NEWSನಮ್ಮಜಿಲ್ಲೆ

ಕೂಲಿ ಕಾರ್ಮಿಕರಿಗೆ ರಜೆಸಹಿತ ವೇತನ ಊಟ ಕೊಡಿ

 ಮಾಲೀಕರಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲೆಯಲ್ಲಿರುವ ಗುತ್ತಿಗೆದಾರರು ಹಾಗೂ ಡೆವಲಪರ್ಸ್ ಗಳು ಕೆಲಸಕ್ಕಾಗಿ ತಾವು ಕರೆತಂದ ಕೂಲಿ ಕಾರ್ಮಿಕರಿಗೆ ರಜೆಸಹಿತ ವೇತನ ಮತ್ತು ಊಟ, ವಸತಿ ಸೌಲಭ್ಯಗಳನ್ನು ನೀಡಿ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೆಸ್ ಬುಕ್ ಪೇಜ್ ಲೈವ್ ನಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯೂಬ್ಲಿಯನ್ ಕಾರ್ಖಾನೆಯಲ್ಲಿನ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಹರಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಐದು ಮಂದಿಗೆ ಕೊರೊನಾ ಸೋಂಕು ಪಾಸಿಟಿವ್ ಇರುವುದು ಭಾನುವಾರ ಕಂಡುಬಂದಿದ್ದು, ಅವರಿಗೆ ಹೇಗೆ ಹರಡಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ ಎಂದರು.

ಒಂದೇ ಕಡೆ ಹಲವು ಜನರಿಗೆ ಕೊರೊನಾ ಸೋಂಕು ಪತ್ತೆಯಾದ್ದರಿಂದ ನಂಜನಗೂಡನ್ನು ಕ್ಲಸ್ಟರ್ ಆಗಿ ಮಾಡಿಕೊಂಡು ಕೆಲವೊಂದು ನಿರ್ಬಂಧವನ್ನು ವಿಧಿಸಲಾಗಿದ್ದು, ತರಕಾರಿ, ಹಾಲು, ದಿನಸಿ ಹಾಗೂ ಔಷಧಿಗಳನ್ನು ವಿತರಿಸುವುದಕ್ಕೆ ಮಾತ್ರ ಹೋಗಿ ಬರಲು ಅನುಮತಿಯನ್ನು ನೀಡಲಾಗಿದೆ ಎಂದು ಹೇಳಿದರು.

ನಿರಾಶ್ರಿತರಿಗೆ ಸಹಾಯ ಮಾಡಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಸ್ವ ಇಚ್ಚೆಯಿಂದ ಸಹಾಯ ಮಾಡಲು ಕೋರುತ್ತಿದ್ದಾರೆ. ಆದರೆ ಇನ್ನೂ ಎರಡು ವಾರಗಳ ಕಾಲ ನಿಷೇಧಾಜ್ಞೆ ಇರುವುದರಿಂದ ಯಾರೂ ಕೂಡ ಹೊರಗೆ ಬರುವಂತಿಲ್ಲ. ಆಹಾರ ನೀಡಲು ಇಚ್ಛಿಸುವವರು ನಗರಪಾಲಿಕೆಯ ಗಮನಕ್ಕೆ ತಂದು ನಂತರ ನೀಡಬೇಕು ಎಂದು ಹೇಳಿದರು.

ರೈತರು ತಾವು ಬೆಳೆದ ತರಕಾರಿ, ಹಣ್ಣುಗಳು, ಇತರೆ ವಸ್ತುಗಳ ಹಾಳಾಗುತ್ತಿದ್ದು, ಇವುಗಳ ಸಾಗಾಣೆಕೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಲೋಡ್ ಮಾಡಲು ಅಗತ್ಯ ಕ್ರಮವಹಿಸಲಾಗಿದೆ. ಅಲ್ಲದೆ ರೈತರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.

ಭಾನುವಾರ ಬೆಳಗ್ಗೆ 11.30 ಗಂಟೆಯ ವರೆಗೆ ಜಿಲ್ಲೆಯಲ್ಲಿ 2,486 ಜನರನ್ನು ನಿಗಾ ವಹಿಸಲಾಗಿದ್ದು, ಈವರೆಗೆ  776 ಮಂದಿಯನ್ನು ಹದಿನಾಲ್ಕು ದಿನಗಳ ಕಾಲ ಗೃಹ ಬಂಧನದಲ್ಲಿರಿಸಿ ಪರೀಕ್ಷಿಸಲಾಗಿದ್ದು, ಕೊರೊನಾ ಸೋಂಕು ಇರುವಿರುವುದಿಲ್ಲ. 1,702 ಹೋಮ್ ಐಸೋಲೇಶನ್ ನಲ್ಲಿದ್ದು, 8 ಕೊರೊನಾ ಸೋಂಕು ಇರುವವರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಗುಜರಾತ್ ಸಮಾಜದವರು ಯಾದವಗಿರಿಯಲ್ಲಿರುವ ತಮ್ಮ ಸಂಸ್ಥೆಯನ್ನು ಸೋಂಕು ಭಾದಿತ ವ್ಯಕ್ತಿಗಳ ನಿಗಾ ಕೇಂದ್ರವಾಗಿ ಬಳಸಿಕೊಳ್ಳುವಂತೆ ಹೇಳಿದ್ದಾರೆ. ಈ ಬಗ್ಗೆ ಚಿಂತಿಸಲಾಗುವುದು.

ಉತ್ತರಭಾರತದಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಜಾತಿ, ಧರ್ಮ, ಹಸರಿನಲ್ಲಿ ಅವಹೇಳನ ಮಾಡಲಾಗಿದೆ. ಇದು ಕಾನೂನಿನ ಪ್ರಕಾರ ಅಪರಾಧ. ಈ ನಡವಳಿಕೆ  ವಿರುದ್ಧ ಕಾನೂನು ಕ್ರಮ ಜರಿಗಿಸಲಾಗುವುದು ಎಂದರು.

ರಾಜ್ಯ ಸರ್ಕಾರ ಟೆಲಿ ಮೇಡಿಷನ್ ಮಾಡಿದ್ದು, ಇದಕ್ಕಾಗಿ ಸಹಾಯವಾಣಿಯನ್ನು ಮಾಡಲಾಗಿದೆ.080-47192219ಕ್ಕೆ ಕರೆ ಮಾಡಿ ವೈದ್ಯರು ಸ್ವ ಇಚ್ಛೆಯಿಂದ ಆಗಮಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬಹುದು. ಅಲ್ಲದೆ ಸರಗೂರಿನ ಜನಧ್ವನಿ 98.8 ಎಫ್.ಎಂ ಮೂಲಕ ಬೆಳಿಗ್ಗೆ 10 ಗಂಟೆಗೆ ಪ್ರತಿ ದಿನ ಟೆಲಿ ಮೆಡಿಸಿನ್ ಬಗ್ಗೆ ಮಾಹಿತಿ ನೀಡಲಾಗುತ್ತುದೆ ಎಂದು ತಿಳಿಸಿದರು.

ಮಾಂಸದ ಅಂಗಡಿಗಳಲ್ಲಿ ಜನಸಂದಣಿಯಾಗುತ್ತಿದ್ದು,ಈ ಬಗ್ಗೆ ದೂರುಗಳು ಕೇಳು ಬರುತ್ತಿದೆ. ಮಾಂಸದಂಗಡಿಯ ಮಾಲೀಕರು ತಮ್ಮ ಗ್ರಾಹಕರಿಗೆ ಗುಣಮಟ್ಟದ ಮಾಂಸವನ್ನು ಮನೆ ಮನೆಗೆ ತಲಿಪಿಸಲಿ. ಇಲ್ಲವಾದಲ್ಲಿ ಮುಚ್ಚಲಾಗುವುದು ಹೇಳಿದರು.

ಕೊರೊನಾ ಸೋಂಕು ಹರುವಿಕೆಯನ್ನು ತಡೆಯಲು ಸರ್ಕಾರದ ಸೂಚನೆಗಳನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಸರ್ಕಾರ ಹೇಳಿರುವ ನಿಯಮದಂತೆ ಸಾಮಾಜಿಕ ಅಂತರ ಕಾಯ್ದು ಅಗತ್ಯ ವಸ್ತುಗಳ ಖರೀದಿ ಮಾಡಿಕೊಳ್ಳುವಂತೆ ತಿಳಿಸಿದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ