Please assign a menu to the primary menu location under menu

NEWSದೇಶ-ವಿದೇಶ

ಕರ್ನಾಟಕ – ಮಹಾರಾಷ್ಟ್ರ ಗಡಿಭಾಗದಲ್ಲಿ  ಹೈ ಅಲರ್ಟ್‌

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ವಾಹನಗಳ ಸಂಚಾರ  ನಿಷೇಧ l ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳದಂತೆ  ತಡೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಉಪವಿಭಾಗಧಿಕಾರಿ ರವೀಂದ್ರ ಕಲಿಂಗನ್ನವರ ಬೋರಗಾಂವ ಚೆಕ್ ಪೋಸ್ಟಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು ಕರ್ನಾಟಕ – ಮಹಾರಾಷ್ಟ್ರದ ಗಡಿಭಾಗದಲ್ಲಿರುವ  ಬೋರಗಾಂವ ಪಟ್ಟಣದಲ್ಲಿ  ಚೆಕ್ ಪೋಸ್ಟ್ ನಿರ್ಮಿಸಿದ್ದು. ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವಂತಹ ವಾಹನಗಳ ಸಂಚಾರ  ನಿಷೇಧಿಸಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಜನರನ್ನು ಮಹಾರಾಷ್ಟ್ರ ರಾಜ್ಯಕ್ಕೆ ತೆರಳದಂತೆ  ತಡೆ ಹಿಡಿಯಲಾಗುತ್ತಿದೆ. ಒಂದೆಡೆಯಲ್ಲಿ ಮಹಾರಾಷ್ಟ್ರ ರಾಜ್ಯದ ದಲ್ಲಿ ಕೋವಿಡ್-೧೯  ಸೋಂಕಿನ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ  144 ಕಲಂ ಜಾರಿಯಲ್ಲಿದ್ದು,   ಸಾರ್ವಜನಿಕರು    ಅನಗತ್ಯವಾಗಿ ಮನೆಯಿಂದ ಹೊರಗಡೆಗೆ   ಪ್ರಯಾಣಿಸಬಾರದು ನಿಯಮ‌ ಉಲ್ಲಂಘಿಸಿ ಪ್ರಯಾಣ‌ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಚೆಕ್ ಪೋಸ್ಟನಲ್ಲಿರುವ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಈ ಚೆಕ್ ಪೋಸ್ಟನಲ್ಲಿ  ಬೋರಗಾಂವ  ಪ್ರಾಥಮಿಕ  ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ಹಾಗೂ ಸದಲಗಾ ಪೊಲೀಸ್‌ ಠಾಣೆಯ ಪೋಲಿಸ  ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬೋರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳಾದ ಡಾ. ಬೆಣ್ಣಿ ಮಾತನಾಡಿ, ಕೋವಿಡ್ 19 ಬಗ್ಗೆ ಭಯ ಬೇಡ ಏಚ್ಚರಿಕೆ  ಇರಲಿ ಸಾರ್ವಜನಿಕರು ಮನೆಯಿಂದ ಹೋರಗಡೆಗೆ ಹೊಗುವಾಗ  ಮುನ್ನೆಚ್ಚರಿಕೆಯಾಗಿ ಮಾಸ್ಕ ಹಾಗೂ ಸ್ಯಾನಿಟೈಸರಗಳನ್ನು ಬಳಕೆ ಮಾಡಬೇಕೆಂದು  ಸಲಹೆಗಳನ್ನು ನೀಡಿದರು.

ಚೆಕ್ ಪೋಸ್ಟ್ ನಲ್ಲಿ ಸ್ಕೀನೀಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ದಿನಬಳಕೆಗೆ ಅವಶ್ಯಕವಿರುವಂತಹ ತರಕಾರಿ, ಹಾಲಿನ ಹಾಗೂ ದಿನಸಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ದಿನದ  24×7 ಎಲ್ಲ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು. ವಾಹನದಲ್ಲಿರುವ  ಚಾಲಕರು ಹಾಗೂ ಕ್ಲಿನರ್ಗಳಿಗೆ  ಸ್ಕ್ರೀನಿಂಗ್  ಮುಖಾಂತರ ಪರೀಕ್ಷೆ ಮಾಡಲಾಗುತ್ತಿದೆ.

ಸಾರ್ವಜನಿಕರು ತಾತ್ಕಾಲಿಕವಾಗಿ ಪ್ರವಾಸಗಳನ್ನು ರದ್ದು ಮಾಡಬೇಕು ಕೋವಿಡ್  19 ಪ್ರಕರಣಗಳು ತಡೆಗಟ್ಟಲು ಸಾರ್ವಜನಿಕರು ಸ್ಪಂದಿಸಬೇಕು, ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಿದರೆ ಇದನ್ನು ನಿಯಂತ್ರಿಸಲು ಸಾಧ್ಯ ಏಂದು ಮಾಹಿತಿ ನೀಡಿದರು.

ಪಟ್ಟಣದಲ್ಲಿ ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿಕೊಂಡು ಸೋಂಕಿನ ಕುರಿತು ಮುಂಜಾಗ್ರತೆವಾಗಿ  ತೆಗೆದುಕೊಳ್ಳಬೇಕಾದ  ಕ್ರಮಗಳು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಮಾಡಿಸಲಾಗುತ್ತಿದ್ದು ಜನರು ಈ ಎಲ್ಲ ನಿಯಮಗಳನ್ನು ಪಾಲನೆ‌ಮಾಡಬೇಕೆಂದು ಅವರು ತಿಳಿಸಿದರು.

ಚಿಕ್ಕೋಡಿಯ ಉಪವಿಭಾಗಾಧಿಕಾರಿ ರವೀಂದ್ರದ   ಕರಲಿಂಗನ್ನವರ,  ತಹಶಿಲ್ದಾರ ಸುಭಾಶ ಸಂಪಗಾವಿ, ಸಿ.ಪಿ.ಐ ಆರ್.ಆರ್ ಪಾಟೀಲ  ಬೋರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ  ಡಾ. ಎಸ್ ಬೆಣ್ಣಿ, ಸದಲಗಾ ಪೊಲೀಸ್‌ ಸಬ್ ಇನ್ಸ್ಪೆಕ್ಟರ್ ಅನಿಲ ಕುಂಬಾರ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ