NEWSನಮ್ಮಜಿಲ್ಲೆ

ಕುಸುಗಲ್ಲ ಗ್ರಾಪಂ ಕಾರ್ಯಪಡೆಯಿಂದ ಕೊರೊನಾ ವಿರುದ್ಧ ಸಮರ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಮಹಾನಗರಗಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಗ್ರಾಮಾಂತರ ಪ್ರದೇಶಗಳಲ್ಲಿ ಹರಡದಂತೆ ತಡೆಯಲು ಪ್ರತಿ ಗ್ರಾಮ ಮಟ್ಟದಲ್ಲೂ ಕೊರೊನಾ ನಿಯಂತ್ರಣ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಶಿಕಾಂತ್ ಮಂಟೂರು ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲೂಕು ಕುಸುಗುಲ್ಲ ಗ್ರಾಮ ಪಂಚಾಯಿತಿಯ ಕಾರ್ಯಪಡೆ ಕೊರೊನಾ ವಿರುದ್ಧ ಸಮರ ಸಾರಿದ್ದು, ನಮ್ಮ ನೇತೃತ್ವದಲ್ಲಿ ರಚಿಸಲಾಗಿರುವ ಕಾರ್ಯಪಡೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದೆ. ಕೊರೊನಾ ಕುರಿತು ಗ್ರಾಮಸ್ಥರಲಿ ಜಾಗೃತಿ, ಮನೆ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಗ್ರಾಮಸ್ಥರಿಗೆ ಮಾಸ್ಕ್ ಧರಿಸುವುದು. ಸ್ವಚ್ಚತೆ ಕಾಪಾಡುವುದು, ಸಾಮಾಜಿಕ ಅಂತರದ ಕುರಿತು ತಿಳುವಳಿಕೆ ನೀಡಲಾಗುತ್ತಿದೆ. ಶಾಲಾ ಮುಖ್ಯ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದಲ್ಲಿನ ಮಕ್ಕಳು, ಸ್ತ್ರೀಯರು ಹಾಗೂ ವಯಸ್ಸಾದವರ ಆರೋಗ್ಯದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ವಿವರಿಸಿದರು.

ಗ್ರಾಮದ ಜನರಿಗೆ ಆರೋಗ್ಯ ಸೇತು ಆಪ್‌ ಬಳಕೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಗ್ರಾಮದ ಪ್ರಮುಖ ಬೀದಿ ಹಾಗೂ ಎಲ್ಲಾ ಓಣಿಗಳನ್ನು ಹೈಡ್ರೋಕ್ಲೋರಿಫೈಡ್ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಗ್ರಾಮಕ್ಕೆ ಬೇರೆಡೆಯಿಂದ ಆಗಮಿಸಿದವರ ವಿವಿರ ಸಂಗ್ರಹಿಸಿ, ಹೊಮ್ ಕ್ವಾರಂಟೈನ್‍ನಲ್ಲಿ ಇರುವಂತೆ ತಿಳಿಸಲಾಗುತ್ತಿದೆ ಎಂದರು.

ಯಾವುದೇ ರೋಗ ಲಕ್ಷಣ ಕಂಡುಬಂದವರನ್ನು ಫೀವರ್ ಕ್ಲಿನಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ವೈರಸ್ ಗ್ರಾಮದಲ್ಲಿ ಹರಡದಂತೆ ಎಲ್ಲಾ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಡಿಒ ತಿಳಿಸಿದರು.

Leave a Reply

error: Content is protected !!