NEWSಸಿನಿಪಥ

ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ನಯನಾ ಈಗೇನುಮಾಡುತ್ತಿದ್ದಾರೆ ಗೊತ್ತಾ? 

ವಿಜಯಪಥ ಸಮಗ್ರ ಸುದ್ದಿ

ಭಾರತದ ಜನಪ್ರಿಯ ವರ್ಣ ಚಿತ್ರಗಾರ ರಾಜಾ ರವಿವರ್ಮ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅವರು ಬರೆದಂತಹ ಒಂದೊಂದು ಚಿತ್ರಗಳು ಇಂದು ಜೀವಂತವಾಗಿವೆ. ಅವರು ಬರೆದ ಸುಂದರ ಕಲಾಕೃತಿಗೆ ಮನ ಸೋಲದವರಿಲ್ಲ. ತಮ್ಮ ಕಲಾಕುಂಚದಿಂದ ನಿರ್ಜೀವ ವಸ್ತುವಿಗೂ ಜೀವ ಭರಿಸುವ ಶಕ್ತಿ ರಾಜ ರವಿವರ್ಮರಿಗಿತ್ತು. ಅಂದ ಹಾಗೇ ಈಗ್ಯಾಕೆ ರಾಜಾ ರವಿವರ್ಮನ ವಿಚಾರ ಎಂದು ಕೇಳುತ್ತಿದ್ದೀರಾ?

ಕಿರುತೆರೆ ನಟಿಯೊಬ್ಬರು ಇದೀಗ ಹೊಸತಾಗಿ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದು ಅದನ್ನು ನೋಡಿದಾಗ ರವಿವರ್ಮನ ವರ್ಣಚಿತ್ರ ನೆನಪಾಗಿಯೇ ಆಗುತ್ತದೆ. ಅಂದ ಹಾಗೇ ರವಿವರ್ಮನ ಕಲಾಕೃತಿಯನ್ನು ಫೋಟೋಶೂಟ್ ಮೂಲಕ ಮರು ಸೃಷ್ಟಿ ಮಾಡಿಸಿಕೊಂಡಿರುವ ಆ ಕಿರುತೆರೆ ನಟಿ ಹೆಸರು ನಯನಾ ವೆಂಕಟೇಶ್.

ಕಳೆದ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನಯನಾ ತಮ್ಮ ಮಗುವಿಗೆ ಪ್ರಯಾನ್ ಭಾರದ್ವಾಜ್ ಎಂದು ನಾಮಕರಣವನ್ನು ಮಾಡಿದ್ದಾರೆ.

5 ತಿಂಗಳ ಮುದ್ದು ಹುಡುಗ ಪ್ರಯಾನ್ ಇನ್ ಸ್ಟಾ ಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾನೆ. ಲಿಟಲ್ ಎನ್ವಿಸ್ ಎಂಬ ಹೆಸರಿನ ಈ ಖಾತೆಗೆ ಈಗಾಗಲೇ ಮೂರುವರೆ ಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ.

ಚಿಕ್ಕಮ್ಮ, ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಯನಾ ಸದ್ಯ ಪತಿ ವೆಂಕಟೇಶ್ ಮತ್ತು ಮಗ ಪ್ರಯಾನ್ ರೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಾಯ್ತನವನ್ನು ಸಕತ್ ಎಂಜಾಯ್ ಕೂಡಾ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ