NEWSಕೃಷಿನಮ್ಮರಾಜ್ಯ

ಕೇಂದ್ರದಿಂದ ನರೇಗಾಕ್ಕೆ 1861 ಕೋಟಿ ರೂ.ಬಿಡುಗಡೆ

ದಿನಗೂಲಿ ಕಾರ್ಮಿಕರ ಕೂಲಿಹಣವನ್ನು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರವು  2020-21 ನೇ ಸಾಲಿನಲ್ಲಿ ಮೊದಲನೇ ಕಂತಿನ  ಕೂಲಿ ವೆಚ್ಚಕ್ಕಾಗಿ ರೂ. 1039.97 ಕೋಟಿ  ಹಾಗೂ  ಸಾಮಗ್ರಿ ವೆಚ್ಚಕ್ಕಾಗಿ ರೂ. 821.62 ಕೋಟಿ ರೂ.ಗಳನ್ನು  ಏಪ್ರಿಲ್ 5 ರಂದು ಮಂಜೂರು ಮಾಡಿದೆ  ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಂದು ಅವರು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2020-21 ನೇ ಸಾಲಿಗೆ ಕೇಂದ್ರ ಸರ್ಕಾರವು 13 ಕೋಟಿ ಮಾನವ ದಿನಗಳ ಸೃಜನೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಕೂಲಿ ದರವನ್ನು ದಿನಕ್ಕೆ ರೂ. 249 ಗಳಿಂದ ರೂ. 275 ಗಳಿಗೆ ಹೆಚ್ಚಿಸಿದೆ ಎಂದು ಹೇಳಿದರು.

ಪ್ರಸ್ತುತ ಸಾಲಿನಲ್ಲಿ  6316 ಕೋಟಿ ರೂ. ಅನುದಾನ ಲಭ್ಯವಾಗುವುದು.  ಇದರಲ್ಲಿ              ರೂ. 3575 ಕೋಟಿ ಕೂಲಿ ವೆಚ್ಚಕ್ಕೆ ಲಭ್ಯವಿದೆ.     ಒಟ್ಟಾರೆ ಈ ಸಾಲಿಗೆ ಮೊದಲನೇ ಕಂತಿನಲ್ಲಿ ಕೇಂದ್ರ ಸರ್ಕಾರವು ರೂ. 1961.59 ಕೋಟಿ ಗಳನ್ನು ಮಂಜೂರು ಮಾಡಿದೆ.  ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದ್ದ ಮುಂಗಡ ಹಣ ರೂ. 81.80 ಕೋಟಿಗಳನ್ನು ಬಿಡುಗಡೆಗೆ ಮಂಜೂರು ಮಾಡಿದೆ.

ಕೂಲಿ ಬಾಬ್ತು ರೂ. 322.86 ಕೋಟಿ ಬ್ಯಾಂಕಿನಲ್ಲಿ ಪಾವತಿಗೆ ಬಾಕಿ ಉಳಿದಿದ್ದು, ಈ ಹಣವನ್ನು ಈ ಸಾಲಿಗೆ ಬಿಡುಗಡೆ ಮಾಡಿರುವ ರೂ. 1039.97 ಕೋಟಿ ಕೂಲಿ ಅನುದಾನದಿಂದ ಪಾವತಿಸಲಾಗುವುದು.  ಪಾವತಿ ನಂತರ ರೂ. 717.00 ಕೋಟಿ ಅನುದಾನವು ಉಳಿಯುವುದು.  ಯೋಜನೆಯ ಅನುಷ್ಠಾನಕ್ಕೆ ಅನುದಾನದ ಕೊರತೆ ಈ ಹಂತದಲ್ಲಿ ಇರುವುದಿಲ್ಲ.

ಕರೋನ ಲಾಕ್‍ಡೌನ್ ಕಾರಣದಿಂದಾಗಿ ನಗರ ಪ್ರದೇಶಗಳಾದ ಗ್ರಾಮೀಣ ಪ್ರದೇಶಗಳಿಗೆ ಕೂಲಿಕಾರರು ವ್ಯಾಪಕವಾಗಿ ವಲಸೆ ಬಂದಿದ್ದು, ಅವರಿಗೆ ವಿಳಂಬವಿಲ್ಲದೆ ಯೋಜನೆಯಡಿ ಕೆಲಸ ಒದಗಿಸಲು ಸೂಚಿಸಲಾಗಿದೆ.   ವೈಯುಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ 5 ಜನರಿಗಿಂತ ಕಡಿಮೆ ಕೂಲಿಕಾರರ ಗುಂಪುಗಳನ್ನು ಮಾಡಿ ಪರಸ್ಪರ ಸಾಕಷ್ಟು ಅಂತರವಿರುವಂತೆ ಕೆಲಸಕ್ಕೆ ನಿಯೋಜಿಸಲು ಗ್ರಾಮಪಂಚಾಯತಿಗಳಿಗೆ ತಿಳಿಸಲಾಗಿದೆ.

ಗ್ರಾಮೀಣ ನೈರ್ಮಲ್ಯ, ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ (ಕುರಿ/ದನದ ಶೆಡ್) ಅಂತಹ ವೈಯಕ್ತಿಕ ಕಾಮಗಾಗಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.

ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈ ತೊಳೆಯಲು ನೀರು ಹಾಗೂ ಸಾಬೂನು, ನೆರಳು, ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕೂಲಿ ಕಾರ್ಮಿಕರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.  ಯೋಜನೆಯ ಕೂಲಿಕಾರರನ್ನು   “The Building and other Construction workers (Regulation of Employment and conditions of service) Act 1996  ನೋಂದಣಿ ಮಾಡಲು ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ