ಕೂಲಿ ಕಾರ್ಮಿಕರಿಗೆ ರಜೆಸಹಿತ ವೇತನ ಊಟ ಕೊಡಿ
ಮಾಲೀಕರಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ
ಮೈಸೂರು: ಜಿಲ್ಲೆಯಲ್ಲಿರುವ ಗುತ್ತಿಗೆದಾರರು ಹಾಗೂ ಡೆವಲಪರ್ಸ್ ಗಳು ಕೆಲಸಕ್ಕಾಗಿ ತಾವು ಕರೆತಂದ ಕೂಲಿ ಕಾರ್ಮಿಕರಿಗೆ ರಜೆಸಹಿತ ವೇತನ ಮತ್ತು ಊಟ, ವಸತಿ ಸೌಲಭ್ಯಗಳನ್ನು ನೀಡಿ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೆಸ್ ಬುಕ್ ಪೇಜ್ ಲೈವ್ ನಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯೂಬ್ಲಿಯನ್ ಕಾರ್ಖಾನೆಯಲ್ಲಿನ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಹರಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಐದು ಮಂದಿಗೆ ಕೊರೊನಾ ಸೋಂಕು ಪಾಸಿಟಿವ್ ಇರುವುದು ಭಾನುವಾರ ಕಂಡುಬಂದಿದ್ದು, ಅವರಿಗೆ ಹೇಗೆ ಹರಡಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ ಎಂದರು.
ಒಂದೇ ಕಡೆ ಹಲವು ಜನರಿಗೆ ಕೊರೊನಾ ಸೋಂಕು ಪತ್ತೆಯಾದ್ದರಿಂದ ನಂಜನಗೂಡನ್ನು ಕ್ಲಸ್ಟರ್ ಆಗಿ ಮಾಡಿಕೊಂಡು ಕೆಲವೊಂದು ನಿರ್ಬಂಧವನ್ನು ವಿಧಿಸಲಾಗಿದ್ದು, ತರಕಾರಿ, ಹಾಲು, ದಿನಸಿ ಹಾಗೂ ಔಷಧಿಗಳನ್ನು ವಿತರಿಸುವುದಕ್ಕೆ ಮಾತ್ರ ಹೋಗಿ ಬರಲು ಅನುಮತಿಯನ್ನು ನೀಡಲಾಗಿದೆ ಎಂದು ಹೇಳಿದರು.
ನಿರಾಶ್ರಿತರಿಗೆ ಸಹಾಯ ಮಾಡಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಸ್ವ ಇಚ್ಚೆಯಿಂದ ಸಹಾಯ ಮಾಡಲು ಕೋರುತ್ತಿದ್ದಾರೆ. ಆದರೆ ಇನ್ನೂ ಎರಡು ವಾರಗಳ ಕಾಲ ನಿಷೇಧಾಜ್ಞೆ ಇರುವುದರಿಂದ ಯಾರೂ ಕೂಡ ಹೊರಗೆ ಬರುವಂತಿಲ್ಲ. ಆಹಾರ ನೀಡಲು ಇಚ್ಛಿಸುವವರು ನಗರಪಾಲಿಕೆಯ ಗಮನಕ್ಕೆ ತಂದು ನಂತರ ನೀಡಬೇಕು ಎಂದು ಹೇಳಿದರು.
ರೈತರು ತಾವು ಬೆಳೆದ ತರಕಾರಿ, ಹಣ್ಣುಗಳು, ಇತರೆ ವಸ್ತುಗಳ ಹಾಳಾಗುತ್ತಿದ್ದು, ಇವುಗಳ ಸಾಗಾಣೆಕೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಲೋಡ್ ಮಾಡಲು ಅಗತ್ಯ ಕ್ರಮವಹಿಸಲಾಗಿದೆ. ಅಲ್ಲದೆ ರೈತರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಭಾನುವಾರ ಬೆಳಗ್ಗೆ 11.30 ಗಂಟೆಯ ವರೆಗೆ ಜಿಲ್ಲೆಯಲ್ಲಿ 2,486 ಜನರನ್ನು ನಿಗಾ ವಹಿಸಲಾಗಿದ್ದು, ಈವರೆಗೆ 776 ಮಂದಿಯನ್ನು ಹದಿನಾಲ್ಕು ದಿನಗಳ ಕಾಲ ಗೃಹ ಬಂಧನದಲ್ಲಿರಿಸಿ ಪರೀಕ್ಷಿಸಲಾಗಿದ್ದು, ಕೊರೊನಾ ಸೋಂಕು ಇರುವಿರುವುದಿಲ್ಲ. 1,702 ಹೋಮ್ ಐಸೋಲೇಶನ್ ನಲ್ಲಿದ್ದು, 8 ಕೊರೊನಾ ಸೋಂಕು ಇರುವವರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಗುಜರಾತ್ ಸಮಾಜದವರು ಯಾದವಗಿರಿಯಲ್ಲಿರುವ ತಮ್ಮ ಸಂಸ್ಥೆಯನ್ನು ಸೋಂಕು ಭಾದಿತ ವ್ಯಕ್ತಿಗಳ ನಿಗಾ ಕೇಂದ್ರವಾಗಿ ಬಳಸಿಕೊಳ್ಳುವಂತೆ ಹೇಳಿದ್ದಾರೆ. ಈ ಬಗ್ಗೆ ಚಿಂತಿಸಲಾಗುವುದು.
ಉತ್ತರಭಾರತದಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಜಾತಿ, ಧರ್ಮ, ಹಸರಿನಲ್ಲಿ ಅವಹೇಳನ ಮಾಡಲಾಗಿದೆ. ಇದು ಕಾನೂನಿನ ಪ್ರಕಾರ ಅಪರಾಧ. ಈ ನಡವಳಿಕೆ ವಿರುದ್ಧ ಕಾನೂನು ಕ್ರಮ ಜರಿಗಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಟೆಲಿ ಮೇಡಿಷನ್ ಮಾಡಿದ್ದು, ಇದಕ್ಕಾಗಿ ಸಹಾಯವಾಣಿಯನ್ನು ಮಾಡಲಾಗಿದೆ.080-47192219ಕ್ಕೆ ಕರೆ ಮಾಡಿ ವೈದ್ಯರು ಸ್ವ ಇಚ್ಛೆಯಿಂದ ಆಗಮಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬಹುದು. ಅಲ್ಲದೆ ಸರಗೂರಿನ ಜನಧ್ವನಿ 98.8 ಎಫ್.ಎಂ ಮೂಲಕ ಬೆಳಿಗ್ಗೆ 10 ಗಂಟೆಗೆ ಪ್ರತಿ ದಿನ ಟೆಲಿ ಮೆಡಿಸಿನ್ ಬಗ್ಗೆ ಮಾಹಿತಿ ನೀಡಲಾಗುತ್ತುದೆ ಎಂದು ತಿಳಿಸಿದರು.
ಮಾಂಸದ ಅಂಗಡಿಗಳಲ್ಲಿ ಜನಸಂದಣಿಯಾಗುತ್ತಿದ್ದು,ಈ ಬಗ್ಗೆ ದೂರುಗಳು ಕೇಳು ಬರುತ್ತಿದೆ. ಮಾಂಸದಂಗಡಿಯ ಮಾಲೀಕರು ತಮ್ಮ ಗ್ರಾಹಕರಿಗೆ ಗುಣಮಟ್ಟದ ಮಾಂಸವನ್ನು ಮನೆ ಮನೆಗೆ ತಲಿಪಿಸಲಿ. ಇಲ್ಲವಾದಲ್ಲಿ ಮುಚ್ಚಲಾಗುವುದು ಹೇಳಿದರು.
ಕೊರೊನಾ ಸೋಂಕು ಹರುವಿಕೆಯನ್ನು ತಡೆಯಲು ಸರ್ಕಾರದ ಸೂಚನೆಗಳನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಸರ್ಕಾರ ಹೇಳಿರುವ ನಿಯಮದಂತೆ ಸಾಮಾಜಿಕ ಅಂತರ ಕಾಯ್ದು ಅಗತ್ಯ ವಸ್ತುಗಳ ಖರೀದಿ ಮಾಡಿಕೊಳ್ಳುವಂತೆ ತಿಳಿಸಿದರು.
Related
You Might Also Like
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (77) ಇಂದು ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ಇತ್ತೀಚೆಗಷ್ಟೇ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಾಗಾಗಿ ಕಳೆದ 4...
ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ
ಬೆಳಗಾವಿ: ಕಾರಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ...
BMTC ಕಂಡಕ್ಟರ್: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ – ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನುತ್ತಿರುವ ಕಿರಾತಕ
ಬೆಂಗಳೂರು: ಎಂ.ಎಸ್.ಪಾಳ್ಯದಿಂದ-ಯಲಹಂಕ ಮಾರ್ಗದಲ್ಲಿ ಟಿಕೆಟ್ ಕೊಡುತ್ತಲೇ ಮುಗ್ದ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಾತನ ಅಸಲಿ ಮುಖ ಬಯಲಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ....
KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ, ಅಂದರೆ ಚಾಲಕ ನಿರ್ವಾಹಕರು ಪ್ರಾಮಾಣಿಕತೆ ಮೆರೆಯು ಮೂಲಕ ಇತರರಿಗೆ ಮಾದರಿಯಾಗುತ್ತಿರುವುದು ನಿರಂತರವಾಗಿದೆ. ಇದು ಒಂದು ರೀತಿ...
ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬಂಧನ
ಮೈಸೂರು: ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ದಲೈವಾಲ ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ...
ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್
ಬೆಂಗಳೂರು: ಯುವ ದಿನ, ಜನವರಿ 12 ರಂದು, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಜೀವನ ಮತ್ತು ಉಪದೇಶಗಳನ್ನು ಆಚರಿಸುತ್ತದೆ. ಅವರ ಉಪದೇಶಗಳು ಪೀಳಿಗೆಗಳನ್ನು ಪ್ರೇರೇಪಿಸುತ್ತಿವೆ ಎಂದು ಏಮ್ಸ್ ಮತ್ತು...
ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ
ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿಯಲ್ಲಿ) ನೀಡುವಂತೆ...
“ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು...
BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮೂವರು ಅಧಿಕಾರಿಗಳನ್ನೊಳಗಂಡ ಮೇಲ್ವಿಚಾರಣೆ ತಂಡಗಳನ್ನು ರಚಿಸಿ ವ್ಯವಸ್ಥಾಪಕ...
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ-2025 ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ವೃದ್ಧಿ ಬೆಂಗಳೂರು: ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ...
ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಲೋಕಸೇವಾ...