ.

ರೆಡ್ ಜೋನ್ ಜಿಲ್ಲೆಗಳು
ಬೆಂಗಳೂರು ನಗರ , ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್, ದಕ್ಷಿಣ ಕನ್ನಡ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು ಮತ್ತು ದಾವಣಗೆರೆ ರೆಡ್ ಜೋನ್‌ ನಲ್ಲಿವೆ.

ರಾಜಧಾನಿ15 ವಾರ್ಡ್ ಗಳು ರೆಡ್
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ 15 ವಾರ್ಡ್​ಗಳನ್ನು ಗುರುತಿಸಿ ರೆಡ್ ಜೋನ್‌ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಇಲ್ಲಿ ಅತೀ ಹೆಚ್ಚು ನಿಗಾ ವಹಿಸಲು ಅಧಿಕಾರಿಗಳು ಹೈಅಲರ್ಟ್‌ ಆಗಿದ್ದಾರೆ.

ರೆಡ್  ವಾರ್ಡ್​ಗಳು
ಪಾದರಾಯನಪುರ (ವಾರ್ಡ್ ನಂಬರ್ 135),  ಜಗಜೀವನರಾಮನಗರ (ವಾರ್ಡ್ 136), ಯಶವಂತಪುರ (ವಾರ್ಡ್ 37), ಹಗದೂರು (ವಾರ್ಡ್ 84), ವಸಂತನಗರ (ವಾರ್ಡ್ 93), ಬಾಪೂಜಿನಗರ (ವಾರ್ಡ್ 134), ಕೆ ಆರ್ ಮಾರ್ಕೆಟ್ (ವಾರ್ಡ್ 139), ಧರ್ಮರಾಯಸ್ವಾಮಿ ದೇವಸ್ಥಾನ (ವಾರ್ಡ್ 119), ಹಂಪಿನಗರ (ವಾರ್ಡ್ 133), ಚಾಮರಾಜಪೇಟೆ (ವಾರ್ಡ್ 140), ಹೊಂಬೇಗೌಡನಗರ (ವಾರ್ಡ್ 145), 189-ಹೊಂಗಸಂದ್ರ (ವಾರ್ಡ್ 189), ದೀಪಾಂಜಲಿನಗರ (ವಾರ್ಡ್ 158), ಜಯನಗರ ಪೂರ್ವ (ವಾರ್ಡ್170).

ಹೊಂಗಸಂದ್ರ ಮತ್ತು ಪಾದರಾಯನಪುರ ಬೆಂಗಳೂರಿನ ಪ್ರಮುಖ ಹಾಟ್ ಸ್ಪಾಟ್ ಎನಿಸಿವೆ. ಈ ಪೈಕಿ ಪಾದರಾಯನಪುರದಲ್ಲಿ 35 , ಹೊಂಗಸಂದ್ರದಲ್ಲಿ 29 ಮಂದಿ ಸೋಂಕಿತರಿದ್ದಾರೆ. ಹೀಗಾಗಿ ಪಾದರಾಯನಪುರದ ಸಮೀಪವೇ ಇರುವ ಜಗಜೀವನರಾಮನಗರ, ಚಾಮರಾಜಪೇಟೆ, ದೀಪಾಂಜಲಿ ನಗರಕ್ಕೂ ಸೋಂಕು ವ್ಯಾಪಿಸಿರುವುದು ಪತ್ತೆಯಾಗಿದೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!