NEWSನಮ್ಮರಾಜ್ಯ

ಕಲಬುರಗಿ ಇಎಸ್ಐಸಿ, ಜಿಮ್ಸ್ ಆಸ್ಪತ್ರೆ‌‌ ಅವರಣದಲ್ಲಿ ಔಷಧ ಸಿಂಪರಣೆ

ಕೊರೊನಾ ಬಗ್ಗೆ ಮುನ್ನೆಚರಿಕೆ ಕ್ರಮ l ವೈರಸ್‌ ನಿಯಂತ್ರಣಕ್ಕೆ ಜಾಗೃತಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕೊರೊನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ  ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್ ಮತ್ತು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಮತ್ತು ಸುತ್ತಮುತ್ತ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಂಗಳವಾರ ಬೆಳಗ್ಗೆ ಡಿಸ್ ಇನ್ಫೆಕ್ಷನ್ ಔಷಧ ಸಿಂಪರಣೆ ಕಾರ್ಯ ನಡೆಯಿತು.

ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣವುಳ್ಳ ಡಿಸ್‍ಇನ್‍ಫೆಕ್ಷನ್ ಔಷಧಿ ಬೆಳಗ್ಗೆ ಸಿಂಪಡಿಸಲಾಯಿತು. ಸಾಯಂಕಾಲ ನೀರು ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವುಳ್ಳ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಸಹ ಮಾಡಲಾಗುತ್ತಿದೆ. ಈ ಅಸ್ಪತ್ರೆಗಳ ಆವರಣದ ಮತ್ತು ಸುತ್ತಮುತ್ತ ಪ್ರತಿ ದಿನವು ಔಷಧ ಸಿಂಪಡಿಸುವ ಕಾರ್ಯ ಮುಂದುವರಿಯಲಿದೆ.

ಕಲಬುರಗಿಯಲ್ಲಿ ಸಂಪೂರ್ಣವಾಗಿ ಕೊರೋನಾವನ್ನು ಹತೋಟಿಯಲ್ಲಿಡಲು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಿರ್ದೇಶನದಂತೆ ಈ ರೀತಿಯ ಔಷಧ ಸಿಂಪರಣೆ ಕಾರ್ಯ ಸೋಮವಾರದಿಂದ ಆರಂಭಗೊಂಡಿದೆ.

ಸೋಮವಾರ ನಗರದ ಪ್ರಮುಖ ರಸ್ತೆಗಳಾದ ಹುಮನಾಬಾದ್ ಬೇಸ್ -ಸೂಪರ್ ಮಾರ್ಕೆಟ್-ಜಗತ್ ವೃತ್ತ-ಸರ್ದಾರ ವಲ್ಲಭಭಾಯಿ ಪಟೇಲ್ -ರಾಷ್ಟ್ರಪತಿ ಚೌಕ್-ರಾಮ ಮಂದಿರ-ಹಳೇ ಜೇವರ್ಗಿ ರಸ್ತೆಯಲ್ಲಿ ಔಷಧಿ ಸಿಂಪಡಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ಅರ್.ಟಿ.ಓ.ಕ್ರಾಸ್-ಖರ್ಗೆ ಪೆಟ್ರೋಲ್ ಪಂಪ್-ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ವರೆಗೆ ಸಿಂಪಡಿಸಲಾಯಿತು.

ಕಂಟೇನ್ ಮೆಂಟ್ ಝೋನ್ ನಲ್ಲಿ ಇಂದು ಸಿಂಪರಣೆ: ನಗರದಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಗಳ ವಾಸಸ್ಥಾನಗಳಾದ ಕಲಬುರಗಿಯ ವಾರ್ಡ್ ನಂ.14 ಮತ್ತು 30 ರಲ್ಲಿ ಮಂಗಳವಾರ ಔಷಧ ಸಿಂಪರಣೆ ಜೊತೆ ಸ್ಯಾನಿಟೈಸರ್‌ ಔಷಧ ಸಿಂಪರಣೆ‌ ಸಹ ನಡೆಯಲಿದೆ. ಮುಂದಿನ ಒಂದು ತಿಂಗಳು ಕಾಲ ನಗರದೆಲ್ಲೆಡೆ ಈ ರೀತಿಯ ನಿರಂತರ ಔಷಧ ಸಿಂಪರಣೆ ಕಾರ್ಯ ಮುಂದುವರೆಯಲಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ತಿಳಿಸಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ